ತರಬೇತಿ ನಿರತ ಐಆರ್‌ಬಿ ಪೊಲೀಸ್ ಹೃದಯಾಘಾತದಿಂದ ಸಾವು

Public TV
1 Min Read
irb policeman 1

ವಿಜಯಪುರ: ತರಬೇತಿ ನಿರತ ಐಆರ್ ಬಿ (Indian Reserve Battalion) ಪೊಲೀಸ್ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

irb policeman 3

ರಾಜಕುಮಾರ ಗೋಟ್ಯಾಳ್ (42) ಮೃತ ಐಆರ್‌ಬಿ ಪೊಲೀಸ್. ಇವರು ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಬರಡೋಲ ಗ್ರಾಮದ ನಿವಾಸಿ. ಇವರು ತರಬೇತಿ ವೇಳೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

irb policeman

ರಾಜಕುಮಾರ ಅವರು ಕಳೆದ ನಾಲ್ಕು ತಿಂಗಳ ಹಿಂದೆ ತರಬೇತಿಗಾಗಿ ಜಾರ್ಖಂಡ್‍ಗೆ ತೆರಳಿದ್ದರು. ತರಬೇತಿ ವೇಳೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

irb policeman 2

ಇಂದು ರಾಜಕುಮಾರ ಪಾರ್ಥೀವ ಶರೀರ ಬರಡೋಲ ಗ್ರಾಮಕ್ಕೆ ಆಗಮಿಸಿತ್ತು. ಸ್ವಗ್ರಾಮ ಬರಡೋಲದಲ್ಲಿ ನೀರವ ಮೌನನದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ರಾಜಕುಮಾರ ಪಾರ್ಥೀವ ಶರೀರದ ಮೆರವಣಿಗೆ ಮಾಡಿ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿ ಕೊಡಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *