ಬೆಂಗಳೂರು: ಇಂದಿನಿಂದ ಐಪಿಎಲ್ (IPL) ಆರಂಭವಾತ್ತಿರುವ ಹಿನ್ನೆಲೆ ಭಾರೀ ಪ್ರಮಾಣದ ಬೆಟ್ಟಿಂಗ್ (IPL Betting) ನಡೆಯೋ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಪೊಲೀಸ್ (Police) ಕಮಿಷನರ್ ದಯಾನಂದ್ ಅವರಿಗೆ ಮಾಹಿತಿ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಡಿಸಿಪಿಗಳಿಗೆ ಅಲರ್ಟ್ ಆಗಿರುವಂತೆ ಕಮಿಷನರ್ ಸೂಚಿಸಿದ್ದಾರೆ.
ನಗರದಾದ್ಯಂತ (Bengaluru), ಆಯಾ ಠಾಣಾ ವ್ಯಾಪ್ತಿಯಲ್ಲಿನ ಬುಕ್ಕಿಗಳ ಮೇಲೆ ತೀವ್ರ ನಿಗಾ ಇಡಬೇಕು. ಈ ಹಿಂದೆ ಬೆಟ್ಟಿಂಗ್ ಕೇಸ್‍ನಲ್ಲಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಂದಿರುವವರ ಮೇಲೂ ತೀವ್ರ ನಿಗಾ ವಹಿಸಬೇಕು. ಅಲ್ಲದೇ ಬೆಟ್ಟಿಂಗ್‍ಗಾಗಿಯೇ ಹೋಟೆಲ್, ಲಾಡ್ಜ್‍ಗಳಲ್ಲಿ ರೂಮ್ ಪಡೆಯುವವರಿದ್ದು, ಸೂಕ್ತ ಪರಿಶೀಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: IPL 2024: ಅತ್ಯುತ್ತಮ ಜೊತೆಯಾಟದಲ್ಲೂ ಆರ್‌ಸಿಬಿ ಆಟಗಾರರೇ ಟಾಪ್!
Advertisement
Advertisement
ಆನ್‍ಲೈನ್ ಆಪ್‍ಗಳ ಮೂಲಕವೂ ಬೆಟ್ಟಿಂಗ್ ನಡೆಯಲಿದ್ದು, ಅಂತಹವರ ಪತ್ತೆಯನ್ನು ಮಾಡಿ ಕಾನೂನು ಕ್ರಮ ಜರುಗಿಸಬೇಕು. ಠಾಣಾ ವ್ಯಾಪ್ತಿಯ ಪೊಲೀಸರ ಜೊತೆಗೆ ಸಿಸಿಬಿಯೂ ಫುಲ್ ಅಲರ್ಟ್ ಆಗಿರಬೇಕು. ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಸಿಸಿಬಿಯಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಎಲ್ಲಾ ಆಯಾಮದಲ್ಲೂ ಮಾಹಿತಿ ಪಡೆಯುವುದರ ಮೂಲಕ ಅಲರ್ಟ್ ಇರಲು ಸೂಚನೆ ಇರಬೇಕು ಎಂದು ಸೂಚಿಸಲಾಗಿದೆ.
Advertisement
Advertisement
ಹಳೇ ಬೆಟ್ಟಿಂಗ್ ಕೇಸಲ್ಲಿ ಬಂಧನವಾಗಿ, ಈಗ ಹೊರಗಡೆ ಇರುವವರ ಮೇಲೆ ಸಿಸಿಬಿ ಹದ್ದಿನ ಕಣ್ಣಿಟ್ಟಿದ್ದು, ನಗರದಾದ್ಯಂತ ಬಾತ್ಮೀದಾರರನ್ನು ಸಹ ಸಿಸಿಬಿ (CCB) ಅಲರ್ಟ್ ಆಗಿರುವಂತೆ ಸೂಚಿಸಿದೆ. ಇದನ್ನೂ ಓದಿ: Breaking: ನಾಯಕ ಸ್ಥಾನದಿಂದ ಕೆಳಗಿಳಿದ ಧೋನಿ – ಸಿಎಸ್‌ಕೆ ತಂಡಕ್ಕೆ ಋತುರಾಜ್ ನೂತನ ಸಾರಥಿ