ನವದೆಹಲಿ: ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ (Delhi Air Pollution) ಹೆಚ್ಚುತ್ತಿರುವ ಹಿನ್ನೆಲೆ ಮೋದಿ ಸರ್ಕಾರದ (Modi Govt) ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದ್ದಾರೆ.
ಮಾಲಿನ್ಯ ವಿಚಾರವಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ವಾಯುಮಾಲಿನ್ಯ ನಿಯಂತ್ರಣದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿದೆ. ಕಳೆದ 12 ವರ್ಷಗಳಿಂದ ಪ್ರಧಾನಿ ಮೋದಿ ವಾಯುಮಾಲಿನ್ಯ ವಿಚಾರದಲ್ಲಿ ಕೇವಲ ಭರವಸೆ ನೀಡುತ್ತಿದ್ದಾರೆ. ದೆಹಲಿಯ 59 ವಾಯುಮಾಲಿನ್ಯ ಮಾಪನ ಕೇಂದ್ರಗಳ ಪೈಕಿ 36 ಕೇಂದ್ರಗಳಲ್ಲಿ ಪಿಎಂ 2.5 ಅಂಕಿಅಂಶಗಳು ಕಣ್ಮರೆಯಾಗಿವೆ. 2023ರಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಅಂದಾಜು 17,188 ಸಾವು ಸಂಭವಿಸಿವೆ. 2021ರಲ್ಲಿ ದೇಶಾದ್ಯಂತ ವಾಯುಮಾಲಿನ್ಯ ಸಂಬಂಧಿತ ಕಾರಣಗಳಿಂದ 5 ವರ್ಷದೊಳಗಿನ 1.69 ಲಕ್ಷಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಡಾ.ರಾಜ್ ಸಂಬಂಧಿ ಮನೆಯಲ್ಲಿ ಸ್ಪೋಟ ಕೇಸ್ – ಕಚ್ಚಾ ಬಾಂಬ್ ಅಲ್ಲ, ಪಟಾಕಿ ಸ್ಪೋಟ: ತಮಿಳುನಾಡು ಪೊಲೀಸರ ಸ್ಪಷ್ಟನೆ
ದೆಹಲಿಯ ಪರಿಸರ ಪರಿಹಾರ ನಿಧಿಯ 1,154 ಕೋಟಿ ಬಳಕೆಯಾಗದೆ ಉಳಿದಿದೆ. ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದಡಿ ಬಿಡುಗಡೆಯಾದ ಅನುದಾನದಲ್ಲಿ ದೆಹಲಿ ಬಳಸಿರುವುದು ಕೇವಲ ಶೇ.17ರಷ್ಟು. ದೆಹಲಿ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಸರ್ಕಾರಗಳಿಗೆ ಎರಡು ವಾರಗಳಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳ ಕುರಿತು ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಹಣ ಬಳಸಿ, ಮಾಲಿನ್ಯ ತಡೆದು, ನಿಯಮ ಜಾರಿಗೊಳಿಸಿ. ಶುದ್ಧ ಗಾಳಿ ಜನರ ಮೂಲಭೂತ ಹಕ್ಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಬ್ಯಾಂಕ್ ಆಫ್ ಬರೋಡಾಗೆ ಬಾಂಬ್ ಬೆದರಿಕೆ – ಭದ್ರತಾ ಪಡೆಗಳಿಂದ ತಪಾಸಣೆ
