ದುಬೈ: ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‍ಗೆ 2 ಹೊಸ ತಂಡಗಳ ಎಂಟ್ರಿಯಾಗಿದೆ. 2022ರ ಐಪಿಎಲ್‍ಗೆ ಆರ್‌ಪಿ ಸಂಜೀವ್ ಗೋಯೆಂಕಾ (ಆರ್‌ಪಿಎಸ್‌ಜಿ) ಸಮೂಹದ ಲಕ್ನೋ ತಂಡ ಮತ್ತು ಸಿವಿಸಿ ಕ್ಯಾಪಿಟಲ್ ಪಾರ್ಟ್‌ನರ್ಸ್ ಒಡೆತನದ ಅಹಮದಾಬಾದ್ ತಂಡಗಳು ಕಣಕ್ಕೆ ಇಳಿಯಲಿದೆ.
Advertisement
ದುಬೈನಲ್ಲಿ ನಡೆದ ಬಿಡ್‍ನಲ್ಲಿ ಅಹಮದಾಬಾದ್ ತಂಡವನ್ನು ಭಾರತದ ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಿವಿಸಿ ಗ್ರೂಪ್ 5,600 ಕೋಟಿ ರೂ. ಬಿಡ್ ಮಾಡಿದ್ದರೆ, ಆರ್‌ಪಿಎಸ್‌ಜಿ ಗ್ರೂಪ್ 7,090 ಕೋಟಿ ರೂ. ಲಕ್ನೋ ತಂಡವನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ಐಪಿಎಲ್‍ನ ಮುಂದಿನ ಸೀಸನ್‍ನಲ್ಲಿ 8 ತಂಡಗಳ ಬದಲಾಗಿ 10 ತಂಡಗಳು ಕಣಕ್ಕಿಳಿಯಲಿದೆ. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ
Advertisement
Advertisement
ಐಪಿಎಲ್‍ನ ಹೊಸ ತಂಡಗಳನ್ನು ಖರೀದಿಸಲು ಸಾಕಷ್ಟು ಹೆಸರಾಂತ ಉದ್ಯಮಿಗಳು ಮುಂದೆ ಬಂದಿದ್ದರೆ ಆದರೆ ಇದೀಗ ಅಧಿಕೃತವಾಗಿ ಸಿವಿಸಿ ಗ್ರೂಪ್ ಮತ್ತು ಆರ್‌ಪಿಎಸ್‌ಜಿ ಗ್ರೂಪ್ 2 ತಂಡಗಳನ್ನು ಖರೀದಿ ಮಾಡಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ
Advertisement
ಬಿಸಿಸಿಐ ಎರಡು ತಂಡಗಳ ಬಿಡ್ ಮೂಲಕ 10 ಸಾವಿರ ಕೋಟಿ ರೂ. ನಿರೀಕ್ಷಿಸಿತ್ತು. ಆದರೆ ಈಗ 2,690 ಕೋಟಿ ರೂ. ಹೆಚ್ಚುವರಿಯಾಗಿ ಗಳಿಸಿದೆ. ಅಹಮದಾಬಾದ್ ತಂಡ ಖರೀದಿಸಲು ಅದಾನಿ ಗ್ರೂಪ್ 5,000 ಕೋಟಿ ರೂ. ಬಿಡ್ ಮಾಡಿತ್ತು. ಇದನ್ನೂ ಓದಿ: ಆತ್ಮಿಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ
ಒಟ್ಟು 10 ತಂಡಗಳು ಇರುವ ಕಾರಣ ಐಪಿಎಲ್ ಟೂರ್ನಿಯ ಪಂದ್ಯಾಟಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ. ಜೊತೆಗೆ ಎಲ್ಲಾ ಆಟಗಾರರ ಹರಾಜು ಪ್ರಕ್ರಿಯೆಯ ಮೂಲಕ ತಂಡಗಳ ರಚನೆಯಾಗಲಿದೆ.