ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ 42ನೇ ಪಂದ್ಯದಲ್ಲಿ ಲಕ್ನೋ ತಂಡವು 20 ರನ್‌ಗಳ ಗೆಲುವು ದಾಖಲಿಸಿತು.
154 ರನ್‌ಗಳ ಗುರಿಯನ್ನು ಪಡೆದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ಗೆದ್ದು ಫೀಲ್ಡಿಂಗಿಳಿದ ಕಿಂಗ್ಸ್ ಪಂಜಾಬ್ ತಂಡವು ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 153 ರನ್ ಕಲೆಹಾಕಿ, ಎದುರಾಳಿ ಪಂಜಾಬ್ ತಂಡಕ್ಕೆ 154 ರನ್‌ಗಳ ಗುರಿ ನೀಡಿತ್ತು. ಇದನ್ನೂ ಓದಿ: ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್
Advertisement
Advertisement
ಪಂಜಾಬ್ ತಂಡವು ಮೊದಲ 3 ಓವರ್‌ಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತು. ಪಂಜಾಬ್ ಟೀಂ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 25 ರನ್‌ಗಳಿಸಿ, 4ನೇ ಓವರ್‌ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಇನ್ನೂ ಕಳೆದ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿ 2ನೇ ಸ್ಥಾನ ಗಳಿಸಿಕೊಂಡ ಶಿಖರ್ ಧವನ್ ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. 15 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು.
Advertisement
3ನೇ ಕ್ರಮಾಂಕದಲ್ಲಿ ಬಂದ ಜಾನಿ ಬೈರ್‌ಸ್ಟೋವ್ 28 ಎಸೆತಗಳಲ್ಲಿ 32 ರನ್‌ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಇದರಿಂದ ತಂಡದಲ್ಲಿ ಗೆಲುವಿನ ಭರವಸೆ ಚಿಗುರಿತ್ತು. 15 ಓವರ್‌ಗೆ ಪಂಜಾಬ್ ತಂಡವು 103 ರನ್‌ಗಳನ್ನು ಕಲೆಹಾಕಿತ್ತು. ಇನ್ನು 5 ಓವರ್‌ಗಳಲ್ಲಿ 51 ರನ್‌ಗಳ ಅಗತ್ಯವಿದ್ದಾಗಲೇ ಜಾನಿ ಬೈರ್‌ಸ್ಟೋವ್ ತಮ್ಮ ವಿಕೆಟ್ ಒಪ್ಪಿಸಿದರು. ಇದರಿಂದ ಪಂಜಾಬ್ ಗೆಲುವಿನ ಭರವಸೆ ಕಳೆದುಕೊಂಡಿತು. ಇದನ್ನೂ ಓದಿ: ಸಿಕ್ಸ್ ಸಿಡಿಸಿದಕ್ಕೆ ಕೋಪ – ಕ್ರೀಡಾ ಸ್ಫೂರ್ತಿ ಮರೆತ ಹರ್ಷಲ್ ಪಟೇಲ್
ನಂತರ ಬಂದ ಜೀತೇಶ್ ಶರ್ಮಾ 2 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 18 ರನ್, ಕಗಿಸೋ ರಬಾಡ 2 ರನ್, ರಾಹುಲ್ ಚಹಾರ್ 4 ರನ್ ಗಳಿಸಿದ್ದರು. ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿದ್ದ ಪಂಜಾಬ್ ತಂಡ 18 ಓವರ್ ಮುಗಿಯುವ ವೇಳೆಗೆ ತನ್ನ ಗೆಲುವಿನ ಸಂಪೂರ್ಣ ಭರವಸೆ ಕಳೆದುಕೊಂಡಿತು. ಕೊನೆಯ ಓವರ್ ವರೆಗೂ ಹೋರಾಡಿದ ರಿಷಿ ಧವನ್ 22 ಎಸೆತಗಳಲ್ಲಿ 21 ರನ್‌ಗಳನ್ನು ಸಿಡಿಸಿದರು.
ರಬಾಡಾ ಬೌಲಿಂಗ್ ಕಮಾಲ್: ಆರಂಭದಿಂದಲೇ ಲಕ್ನೋ ತಂಡವನ್ನು ಮಂಕಾಗಿಸುವಲ್ಲಿ ಪಂಜಾಬ್ ತಂಡ ಯಶಸ್ವಿಯಾಯಿತು. ನಾಯಕನ ನಿರೀಕ್ಷೆಗೆ ತಕ್ಕಂತೆ ಪ್ರಮುಖ ಬ್ಯಾಟರ್‌ಗಳನ್ನು ಕಡಿಮೆ ರನ್‌ಗಳಲ್ಲೇ ಔಟಾಗಿಸಿದರು. ದಕ್ಷಿಣ ಆಫ್ರಿಕಾದ ವೇಗಿಯ ಬೌಲರ್ ಕಗಿಸೋ ರಬಾಡ 4 ಓವರ್‌ಗಳಲ್ಲಿ 38 ರನ್ ನೀಡಿದರೂ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಉಳಿದಂತೆ ರಾಹುಲ್ ಚಹರ್ 2 ವಿಕೆಟ್ ಮತ್ತು ಸಂದೀಪ್ ಶರ್ಮಾ ಒಂದು ವಿಕೆಟ್ ಪಡೆದರು. ಬೌಲಿಂಗ್‌ನಲ್ಲಿ ಲಕ್ನೋ ಬ್ಯಾಟರ್‌ಗಳನ್ನು ಉರುಳಿಸಿದ ತಂಡ ಬ್ಯಾಟಿಂಗ್ ವೈಫಲ್ಯದಿಂದ ಸೋಲು ಕಂಡಿತು. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್.ರಾಹುಲ್ 11 ಎಸೆತಗಳಲ್ಲಿ 6 ರನ್ ಕಲೆಹಾಕಿ ಔಟಾದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 13 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಹಿನ್ನಡೆ ಅನುಭವಿಸಿತು.
ಈ ವೇಳೆ ದಕ್ಷಿಣ ಆಫ್ರಿಕಾದ ಮತ್ತೋರ್ವ ಆಟಗಾರ ಕ್ವಿಂಟನ್ ಡಿಕಾಕ್ ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ಅವರ 85 ರನ್‌ಗಳ ಜೊತೆಯಾಟವು ತಂಡ 150 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕ್ವಿಂಟನ್ ಡಿ ಕಾಕ್ ತಮ್ಮ ಜವಾಬ್ದಾರಿಯುತ ಆಟದಿಂದ 46 ರನ್ (37 ಎಸೆತ, 4 ಫೋರ್, 2 ಸಿಕ್ಸರ್) ಗಳಿಸಿದರೆ, ದೀಪಕ್ ಹೂಡಾ 34 ರನ್ ( 28 ಎಸೆತ, 1 ಫೋರ್, 2 ಸಿಕ್ಸರ್) ಗಳಿಸಿ ನಿರ್ಗಮಿಸಿದರು. ಉಳಿದಂತೆ ಕೃನಾಲ್ ಪಾಂಡ್ಯ 7 ರನ್, ಮಾರ್ಕಸ್ ಸ್ಟೊಯಿನಿಸ್ 1 ರನ್, ಆಯುಷ್ ಬದೋನಿ 4 ರನ್, ಜೇಸನ್ ಹೋಲ್ಡರ್ 11 ರನ್, ದುಷ್ಮಂತ ಚಮೀರ 17 ರನ್ ಕಲೆಹಾಕಿದರೆ, ಮೊಹ್ಸಿನ್ ಖಾನ್ ಅಜೇಯ 13 ರನ್ ಹಾಗೂ ಅವೇಶ್ ಖಾನ್ ಅಜೇಯ 2 ರನ್ ದಾಖಲಿಸಿದರು.