ಹೈದರಾಬಾದ್: ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಆರ್‌ಸಿಬಿ (RCB) ಪಂದ್ಯ ನಡೆದರೆ ಟಿಕೆಟ್ ಬೆಲೆ ಹೆಚ್ಚಿರುತ್ತದೆ. ಆದರೆ ಮೇ 22 ರಂದು ಹೈದರಾಬಾದ್‌ನಲ್ಲಿ(Hyderabad) ನಡೆಯಲಿರುವ ಎಸ್‌ಆರ್‌ಹೆಚ್ (SRH) ವಿರುದ್ಧದ ಪಂದ್ಯಕ್ಕೂ ವಿಪರೀತ ಟಿಕೆಟ್ ಬೇಡಿಕೆಯಿದೆ. ಈ ಕಾರಣಕ್ಕೆ ಎಸ್‌ಆರ್‌ಹೆಚ್ ಮ್ಯಾನೇಜ್‌ಮೆಂಟ್ ಟಿಕೆಟ್ ಬೆಲೆಯನ್ನು ಶೇ.50 ರಿಂದ ಶೇ.110 ರಷ್ಟು ಹೆಚ್ಚಳ ಮಾಡಲಾಗಿದೆ.
ಶುಕ್ರವಾರ ಸಂಜೆ 5 ಗಂಟೆಗೆ ಝೊಮಾಟೊ ಡಿಸ್ಟ್ರಿಕ್ಟ್ ಅಪ್ಲಿಕೇಶನ್‌ನಲ್ಲಿ ಈ ಪಂದ್ಯಕ್ಕೆ ಟಿಕೆಟ್ ಬುಕಿಂಗ್ ಪ್ರಾರಂಭವಾಯಿತು. ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಸುಮಾರು 39 ಸಾವಿರ ಆಸನ ಸಾಮರ್ಥ್ಯವಿರುವ ಸ್ಟೇಡಿಯಂ ಟಿಕೆಟ್ ಖರೀದಿಗೆ 2.50 ಲಕ್ಷ ಮಂದಿ ವೇಟಿಂಗ್ ಲಿಸ್ಟ್‌ನಲ್ಲಿದ್ದರು.
ಈ ಹಿಂದೆ 950 ರೂ. ನಿಂದ 30,000 ರೂ. ತನಕ ಟಿಕೆಟ್‌ಗಳ ಬೆಲೆ ಇರಿಸಲಾಗಿತ್ತು. ಆದರೆ ಆರ್‌ಸಿಬಿ ಪಂದ್ಯಕ್ಕೆ 2,000 ರೂ. ನಿಂದ 45,000 ರೂ.ವರೆಗೆ ಏರಿಸಲಾಗಿತ್ತು. ಇದನ್ನೂ ಓದಿ: ಪಂಜಾಬ್‌ಗೆ ಸತತ 6 ಸೋಲು; ಕಳಪೆ ಪ್ರದರ್ಶನಕ್ಕೆ ಪ್ರೀತಿ ಜಿಂಟಾ ಅಸಮಾಧಾನ – ಕೈಕಟ್ಟಿ ನಿಂತ ಶ್ರೇಯಸ್

ಫಸ್ಟ್ ಟೆರೇಸ್ ಟಿಕೆಟ್ 1,500 ರೂ. ಇತ್ತು. ಇದೇ ಟಿಕೆಟ್ ಬೆಲೆಯನ್ನು ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯಕ್ಕೆ 3,000 ರೂ.ಗೆ ಏರಿಸಲಾಗಿದೆ. ಅದೇ ರೀತಿ 900 ರೂ. ಇದ್ದ ಟಿಕೆಟ್ ಬೆಲೆಯನ್ನು ಶೇ.100 ರಷ್ಟು ಹೆಚ್ಚಿಸಿ 2,000 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನೂ 30,000 ರೂ.ಗಳ ಬೆಲೆಯ ಟಿಕೆಟ್ ಶೇ.50 ರಷ್ಟು ಏರಿಕೆಯಾಗಿದ್ದು, 45,000 ರೂ.ಗೆ ತಲುಪಿದೆ.
ಹೈದರಾಬಾದ್ ಐಪಿಎಲ್ 2026 ಟಿಕೆಟ್ ಬೆಲೆಗಳು
ಮೂಲ ದರ – ಆರ್‌ಸಿಬಿ ಪಂದ್ಯಕ್ಕೆ
950 ರೂ. – 2000 ರೂ.
1500 ರೂ. – 3000 ರೂ.
1910 ರೂ. – 3500 ರೂ.
2500 ರೂ. – 4500 ರೂ.
4500 ರೂ. – 6000 ರೂ.
7000 ರೂ. – 10000 ರೂ.
23000 ರೂ. – 30000 ರೂ.
30000 ರೂ. – 45000 ರೂ.
ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ಆರ್‌ಸಿಬಿ ತಂಡ 18 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಇತ್ತ ಎಸ್‌ಆರ್‌ಹೆಚ್ ತಂಡ 12 ಪಂದ್ಯಗಳನ್ನಾಡಿ 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಿಸಲು ಹೈದರಾಬಾದ್ ತಂಡಕ್ಕೆ ಬಾಕಿಯಿರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

