DistrictsKarnatakaLatestLeading NewsMain PostShivamogga

ಸಿದ್ದರಾಮಯ್ಯ, ಕಾಂಗ್ರೆಸ್ ಚಡ್ಡಿಯನ್ನು ದೇಶದ ಜನರೇ ಬಿಚ್ಚಿ ಕಳುಹಿಸಿದ್ದಾರೆ: ಆರಗ

Advertisements

ಶಿವಮೊಗ್ಗ: ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರ ಚಡ್ಡಿಯನ್ನು ದೇಶದ ಜನ ಬಿಚ್ಚಿ ಕಳುಹಿಸಿದ್ದಾರೆ. ಇನ್ನು ಅವರೇನು ಆರ್‌ಎಸ್‌ಎಸ್‌(RSS) ಚಡ್ಡಿ ಬಗ್ಗೆ ಮಾತನಾಡೋದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಿದ್ದರಾಮಯ್ಯನವರ ಚಡ್ಡಿ ಸುಡಿ ಅಭಿಯಾನಕ್ಕೆ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವತ್ತು ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ. ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ಅನ್ನು ಅಟ್ಟಾಡಿಸಿ ಓಡಿಸಿದ್ದಾರೆ. ಹಾಗಾಗಿ ಚಡ್ಡಿ ಸುಡುವ ಕಾರ್ಯಕ್ರಮ ಹಮ್ಮಿಕೊಂಡು ಓಡಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರ ಕಥೆಯೂ ಮುಗಿಯುತ್ತದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಹುಚ್ಚ ಆತನಿಗೆ ಯಾವ ಆಸ್ಪತ್ರೆಯಲ್ಲೂ ಔಷಧಿ ಇಲ್ಲ: ಈಶ್ವರಪ್ಪ

ಆರ್‌ಎಸ್‌ಎಸ್‌ನವರು ಯಾವಾಗಲೂ ಗುರಿಯಾಗುತ್ತಿರುವುದು ಕಾಂಗ್ರೆಸ್ ನ ಅಲ್ಪಸಂಖ್ಯಾತರ ಮತಬ್ಯಾಂಕ್ ಗಾಗಿ. ಆರ್‌ಎಸ್‌ಎಸ್‌ ದೇಶ ನಿರ್ಮಾಣ ಮತ್ತು ವ್ಯಕ್ತಿ ನಿರ್ಮಾಣ ಮಾಡುವ ಸಂಘಟನೆಯಾಗಿದೆ. ಈ ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವನಾಗಿರುವ ನಾನು ಕೂಡ ಆರ್‌ಎಸ್‌ಎಸ್‌ನವನಾಗಿದ್ದೇನೆ. ದೇಶದ ಇತರೆ ರಾಜ್ಯದ ಮುಖ್ಯಮಂತ್ರಿಗಳು ಆರ್‌ಎಸ್‌ಎಸ್‌ ನವರಾಗಿದ್ದಾರೆ. ಇಡೀ ದೇಶವೇ ಆರ್‌ಎಸ್‌ಎಸ್‌ ಅನ್ನು ಒಪ್ಪಿಕೊಂಡಿದೆ. ಹಾಗಾಗಿ ಆರ್‌ಎಸ್‌ಎಸ್‌ನ ವಿರುದ್ಧ ಮಾತನಾಡಿದಷ್ಟು ಎದುರಾಳಿಗಳು ಕುಗ್ಗುತ್ತಾರೆ ಎಂದು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ ಎಂದರು.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ನಡೆದ ಹಿಂದೂ ಸಂಘಟನೆಗಳ ಶ್ರೀರಂಗಪಟ್ಟಣ ಚಲೋ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲವೂ ಶಾಂತ ರೀತಿಯಲ್ಲಿ ನಡೆದಿದೆ. ಪೊಲೀಸರು ಬಹಳ ಬಂದೋಬಸ್ತ್ ಮಾಡಿದ್ದರು ಎಂದರು.

Leave a Reply

Your email address will not be published.

Back to top button