ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮಗಳು, ಇರಾ ಖಾನ್ ಅವರು ಸೀರೆಯುಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇರಾ ಅವರಿಗೆ ಅವರ ಬಾಯ್‍ಫ್ರೆಂಡ್ ಮುತ್ತು ಕೊಟ್ಟಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿವೆ.
Advertisement
ಇರಾ ಸ್ಯಾರಿಯಲ್ಲಿ ಮಿಂಚುತ್ತಿದ್ದಾರೆ. ಫೋಟೋದಲ್ಲಿ ಇರಾ ಅವರ ಬಾಯ್‍ಫ್ರೆಂಡ್ ಮುತ್ತು ಕೊಡುತ್ತಿರುವುದು ಸಖತ್ ಹೈಲೈಟ್ ಆಗಿದೆ. ಈ ಫೋಟೋಗೆ ನಾನಾ ರೀತಿಯ ಕಾಮೆಂಟ್‍ಗಳು ಬರುತ್ತಿವೆ. ಇರಾ ಸಖತ್ ಕ್ಯೂಟ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ನೂಪುರ್ ಶಿಖಾರೆ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ನೂಪುರ್ ಜೊತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ಈ ಮೊದಲು ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್
Advertisement
View this post on Instagram
Advertisement
1986ರಲ್ಲಿ ನಟಿ ರೀನಾ ದತ್ತ ಜೊತೆ ಅಮಿರ್ ಖಾನ್ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಪುತ್ರ ಜುನೈದ್, ಪುತ್ರಿ ಇರಾ ಜನಿಸಿದರು. 2002ರಲ್ಲಿ ಅಮಿರ್ ಮತ್ತು ರೀನಾ ಡಿವೋರ್ಸ್ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು. ಮೊದಲ ಪತ್ನಿಯ ಮಕ್ಕಳ ಜೊತೆ ಅಮಿರ್ ಖಾನ್ ಇಂದಿಗೂ ಚೆನ್ನಾಗಿಯೇ ಇದ್ದಾರೆ.
Advertisement
View this post on Instagram
ನಟನ ಮಗಳು ಎನ್ನುವ ಕಾರಣಕ್ಕೆ ಇರಾ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಯ್‍ಫ್ರೆಂಡ್ ನೂಪುರ್ ಶಿಖಾರೆ ವಿಚಾರದಲ್ಲಿ ಇರಾ ಖಾನ್ ಎಂದಿಗೂ ಮುಚ್ಚುಮರೆ ಮಾಡಿದವರಲ್ಲ. ಈ ಬಗ್ಗೆ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ದೇಹದ ತೂಕ ಮಿತಿ ಮೀರಿತ್ತು. ಈ ಬಗ್ಗೆಯೂ ಇತ್ತೀಚೆಗೆ ಬರೆದುಕೊಂಡಿದ್ದರು. ಈಗ ಅವರು ಬಾಯ್‍ಫ್ರೆಂಡ್ ಮುತ್ತು ಕೊಡುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.