ಕೋಲ್ಕತ್ತಾ: 15ನೇ ಆವೃತ್ತಿ ಐಪಿಎಲ್‍ನ ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ ಕೊಡುವ ಸಾಧ್ಯತೆ ಹೆಚ್ಚಿದೆ.
Advertisement
ಕೋಲ್ಕತ್ತಾದಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯುತ್ತಿದ್ದು, ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಇದೀಗ ಪ್ಲೇ ಆಫ್‍ನ ಎರಡು ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಇನ್ನೆರಡು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಪ್ಲೇ ಆಫ್ ಪಂದ್ಯಗಳು ಸರಿಯಾದ ಫಲಿತಾಂಶ ಕಾಣುವ ಸಾಧ್ಯತೆ ಕಡಿಮೆ ಇದೆ. ಇದನ್ನೂ ಓದಿ: ಗೆಲುವಿನೊಂದಿಗೆ ಹೊರನಡೆದ ಪಂಜಾಬ್ – ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದ ಹೈದರಾಬಾದ್
Advertisement
Advertisement
ಮೊದಲನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೇ 24 ಮಂಗಳವಾರ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೇ 25 ಬುಧವಾರದಂದು ನಡೆಯಲಿದೆ.
Advertisement
ಆ ಬಳಿಕ ಕ್ವಾಲಿಫೈಯರ್ 2ನೇ ಪಂದ್ಯ ಅಹಮದಾಬಾದ್‍ನಲ್ಲಿ ಮೇ 27 ರಂದು ಮತ್ತು ಫೈನಲ್ ಪಂದ್ಯ 29 ರಂದು ನಡೆಯಲಿದೆ. ಇದನ್ನೂ ಓದಿ: ಆಫ್ರಿಕಾ ಸರಣಿಗೆ ತಂಡ ಪ್ರಕಟ – ಟಿ20 ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್, ಡಿಕೆ ವಾಪಸ್, ಉಮ್ರಾನ್ ಮಲಿಕ್‍ಗೆ ಸ್ಥಾನ
ಸೂಪರ್ ಓವರ್ ರಿಸಲ್ಟ್:
ಮಳೆ ಬಂದು ನಿಗದಿತ ಸಮಯದಲ್ಲಿ ಪಂದ್ಯ ನಡೆಯದೇ ಇದ್ದರೆ ಈ ವೇಳೆ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸುವ ಸಾಧ್ಯತೆ ಇದೆ. ಅಲ್ಲದೇ 2 ಗಂಟೆಗಳ ಕಾಲ ಹೆಚ್ಚಿನ ಅವಧಿಯನ್ನು ಈಗಾಗಲೇ ನಿಗದಿಪಡಿಸಲಾಗಿದ್ದು, ಒಂದು ವೇಳೆ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗದೇ ಇದ್ದರೆ 9:30ಕ್ಕೆ ಪ್ರಾರಂಭಿಸಲು ಐಪಿಎಲ್ ಆಡಳಿತ ಮಂಡಳಿ ಪ್ಲಾನ್ ಮಾಡಿಕೊಂಡಿದೆ. ಜೊತೆಗೆ ಎರಡು ತಂಡಗಳಿಗೂ ತಲಾ 5 ಓವರ್‌ಗಳ ಆಟದ ಮೂಲಕ ಫಲಿತಾಂಶ ಕಾಣುವಂತೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.