ಜೈಲರ್, ಜವಾನ್ ಮ್ಯೂಸಿಕ್ ಡೈರೆಕ್ಟರ್ ಜೊತೆ ಕೀರ್ತಿ ಸುರೇಶ್ ಮದುವೆ? ನಟಿ ತಂದೆ ಸ್ಪಷ್ಟನೆ

Public TV
1 Min Read
keerthy suresh

ಹಾನಟಿ ಕೀರ್ತಿ ಸುರೇಶ್ (Keerthy Suresh) ಸಿನಿಮಾಗಿಂತ ಹೆಚ್ಚೆಚ್ಚು ಅವರ ಖಾಸಗಿ ವಿಚಾರವಾಗಿಯೇ ಹೆಚ್ಚೆಚ್ಚು ಟ್ರೆಂಡ್‌ನಲ್ಲಿದ್ದಾರೆ. ಇದೀಗ ಜೈಲರ್ (Jailer), ಜವಾನ್ ಸಿನಿಮಾದ ಸಕ್ಸಸ್‌ಫುಲ್ ಮ್ಯೂಸಿಕ್ ಡೈರೆಕ್ಟರ್ ಜೊತೆ ದಾಂಪತ್ಯ ಜೀವನಕ್ಕೆ ನಟಿ ಕೀರ್ತಿ ಸುರೇಶ್ ಕಾಲಿಡಲಿದ್ದಾರೆ. ಈ ಸುದ್ದಿ ನಿಜನಾ? ಈ ಬಗ್ಗೆ ಕೀರ್ತಿ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

Keerthy Suresh 2

30ರ ವಯಸ್ಸು ಗಡಿ ದಾಟಿರೋ ಕೀರ್ತಿ ಸುರೇಶ್‌ಗೆ ಈಗಲೂ ಚಿತ್ರರಂಗದಲ್ಲಿ ಡಿಮ್ಯಾಂಡ್ ಇದೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಚಾರ್ಮ್ ಉಳಿಸಿಕೊಂಡಿದ್ದಾರೆ. ಇದರ ಜೊತೆಗೆ ಮದುವೆ ಮ್ಯಾಟರ್ ಕೂಡ ಚಾಲ್ತಿಯಲ್ಲಿದೆ. ಜೈಲರ್, ಜವಾನ್ (Jawan) ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ (Anirudh Ravichander) ಜೊತೆ ಕೀರ್ತಿ ಮದುವೆಯಂತೆ (Wedding) ಹಾಗಂತ ಕೆಲ ದಿನಗಳಿಂದ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

keerthy suresh 4

ಈ ಬಗ್ಗೆ ಕೀರ್ತಿ ತಂದೆ ಮಾತನಾಡಿ, ಅನಿರುದ್ಧ ಜೊತೆ ಕೀರ್ತಿ ಮದುವೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ. ಮೇಲಾಗಿ ಇದು ಯಾರೋ ಸೃಷ್ಟಿಸಿದ ವದಂತಿಗಳು, ಈ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ತೋತಾಪುರಿ 2’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಶಿವರಾಜ್ ಕುಮಾರ್

ಕೆಲದಿನಗಳ ಹಿಂದೆ ಕೀರ್ತಿ ಸುರೇಶ್ ಮದುವೆ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮಿಸ್ಟರಿ ಮ್ಯಾನ್ ನಾನು ಪರಿಚಯಿಸುತ್ತೇನೆ. ಸಮಯ ಬಂದಾಗ ನಾನೇ ಹೇಳುತ್ತೇನೆ. ಸದ್ಯಕ್ಕೆ ಮದುವೆ ಬಗ್ಗೆ ಪ್ಲ್ಯಾನ್ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article