ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಈಗ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಯಾವುದೇ ಈವೆಂಟ್ನಲ್ಲಿ ಕಾಣಿಸಿಕೊಳ್ಳದ ಕತ್ರಿನಾ ಬಗ್ಗೆ ಹೊಸ ವಿಚಾರವೊಂದು ಬಿಟೌನ್ ಗಲ್ಲಿನಲ್ಲಿ ಸದ್ದು ಮಾಡುತ್ತಿದೆ. ಕತ್ರಿನಾ ಕೈಫ್ ತಾಯಿಯಾಗಿದ್ದಾರೆ ಎಂಬ ಸುದ್ದಿ ಬಿಟೌನ್ನ ಗಲ್ಲಿ ಗಲ್ಲಿಯಲ್ಲಿ ಸೌಂಡ್ ಮಾಡುತ್ತಿದೆ.
Advertisement
ಬಾಲಿವುಡ್ನ ಅಡ್ಡಾದಲ್ಲಿ ಕತ್ರಿನಾ ತಾಯಿಯಾಗಿದ್ದಾರಂತೆ. ಜುಲೈ 16ಕ್ಕೆ ಕತ್ರಿನಾ ಕೈಫ್ ಹುಟ್ಟುಹಬ್ಬದಂದು ತಾವು ಅಮ್ಮನಾಗಿರುವ ವಿಚಾರ ತಿಳಿಸಲಿದ್ದಾರೆ ಎಂಬ ಸುದ್ದಿ ಕತ್ರಿನಾ ಮಾಹಿತಿ ಆಪ್ತ ಮೂಲಗಳಿಂದ ಕೇಳಿ ಬಂದಿದೆ. ಕಳೆದ ಡಿಸೆಂಬರ್ 9, 2021ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಹಸೆಮಣೆ ಏರಿದ್ದರು. ಈಗ ಕತ್ರಿನಾ ಗುಡ್ ನ್ಯೂಸ್ ಏಲ್ಲೆಡೆ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಸೋನಮ್ ಕಪೂರ್ ಗ್ರ್ಯಾಂಡ್ ಬೇಬಿ ಶವರ್ಗೆ ದಿನಗಣನೆ: ಗೆಸ್ಟ್ ಲಿಸ್ಟ್ ಔಟ್
Advertisement
ಕತ್ರಿನಾ ಪ್ರೆಗ್ನೆಂಟ್ ಸುದ್ದಿಗೆ ಪೂರಕವೆಂಬಂತೆ, ಇತ್ತೀಚೆಗೆ ನಡೆದ ಯಾವೊಂದು ಸಿನಿಮಾ ಈವೆಂಟ್ನಲ್ಲಿ ಕತ್ರಿನಾ ಭಾಗಿಯಾಗಿಲ್ಲ. ಕ್ಯಾಮೆರಾ ಕಣ್ಣಿನಿಂದ ದೂರವಿರುವ ಕತ್ರಿನಾ ಕುರಿತು ಪ್ರೆಗ್ನೆಂಟ್ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕತ್ರಿನಾ ತಾಯಿಯಾಗುತ್ತಿರುವ ಸುದ್ದಿ ಅಷ್ಟಕ್ಕೂ ನಿಜಾನಾ ಎಂಬುದನ್ನ ನಟಿಯ ಹುಟ್ಟುಹಬ್ಬದವೆರೆಗೂ ಕಾದುನೋಡಬೇಕಿದೆ.