ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) ಮುಂಬರುವ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿ ರಿಷಬ್ ಪಂತ್ (Rishabh Pant) ಅವರ ಹೆಸರನ್ನು ಮಂಗಳವಾರ ಫ್ರಾಂಚೈಸಿ ಘೋಷಿಸಲಾಗಿದೆ. ವಿಕೆಟ್‌ಕೀಪರ್-ಬ್ಯಾಟರ್ 14 ತಿಂಗಳ ನಂತರ ವೃತ್ತಿಪರ ಕ್ರಿಕೆಟ್‌ಗೆ ಮರಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಅಧ್ಯಕ್ಷ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್, ‘ರಿಷಭ್ ಅವರನ್ನು ಮತ್ತೆ ನಮ್ಮ ನಾಯಕನಾಗಿ ಸ್ವಾಗತಿಸಲು ನಾವು ಸಂತೋಷ ಪಡುತ್ತೇವೆ. ಉತ್ಸಾಹ, ಚೈತನ್ಯದೊಂದಿಗೆ ನಾವು ಹೊಸ ಋತುವಿಗಾಗಿ ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇದು ಆರ್‌ಸಿಬಿಯ ಹೊಸ ಅಧ್ಯಾಯ – ಕನ್ನಡದಲ್ಲೇ ಕೊಹ್ಲಿ ಮಾತು
- Advertisement -
- Advertisement -
ತಂಡದ ಸಹ-ಮಾಲೀಕ ಕಿರಣ್ ಕುಮಾರ್ ಗ್ರಾಂಧಿ, ‘ರಿಷಭ್ ತಮ್ಮ ಜೀವನದ ಅತ್ಯಂತ ಸವಾಲಿನ ಹಂತಗಳಲ್ಲಿ ನಂಬಲಾಗದಷ್ಟು ಶ್ರಮಿಸಿದ್ದಾರೆ. ಅವರು ಹೊಸ ಋತುವನ್ನು ಪ್ರಾರಂಭಿಸಿದಾಗ ಅವರ ತಂಡದ ಸಹ ಆಟಗಾರರು ಅದರಿಂದ ಅಪಾರವಾದ ಸ್ಫೂರ್ತಿ ಪಡೆದುಕೊಳ್ಳಲಿದ್ದಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನಾಯಕ ರಿಷಭ್ ಮತ್ತು ತಂಡಕ್ಕೆ ನಮ್ಮ ಶುಭ ಹಾರೈಕೆಗಳಿವೆ ಎಂದಿದ್ದಾರೆ.
- Advertisement -
- Advertisement -
ಮಾರ್ಚ್ 23 ರಂದು ಚಂಡೀಗಢದಲ್ಲಿ ನಡೆಯಲಿರುವ IPL 2024 ರ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: RCB Unbox: ‘ಬೆಂಗಳೂರ್’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’