ನವದೆಹಲಿ: ಐಫೋನ್ ಫ್ಯಾಕ್ಟರಿಯನ್ನು (iPhone Factory) ತೆಲಂಗಾಣದಲ್ಲಿ, ಕರ್ನಾಟಕದಲ್ಲಿ ಪ್ರಾಜೆಕ್ಟ್ ಎಲಿಫೆಂಟ್ (Project Elephant) ಆರಂಭಿಸಲಾಗುವುದು ಎಂದು ತೈವಾನಿನ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪನಿ ಫಾಕ್ಸ್‌ಕಾನ್ (Foxconn) ಅಧಿಕೃತವಾಗಿ ತಿಳಿಸಿದೆ.
ಫಾಕ್ಸ್‌ಕಾನ್ ಫ್ಯಾಕ್ಟರಿ ಸಂಬಂಧ ತೆಲಂಗಾಣ (Telangana) ಮತ್ತು ಕರ್ನಾಟಕದ (Karnataka) ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ನಮ್ಮ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ಸ್ಥಾಪನೆಯಾಗಲಿದ ಎಂದು ತಿಳಿಸಿದ್ದರು
Advertisement
Mr. Liu wrote that he now has a new friend in India in Hon’ble CM and looks forward to working with him in the future. Conveyed gratitude for the hospitality extended to the @HonHai_Foxconn team that visited Hyderabad earlier this month.
— Telangana CMO (@TelanganaCMO) March 6, 2023
Advertisement
ಎರಡು ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ನಡೆಯುತ್ತಿರುವಾಗಲೇ ಫಾಕ್ಸ್‌ಕಾನ್ ಕಳೆದ ವಾರ ನಾವು ಯಾವುದೇ ರಾಜ್ಯದಲ್ಲಿ ಐಫೋನ್ ಘಟಕ ಸ್ಥಾಪನೆ ಸಂಬಂಧ ಅಧಿಕೃತ ಸಹಿ ಹಾಕಿಲ್ಲ ಎಂದು ತಿಳಿಸಿತ್ತು. ಇಂದು ಅಧಿಕೃತವಾಗಿ ಫಾಕ್ಸ್‌ಕಾನ್ ಕಂಪನಿ ತೆಲಂಗಾಣದಲ್ಲಿ ಐಫೋನ್ ಘಟಕ ಸ್ಥಾಪನೆ ಮಾಡುವುದಾಗಿ ತಿಳಿಸಿದೆ. ಕರ್ನಾಟಕದಲ್ಲಿ ʼಪ್ರಾಜೆಕ್ಟ್ ಎಲಿಫೆಂಟ್ʼ ಹೆಸರಿನಲ್ಲಿ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದೆ.
Advertisement
Advertisement
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 300 ಎಕರೆ ಪ್ರದೇಶದಲ್ಲಿ ಬರಲಿರುವ ಹೊಸ ಘಟಕವು ಭಾರತದಲ್ಲಿ ಫಾಕ್ಸ್‌ಕಾನ್‌ನ ಅತಿದೊಡ್ಡ ಘಟಕವಾಗಿದೆ ಮತ್ತು ಮುಂದಿನ 10 ವರ್ಷಗಳಲ್ಲಿ 1 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಘಟಕದಲ್ಲಿ ಇತರೇ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಭಾಗಗಳನ್ನು ತಯಾರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಕರ್ನಾಟಕದ ಫಾಕ್ಸ್‌ಕಾನ್ 5.7 ಸಾವಿರ ಕೋಟಿ ರೂ. ಹೂಡಿಕೆ – 1 ಲಕ್ಷ ಉದ್ಯೋಗ ಸೃಷ್ಟಿ
ಫಾಕ್ಸ್‌ಕಾನ್ ಕಂಪನಿಯು ಈಗಾಗಲೇ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುತ್ತಿದೆ. ಇದು ತಮಿಳುನಾಡು, ಆಂಧ್ರಪ್ರದೇಶದಲ್ಲಿ ಘಟಕ ತೆರೆದಿದ್ದು ಕರ್ನಾಟಕದ ಕೋಲಾರದ ನರಸಾಪುರ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ವಿಸ್ಟ್ರಾನ್ ಕಂಪನಿ ಐಫೋನ್ ತಯಾರಿಸುತ್ತಿದೆ.