– 20 ಇತರೇ ರನ್ ಬಿಟ್ಟುಕೊಟ್ಟ ಲಕ್ನೋ
ಲಕ್ನೋ: 26 ರನ್‌ಗಳಿಗೆ 4 ವಿಕೆಟ್ ಪತನಗೊಂಡಿದ್ದರೂ ಸಮೀರ್ ರಿಜ್ವಿ(Sameer Rizvi ) ಮತ್ತು ಟ್ರಿಸ್ಟನ್ ಸ್ಟಬ್ಸ್ (Tristan Stubbs) ಅಜೇಯ ಆಟದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್(Delhi Capitals) 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಲಕ್ನೋ 18.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯ್ತು ಸುಲಭದ ಸವಾಲನ್ನು ಬೆನ್ನಟ್ಟಿದ ಲಕ್ನೋ 17.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 145 ರನ್ ಹೊಡೆದು ಜಯ ಸಾಧಿಸಿತು.
ಹಾಗೆ ನೋಡಿದರೆ ಡೆಲ್ಲಿಯ ಆರಂಭ ಉತ್ತಮವಾಗಿರಲಿಲ್ಲ. ಕೆಎಲ್ ರಾಹುಲ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಔಟಾದರು. ನಿತೀಶ್ ರಾಣಾ 15 ರನ್, ನಿಸಾಂಕ 1 ರನ್, ನಾಯಕ ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟಾದಾಗ ಪಂದ್ಯ ಲಕ್ನೋ ಕಡೆ ವಾಲಿತ್ತು. 4.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 26 ರನ್‌ಗಳಿಸಿ ಸಂಕಷ್ಟದಲ್ಲಿದ್ದಾಗ ಇಂಪ್ಯಾಕ್ಟ್ ಪ್ಲೇಯರ್ ಸಮೀರ್ ರಿಜ್ವಿ ಮತ್ತು ಸ್ಟಬ್ಸ್ ನಿಧಾನವಾಗಿ ಆಡಿ ಇನ್ನಿಂಗ್ಸ್ ಕಟ್ಟತೊಡಗಿದರು. ಇದನ್ನೂ ಓದಿ: ನಿಯಮ ಉಲ್ಲಂಘಿಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ತೆವಾಟಿಯಾ!
A SIX TO SEAL IT! 🙌
Sameer Rizvi does it in style 🥳@DelhiCapitals kick off their #TATAIPL 2026 campaign with a 6️⃣-wicket victory 👏👏
Scorecard ▶️ https://t.co/lfP7dRNKfg#KhelBindaas | #LSGvDC pic.twitter.com/vVPkz5kqzd
— IndianPremierLeague (@IPL) April 1, 2026
ಇಬ್ಬರು ಮುರಿಯದ 5ನೇ ವಿಕೆಟಿಗೆ 76 ಎಸೆತಗಳಲ್ಲಿ 119 ರನ್ ಜೊತೆಯಾಟವಾಡಿದರು. ರಿಜ್ವಿ ಅಜೇಯ 70 ರನ್(47 ಎಸೆತ, 5 ಬೌಂಡರಿ, 4 ಸಿಕ್ಸ್), ಸ್ಟಬ್ಸ್ ಅಜೇಯ 39 ರನ್(32 ಎಸೆತ, 3 ಬೌಂಡರಿ, 1 ಸಿಕ್ಸ್) ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.
ಆರಂಭದಲ್ಲಿ ಬೌಲಿಂಗ್ ಉತ್ತಮವಾಗಿದ್ದರೂ ನಂತರ ಲಕ್ನೋ ಇತರೇ ರನ್‌ಗಳನ್ನು ಬಿಟ್ಟುಕೊಟ್ಟಿತ್ತು. ಒಟ್ಟು 20 ಇತರೇ(ಲೆಗ್‌ಬೈ 4, ವೈಡ್ 16 ರನ್) ಬಿಟ್ಟುಕೊಟ್ಟಿದ್ದು ಸೋಲಿಗೆ ಒಂದು ಕಾರಣ.
In the air…..and TAKEN 😍
A superb start for @LucknowIPL 👌
Mohd. Shami gets KL Rahul 1️⃣st ball 👏
Updates ▶️ https://t.co/lfP7dRNKfg#TATAIPL | #KhelBindaas | #LSGvDC pic.twitter.com/oPUcn7ptCf
— IndianPremierLeague (@IPL) April 1, 2026
ಲಕ್ನೋ ಪರ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ 35 ರನ್(28 ಎಸೆತ, 2 ಬೌಂಡರಿ, 3 ಸಿಕ್ಸ್), ಅಬ್ದುಲ್ ಸಮಾದ್ 36 ರನ್(25ಎಸೆತ, 3 ಬೌಂಡರಿ, 1 ಸಿಕ್ಸ್) ಹೊಡೆದು ತಂಡದ ಮೊತ್ತವನ್ನು ಹಿಗ್ಗಿಸಿದರು. ಇದನ್ನೂ ಓದಿ: 8 ರನ್ ಅಂತರದಲ್ಲಿ4 ವಿಕೆಟ್ ಬಿದ್ದರೂ ಕೊನೋಲಿ ಏಕಾಂಗಿ ಆಟ – ಪಂಜಾಬ್‌ಗೆ ರೋಚಕ ಜಯ

