ಬೆಂಗಳೂರು: ಆವೃತ್ತಿಯಲ್ಲಿ ಮತ್ತೊಮ್ಮೆ ತಂಡವು ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆಯಿಂದ ಅಂಗಳಕ್ಕೆ ಇಳಿದಿದೆ. ಆದರೆ ತಂಡ ಇನ್ನೂ ಪಂದ್ಯವನ್ನು ಆಡುವುದಕ್ಕಿಂತ ಮೊದಲೇ ನಾಯಕ ಫಾಫ್ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 16ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕಠಿಣ ಹೋರಾಟವನ್ನು ಅಭಿಮಾನಿಗಳು ಸಂಪೂರ್ಣವಾಗಿ ಆನಂದಿಸಿದರು. ಅದೇ ರೀತಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸಹ ಏ.2ರಂದು ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ತನ್ನ ಹೋರಾಟವನ್ನು ಆರಂಭಿಸಲಿದೆ. ವಿರಾಟ್ ಕೊಹ್ಲಿ ಇರುವಿಕೆಯಿಂದಾಗಿ, ಅಭಿಮಾನಿಗಳು ಈ ತಂಡಕ್ಕೆ ಹೆಚ್ಚಿನ ಪ್ರೀತಿಯನ್ನು ನೀಡುತ್ತಿದ್ದಾರೆ. ಆದರೆ ಆರ್‌ಸಿಬಿಗೆ (RCB) ಇದುವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇದರ ನಡುವೆ ತಂಡದ ನಾಯಕ ಫಾಫ್ ಡುಪ್ಲೆಸಿ ಹೇಳಿರುವ ಹೇಳಿಕೆಯ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ: IPL 2023: ಮಾರ್ಕ್ ಮಾರಕ ಬೌಲಿಂಗ್, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ
Advertisement
Funny moments between Virat Kohli and Faf Du plessis during team’s presentation event. ???????? pic.twitter.com/ecF5o7le3F
— Akshat (@AkshatOM10) March 31, 2023
Advertisement
ಆರ್‌ಸಿಬಿ ಅಭಿಮಾನಿಗಳ ಘೋಷ ವಾಕ್ಯ ಎಂದೇ ಮಾತಾಗಿರುವ “ಈ ಸಲ ಕಪ್ ನಮ್ದೇ” ಎಂಬ ವಾಕ್ಯ ಪ್ರತಿ ವರ್ಷ ಟ್ರೆಂಡ್ ಆಗುತ್ತದೆ. ಆದರೆ ಆರ್‌ಸಿಬಿ ನಾಯಕ ಇದೇ ಸಾಲನ್ನು ತಪ್ಪಾಗಿ ಉಚ್ಚರಿಸುವ ಮೂಲಕ ಎಡವಟ್ಟು ಮಾಡಿದ್ದಾರೆ. ತಂಡದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಮತ್ತು ಫಾಫ್ ಡುಪ್ಲೆಸಿಸ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ, ಫಾಫ್ ಡುಪ್ಲೆಸಿ ಈ ಸಲ ಕಪ್ ನಮ್ದೇ ಎನ್ನುವ ಬದಲಿಗೆ “ಈ ಸಲ ಕಪ್ ನಹೀ” ಎಂದು ಹೇಳಿದ್ದಾರೆ.
Advertisement
Advertisement
ಆರ್‌ಸಿಬಿ ನಾಯಕನೇ ಕಪ್ ನಹೀ ಎಂದು ಹೇಳಿದ್ದಕ್ಕೆ ಪಕ್ಕದಲ್ಲಿ ಕುಳಿತಿದ್ದ ಕೊಹ್ಲಿ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ದಾಖಲೆ ಮೇಲೆ ಕೊಹ್ಲಿ ಕಣ್ಣು:
ಐಪಿಎಲ್‍ನಲ್ಲಿ 7,000 ರನ್ ಗಡಿ ದಾಟಲು ವಿರಾಟ್ ಕೊಹ್ಲಿಗೆ (Virat Kohli) 376 ರನ್ ಅಗತ್ಯವಿದೆ. ಐಪಿಎಲ್ 2023ರಲ್ಲಿ ಕೊಹ್ಲಿ 376 ರನ್ ಗಳಿಸಿದರೆ, ಈ ಟೂರ್ನಿಯಲ್ಲಿ 7,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‍ಮನ್ ಎಂಬ ಇತಿಹಾಸ ನಿರ್ಮಿಸಲಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗಾಗಿ (ಆರ್‌ಸಿಬಿ) ಕಳೆದ 15 ಆವೃತ್ತಿಗಳನ್ನು ಆಡಿದ ಏಕೈಕ ಆಟಗಾರ. ಐಪಿಎಲ್‍ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ (Crisgel) ಅವರನ್ನು ಹಿಂದಿಕ್ಕಲು ಎರಡು ಶತಕಗಳ ಅಗತ್ಯವಿದೆ. ಕ್ರಿಸ್ ಗೇಲ್ ಐಪಿಎಲ್‍ನಲ್ಲಿ 6 ಶತಕಗಳನ್ನು ಬಾರಿಸಿದ್ದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ತಲಾ 5 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಬೆಂಗಳೂರು- ಮುಂಬೈ ಸಂಪೂರ್ಣ ತಂಡ:
ರಾಯಲ್ ಚಾಲೆಂಜರ್ಸ್ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ ವುಡ್, ಮೊಹಮ್ಮದ್ ಸಿರಾಜ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್‍ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ಮೈಕೆಲ್ ಬ್ರೇಸ್‍ವೆಲ್.
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಜೋಫ್ರಾ ಆರ್ಚರ್, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣ್‍ದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್‍ಡಾರ್ಫ್, ಆಕಾಶ್ ಮಧ್ವಾಲ್, ಕ್ಯಾಮರೋನ್ ಗ್ರೀನ್, ಜ್ಯೆ ರಿಚಡ್ರ್ಸನ್, ಪಿಯೂಷ್ ಚಾವ್ಲಾ, ದುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್, ಸಂದೀಪ್ ವಾರಿಯರ್. ಇದನ್ನೂ ಓದಿ: Team India ಸೂಪರ್ ಪವರ್ ಆಗಿದೆ ಅಂತಾ BCCIಗೆ ದುರಹಂಕಾರ – ಇಮ್ರಾನ್ ಖಾನ್ ಕಿಡಿ