ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (New Delhi) ಸಂಸತ್ ಮಾರ್ಗದಲ್ಲಿರುವ ಬ್ಯಾಂಕ್ ಆಫ್ ಬರೋಡಾ (Bank Of Baroda) ಶಾಖೆಗೆ ಬಾಂಬ್ ಬೆದರಿಕೆ (Bomb Threat) ಕರೆ ಬಂದಿದ್ದು, ಭದ್ರತಾ ಪಡೆಗಳು ತೀವ್ರ ತಪಾಸಣೆ ನಡೆಸಿವೆ.
ಬೆಳಗ್ಗೆ 11:35ರ ಸುಮಾರಿಗೆ ಬ್ಯಾಂಕ್ಗೆ ಬಾಂಬ್ ಬೆದರಿಕೆ ಬಂದಿರುವ ಕುರಿತು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭಿಸಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬ್ಯಾಂಕ್ ಆವರಣದಲ್ಲಿ ಪರಿಶೀಲನೆ ಆರಂಭಿಸಿದ್ದಾರೆ. ಇದನ್ನೂ ಓದಿ: 48 ಗಂಟೆ ನ್ಯಾಯಾಂಗ ಬಂಧನದಲ್ಲಿದ್ದರೆ ಸರ್ಕಾರಿ ನೌಕರ ಸ್ವಯಂ ಅಮಾನತು: ಸುಪ್ರೀಂ ಕೋರ್ಟ್
ಬ್ಯಾAಕ್ ಕಟ್ಟಡದ ಒಳಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮಾನಾಸ್ಪದ ವಸ್ತುಗಳು ಮತ್ತು ಸ್ಫೋಟಕಗಳಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಬೆದರಿಕೆ ಕರೆ ಮಾಡಿದ ವ್ಯಕ್ತಿ ಯಾರು ಮತ್ತು ಯಾವ ಉದ್ದೇಶದಿಂದ ಕರೆ ಮಾಡಿದ್ದಾನೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ 1.15 ಕೋಟಿ ಹವಾಲಾ ಹಣ ದರೋಡೆ ಕೇಸ್ – ಕಾರವಾರದ ಕಾನ್ಸ್ಟೇಬಲ್ ಅರೆಸ್ಟ್
