CricketLatestLeading NewsMain PostSports

6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

ಮುಂಬೈ: ಚೆನ್ನೈ ಸೂಪರ್‌ಕಿಂಗ್ಸ್ (CSK) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಅಧಿಕ ರನ್‌ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ (ಪಂದ್ಯಶ್ರೇಷ್ಠ) ಪ್ರಶಸ್ತಿ ಗಳಿಸಿದ ಶಿಖರ್ ಧವನ್ ಐಪಿಎಲ್‌ನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.

CRICKET-IND-T20-IPL-DELHI-PUNJAB

ಐಪಿಎಲ್‌ನಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಶಿಖರ್ ಧವನ್, ತಮ್ಮ ಅದ್ಭುತ ಬ್ಯಾಟಿಂಗ್ ವೈಖರಿಯಿಂದ ಅಬ್ಬರಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ 200ನೇ ಪಂದ್ಯವಾಡಿದ ಅವರು, 6 ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಪೂರೈಸುವ ಮೂಲಕ ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿದ 2ನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದು 38 ವರ್ಷದ ಟೀಚರ್ ಜೊತೆ 66ರ ಅರುಣ್ ಲಾಲ್ ಮದುವೆ

DHAVAN

ಶಿಖರ್ ಧವನ್ ಅವರಿಗಿಂತ ಮೊದಲು ಈ ಸಾಧನೆ ಮಾಡಿರುವ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ 3ನೇ ಸ್ಥಾನ, ಡೇವಿಡ್ ವಾರ್ನರ್ ನಾಲ್ಕನೇ ಸ್ಥಾನ ಹಾಗೂ ಸುರೇಶ್ ರೈನಾ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ: ರಿಷಿ ಧವನ್

2022ರಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿರುವ ಶಿಖರ್ ಧವನ್, ಈ ಹಿಂದೆ ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ.

ಅಲ್ಲದೆ, ತಮ್ಮ ಟಿ20 ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳ ಗಡಿ ದಾಟಿದ್ದು, ಇದೀಗ ಅತಿಹೆಚ್ಚು ರನ್‌ಗಳಿಸಿದ ಭಾರತದ 3ನೇ ಆಟಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಧಿಕ ರನ್‌ಗಳಿಸಿದವರು
ವಿರಾಟ್ ಕೊಹ್ಲಿ – 215 ಪಂದ್ಯಗಳು- 6402 ರನ್
ಶಿಖರ್ ಧವನ್ – 200 ಪಂದ್ಯಗಳು- 6086 ರನ್
ರೋಹಿತ್ ಶರ್ಮಾ 221 ಪದ್ಯಗಳು- 5764
ಡೇವಿಡ್ ವಾರ್ನರ್ 155 ಪಂದ್ಯಗಳು – 5668
ಸುರೇಶ್ ರೈನಾ- 205 ಪಂದ್ಯಗಳು- 5528

Leave a Reply

Your email address will not be published.

Back to top button