ತಿರುವನಂತಪುರಂ: ಕ್ರಿಕೆಟ್ ಹಬ್ಬ ಐಪಿಎಲ್ 2023ರ (IPL 2023) ಸಂಭ್ರಮ ನಾಳೆಯಿಂದ ರಂಗೇರಲಿದೆ. ನಾಳೆ ಕೊಚ್ಚಿಯಲ್ಲಿ ಮಿನಿ ಹರಾಜು (Auction) ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ ಹದಿನೈದರ ಪೋರ ಅಲ್ಲಾ ಮೊಹಮ್ಮದ್ ಘಜನ್ಫರ್ (Allah Mohammed Ghazanfar) ಅತಿ ಕಿರಿಯ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Advertisement
ನಾಳೆ ನಡೆಯಲಿರುವ ಹರಾಜಿನಲ್ಲಿ ಈಗಾಗಲೇ 405 ಆಟಗಾರರ ಅಂತಿಮ ಪಟ್ಟಿ ಸಿದ್ಧಗೊಂಡಿದೆ. ಈ ಪಟ್ಟಿಯಲ್ಲಿ 273 ಭಾರತೀಯ ಆಟಗಾರರು ಕಾಣಿಸಿಕೊಂಡರೆ, 132 ಮಂದಿ ವಿದೇಶಿ ಅಟಗಾರರು ಸೇರಿದ್ದಾರೆ. ಒಟ್ಟು 991 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆ ಬಳಿಕ 10 ಫ್ರಾಂಚೈಸ್‍ಗಳ ಜೊತೆ ಚರ್ಚಿಸಿ ಅಂತಿಮವಾಗಿ 369 ಆಟಗಾರರ ಪಟ್ಟಿ ಸಿದ್ಧಗೊಂಡಿತು. ನಂತರ 36 ಆಟಗಾರರ ಹೆಚ್ಚುವರಿ ಸೇರ್ಪಡೆಯೊಂದಿಗೆ ಒಟ್ಟು 405 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ರೋಹಿತ್‍ಗೆ ಗೇಟ್ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?
Advertisement
Advertisement
ಹರಾಜಿನಲ್ಲಿ 15ರ ಬಾಲಕ ಅಲ್ಲಾ ಮೊಹಮ್ಮದ್ ಘಜನ್ಫರ್ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡು ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ಶುಕ್ರವಾರ ಮಧ್ಯಾಹ್ನ 2:30 ರಿಂದ ಆರಂಭವಾಗಲಿದೆ.
Advertisement
ಯಾರಿದು ಅಲ್ಲಾ ಮೊಹಮ್ಮದ್ ಘಜನ್ಫರ್?:
ಅಘ್ಫಾನಿಸ್ತಾನ ಮೂಲದ ಅಲ್ಲಾ ಮೊಹಮ್ಮದ್ ಘಜನ್ಫರ್‌ಗೆ ಈಗಷ್ಟೇ 15 ವರ್ಷ. 6 ಅಡಿ 2 ಇಂಚು ಉದ್ದವಿರುವ ಅಲ್ಲಾ ಮೊಹಮ್ಮದ್ ಘಜನ್ಫರ್ ಮೊದಲು ವೇಗದ ಬೌಲರ್ ಆಗಿದ್ದರು. ಬಳಿಕ ಸ್ಪಿನ್ನರ್ ಆಗಿ ಮಾರ್ಪಾಡು ಹೊಂದಿದ್ದಾರೆ. ಈಗಾಗಲೇ ಅಂಡರ್-16ನಲ್ಲಿ ಆಡಿದ್ದು, ಇದೀಗ ಅಂಡರ್-19 ಆಡಲು ಅಭ್ಯಾಸದಲ್ಲಿದ್ದಾರೆ. ಈ ನಡುವೆ ಐಪಿಎಲ್‍ನಲ್ಲಿ ಆಡಲು ಸಿದ್ಧರಾಗಿದ್ದಾರೆ. ಹರಾಜಿನಲ್ಲಿ ಮಾರಾಟವಾಗುವ ನಿರೀಕ್ಷೆಯಲ್ಲಿರುವ ಘಜನ್ಫರ್ ಮೂಲಬೆಲೆ 20 ಲಕ್ಷ ರೂ. ಆಗಿದೆ. ಇದನ್ನೂ ಓದಿ: ಮೊದಲ ಪಂದ್ಯದ ಮ್ಯಾಚ್ ವಿನ್ನರ್‌ಗಿಲ್ಲ ಎರಡನೇ ಟೆಸ್ಟ್‌ನಲ್ಲಿ ಅವಕಾಶ – ಕುಲ್‍ದೀಪ್‍ಗೆ ಕೊಕ್, ಉನಾದ್ಕಟ್‍ಗೆ ಬುಲಾವ್
ಘಜನ್ಫರ್ ಕಿರಿಯ ಆಟಗಾರನಾದರೆ, ಭಾರತದ ಅಮಿತ್ ಮಿಶ್ರಾ ಹಿರಿಯ ಆಟಗಾರನಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಶ್ರಾಗೆ ಇದೀಗ 40 ವರ್ಷ ಆದರೂ ಈಬಾರಿ ಐಪಿಎಲ್‍ನಲ್ಲಿ ಆಡುವ ಉತ್ಸಾಹ ತೋರಿಸಿದ್ದಾರೆ. ಆದರೆ ಈ ಹಿರಿಯ ಹಾಗೂ ಕಿರಿಯ ಆಟಗಾರರಿಗೆ ಯಾವ ತಂಡ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಯಾವ ತಂಡದಲ್ಲಿ ಎಷ್ಟು ಹಣ ಬಾಕಿ:
ಸನ್‍ರೈಸರ್ಸ್ ಹೈದರಾಬಾದ್ (SRH) – 42.25 ಕೋಟಿ ರೂ. ಬಾಕಿ ಇದ್ದು 4 ವಿದೇಶಿ ಆಟಗಾರರು ಸಹಿತ 13 ಆಟಗಾರರನ್ನು ಖರೀದಿಸಬಹುದು.
ಚೆನ್ನೈ ಸೂಪರ್ ಕಿಂಗ್ಸ್ (CSK) – 20.45 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ 7 ಆಟಗಾರರನ್ನು ಖರೀದಿ ಮಾಡಬಹುದು.
ಡೆಲ್ಲಿ ಕಾಪಿಟಲ್ಸ್ (DC) – 19.45 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ 5 ಆಟಗಾರ ಖರೀದಿಗೆ ಅವಕಾಶವಿದೆ.
ಗುಜರಾತ್ ಟೈಟಾನ್ಸ್ (GT) – 19.25 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 7 ಆಟಗಾರನ್ನು ಈ ಬಾರಿ ಖರೀದಿ ಮಾಡಬಹುದು.
ಕೋಲ್ಕತ್ತಾ ನೈಟ್ ರೈಡರ್ಸ್ (KKR) – 7.05 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 11 ಆಟಗಾರರನ್ನು ಖರೀದಿಸಬಹುದು
ಲಕ್ನೋ ಸೂಪರ್ ಜೈಂಟ್ಸ್ (LSG) – 23.35 ಕೋಟಿ ರೂ. ಬಾಕಿ ಇದ್ದು, 4 ವಿದೇಶಿ ಸಹಿತ 10 ಆಟಗಾರನ್ನು ಖರೀದಿಗೆ ಅವಕಾಶವಿದೆ.
ಮುಂಬೈ ಇಂಡಿಯನ್ಸ್ (MI) – 20.55 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 9 ಆಟಗಾರರನ್ನು ಖರೀದಿ ಮಾಡಬಹುದು.
ಪಂಜಾಬ್ ಕಿಂಗ್ಸ್ (PBKS) – 32.2 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 9 ಆಟಗಾರರನ್ನು ಖರೀದಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – 8.75 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ ಒಟ್ಟು 7 ಆಟಗಾರ ಖರೀದಿಗೆ ಅವಕಾಶವಿದೆ.
ರಾಜಸ್ಥಾನ ರಾಯಲ್ಸ್ (RR) – 13.2 ಕೋಟಿ ರೂ. ಬಾಕಿ ಇದ್ದು, 4 ವಿದೇಶಿ ಸಹಿತ 13 ಆಟಗಾರರನ್ನು ಖರೀದಿಸಬಹುದು.