ಕಲಬುರ್ಗಿ: ಕುಟುಂಬ ರಾಜಕಾರಣವಿದ್ದಷ್ಟು ವಂಶ ವೃಕ್ಷ ಬೆಳೆಯುತ್ತದೆ. ಪರಸ್ಪರ ಹಿರಿಯರಿಗೆ ಗೌರವ ಸಿಗುತ್ತದೆ. ಮೋದಿ ಅವರು ಮಕ್ಕಳು ಮಾಡದಿದ್ರೆ ಅದು ನನ್ನ ತಪ್ಪಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ರೈತರು ಕಾಳು ಬೆಳೆದರೆ ಮಾರುವ ಕಾಳು ಬೇರೆ, ಬಿತ್ತನೆ ಕಾಳು ಬೇರೆ ಎಂದು ಇಟ್ಟುಕೊಳ್ಳುತ್ತೇವೆ. ಹಾಗೆಯೇ ಬಿಜೆಪಿ ಅವರಿಗೆ ಮೋದಿ ಅಭಿಮಾನವಿದ್ದರೆ ನಮಗೆ ದೇವೇಗೌಡ ಅಭಿಮಾನ. ಕುಟುಂಬ ರಾಜಕಾರಣದಿಂದ ಗೌರವ ಬೆಳೆಯುತ್ತದೆ. ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ ಇತ್ತು. ಇಂದಿರಾಗಾಂಧಿ ನಂತರ, ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲಿಲ್ಲವೇ? ಈಗ ಮೋದಿ ಅವರು ಮಕ್ಕಳು ಮಾಡದೇ ಇದ್ರೆ ಅದು ನನ್ನ ತಪ್ಪಾ ಅಂದು ಅಪಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಕಾಂಗ್ರೆಸ್ ಚಡ್ಡಿಯನ್ನು ದೇಶದ ಜನರೇ ಬಿಚ್ಚಿ ಕಳುಹಿಸಿದ್ದಾರೆ: ಆರಗ
Advertisement
Advertisement
ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್‌ನವರಿಗೆ ಕೈಮುಗಿದು ಕೇಳಿದ್ದೇವೆ ನಮಗೆ ಬೆಂಬಲಿಸಿ ಅಂತ. ಅಭ್ಯರ್ಥಿ ನಿಲ್ಲಿಸುವ ಮೊದಲೇ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಕೋಮವಾದಿ ಶಕ್ತಿ ಮಟ್ಟಹಾಕುವ ಇಚ್ಚೆ ಇದ್ದರೆ ನಮಗೆ ಸಹಾಯ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹುಚ್ಚ ಆತನಿಗೆ ಯಾವ ಆಸ್ಪತ್ರೆಯಲ್ಲೂ ಔಷಧಿ ಇಲ್ಲ: ಈಶ್ವರಪ್ಪ
Advertisement
Advertisement
ಪಠ್ಯಪುಸ್ತಕ ವಿಚಾರದಲ್ಲಿ ಬಸವಣ್ಣ, ಕುವೆಂಪು ಸೇರಿದಂತೆ ಅನೇಕರ ವಿಚಾರದಲ್ಲಿ ಅಪಮಾನ ನಡೆಯುತ್ತಿದೆ. ಹೀಗಿದ್ದೂ ಬೊಮ್ಮಾಯಿ ಅವರೇ, ಯಾಕೆ ಈ ತಪ್ಪು ಕೆಲಸ ಮಾಡುತ್ತಿದ್ದೀರಿ? ಬಸವ ಪರಂಪರೆಯಲ್ಲಿ ಹುಟ್ಟಿ ಯಾಕೆ ಈ ಅವಮಾನ ಮಾಡುತ್ತಿದ್ದೀರಿ? ಈ ಬಗ್ಗೆ ಕಮೀಟಿ ಮಾಡಿ ಅವರಿಗೆ ಶಿಕ್ಷೆಗೊಳಪಡಿಸಬೇಕು? ಎಂದು ಆಗ್ರಹಿಸಿದ್ದಾರೆ.
ಆಜಾನ್ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಹೋರಾಟದ ಬಗ್ಗೆ ಕಿಡಿ ಕಾರಿದ ಇಬ್ರಾಹಿಂ, ಪ್ರಮೋದ್ ಮುತಾಲಿಕ್‌ಗೆ ದೇವರು ಸದ್ಬುದ್ದಿ ನೀಡಲಿ. ಶ್ರೀರಂಗಪಟ್ಟಣದಲ್ಲಿ ಗಲಾಟೆ ಮಾಡಲು ಕೆಲವರು ತಪ್ಪು ಮಾಹಿತಿ ನೀಡ್ತಿದ್ದಾರೆ. ರಾಜ್ಯ ಸರ್ಕಾರ ಇಂತಹ ಕ್ಯಾಸೆಟ್‌ಗಳಿಗೆ ನಂಬಬಾರದು. ಅವರು ಮತೀಯ ಗಲಭೆಗೆ ಮುಂದಾಗಿದ್ದಾರೆ. ಚುನಾವಣೆ ಸಮೀಪ ಬಂದಾಗ ಮತೀಯ ಗಲೆಬೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
`ಎಲ್ಲ ಮಸೀದಿಯಲ್ಲಿ ಲಿಂಗ ಹುಡುಕೋದು ಬೇಡ’ ಅನ್ನೋ ಮೋಹನ್ ಭಾಗವತ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಭಾಗವತ್ ಅವರು ಹೇಳಿದ್ರೆ ಒಳ್ಳೆ ಮನಸ್ಸಿನಿಂದಲೇ ಹೇಳಿದ್ದಾರೆ ಅಂದುಕೊಂಡಿದ್ದೇನೆ. ದಯವಿಟ್ಟು ಭಾಗವತ್ ಅವರು ಸರ್ಕಾರಕ್ಕೆ ಇದನ್ನು ಹೇಳಬೇಕು. ಕೇವಲ ಹೇಳಿಕೆ ನೀಡಿ ಸುಮ್ಮನಾದರೆ ಸಾಲದು. ಆರ್‌ಎಸ್‌ಎಸ್‌ನಲ್ಲಿ ಇದೀಗ ದೇಶಭಕ್ತಿ ಉಳಿದಿಲ. ಕೇಶವಕೃಪಾ ಸಿದ್ದಾಂತವಿದೆ. ಆದರೆ ನಮ್ಮದು ಬಸವಕೃಪಾ ಐಡಿಯಾಲಜಿ ಇರೋದು ಎಂದು ಹೇಳಿದ್ದಾರೆ.