ನವದೆಹಲಿ: ಇವಿಎಂ (EVM) ಸತ್ತಿದೆಯೇ ಅಥವಾ ಜೀವಂತವಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ನರೇಂದ್ರ ಮೋದಿ (Narendra Modi) ಅವರು ಪ್ರತಿಪಕ್ಷದ ನಾಯಕರನ್ನು ಲೇವಡಿ ಮಾಡಿದ್ದಾರೆ.
ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಎನ್‌ಡಿಎ ಸಂಸದರನ್ನು (NDA MP’s) ಉದ್ದೇಶಿಸಿ ಮಾತನಾಡಿದ ಅವರು, ಜೂನ್ 4 ರಂದು ಫಲಿತಾಂಶ ಹೊರಬೀಳುತ್ತಿರುವಾಗ ನಾನು ಕೆಲಸದಲ್ಲಿ ನಿರತನಾಗಿದ್ದೆ. ನಂತರ ಫೋನ್ ಕರೆಗಳು ಬರಲಾರಂಭಿಸಿದವು. ಆಗ ನಾನು ಒಬ್ಬರಲ್ಲಿ, ನಂಬರ್‌ಗಳು ಎಲ್ಲವೂ ಸರಿಯಾಗಿದೆ. ಇವಿಎಂ ಬದುಕಿದ್ಯಾ? ಸತ್ತಿದ್ಯಾ ಎಂದು ಕೇಳಿದೆ. ವಿರೋಧ ಪಕ್ಷಗಳು ಈ ಬಾರಿ ಇವಿಎಂ ಅಂತ್ಯಕ್ರಿಯೆ ಮಾಡುತ್ತಾರೆ ಎಂದು ನಾನು ಅಂದುಕೊಂಡಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ, ನಾವು ಸಾಧನೆ ಮಾಡಿದ್ದೇವೆ: ಎನ್‌ಡಿಎ ಕೊಂಡಾಡಿದ ಮೋದಿ
ಇವಿಎಂ ಅನ್ನು ವಿರೋಧ ಪಕ್ಷಗಳು ನಿರಂತರವಾಗಿ ದುರುಪಯೋಗಪಡಿಸಿಕೊಳ್ಳಲು ನಿರ್ಧರಿಸಿದರು. ಆದರೆ ಜೂನ್ 4ರ ಸಂಜೆ ಆಗುವಷ್ಟರಲ್ಲಿ ಅವರೆಲ್ಲ ಬಾಯಿ ಮುಚ್ಚಿಕೊಂಡರು. ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿ. ಇನ್ನು 5 ವರ್ಷ ಅವರು ಇವಿಎಂ ಬಗ್ಗೆ ಕೇಳುವುದಿಲ್ಲ ಅಂತ ಅಂದುಕೊಂಡಿದ್ದೇನೆ. ಆದರೆ 2029ರಲ್ಲಿ ಅವರು ಮತ್ತೆ ಇವಿಎಂ ಬಗ್ಗೆ ಪ್ರಶ್ನಿಸುತ್ತಾರೆ ಎಂದರು.ʼ
ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಸುಪ್ರೀಂ ಕೋರ್ಟ್ ಬಳಸಿಕೊಂಡು ಚುನಾವಣಾ ಆಯೋಗದಂತಹ ದೊಡ್ಡ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಅನುಮಾನಿಸುತ್ತಿದ್ದರು. ದೇಶ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉತ್ತಮ ಸಮಯ ಕಳೆದುಕೊಂಡ್ರೆ ಮತ್ತೆ ಸಿಗಲ್ಲ- ಮೋದಿ ಹೆಸರು ಅನುಮೋದಿಸಿದ ನಿತೀಶ್