ಬೆಂಗಳೂರು: ಡಿಜಿಟಲ್ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ವಲಯಗಳಲ್ಲಿ ಹೆಸರಾಗಿರುವ ಲಕ್ಸಂಬರ್ಗ್ ಮೂಲದ ಇನ್ನೋವೇಶನ್ ಪ್ಲಾಟ್‌ಫಾರಂ ಕ್ಯಾಪಿಟಲ್ (IPC) ಕಂಪನಿಯು ರಾಜ್ಯದಲ್ಲಿ ಒಟ್ಟು ಮೂರು ಹಂತಗಳಲ್ಲಿ 83 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ತಿಳಿಸಿದ್ದಾರೆ.
ಸೋಮವಾರ ತಮ್ಮನ್ನು ಇಲ್ಲಿ ಭೇಟಿಯಾದ ಕಂಪನಿಯ ಉನ್ನತ ಮಟ್ಟದ ನಿಯೋಗದ ಜೊತೆ ಅವರು ಮಾತುಕತೆ ನಡೆಸಿದರು. ಕಂಪನಿಯ ವ್ಯವಸ್ಥಾಪಕ ಪಾಲುದಾರ ಗುರುಶರಣ್ ಸಿಂಗ್ ಕುಂದನ್ ಈ ನಿಯೋಗದ ನೇತೃತ್ವ ವಹಿಸಿದ್ದರು. ಇದನ್ನೂ ಓದಿ: ಹಾವೇರಿ ಜಿಲ್ಲೆಗೆ 2 ತಿಂಗಳು ಪ್ರಮೋದ್ ಮುತಾಲಿಕ್ ಪ್ರವೇಶ ನಿರ್ಬಂಧ

ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಐಪಿಸಿ ಕಂಪನಿಯು ಬೆಂಗಳೂರು-ತುಮಕೂರು ಇಂಟಿಗ್ರೇಟೆಡ್ ಗ್ರೀನ್ ಹೈಡ್ರೋಜನ್ ಮತ್ತು ಕ್ರಮವಾಗಿ 2,500 ಮೆಗಾವ್ಯಾಟ್ ಐಟಿ ಲೋಡ್ ಮತ್ತು 1,000 ಮೆಗಾವ್ಯಾಟ್ ಸಾಮರ್ಥ್ಯದ ಹೈಪರ್ ಸ್ಕೇಲ್ ಡೇಟಾ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿವೆ. ಇದಕ್ಕಾಗಿ ಕಂಪನಿಯು ಮೊದಲ ಹಂತದಲ್ಲಿ 17,114 ಕೋಟಿ ರೂ. ಹೂಡಿಕೆ ಮಾಡಲು ಬಯಸಿದೆ ಎಂದಿದ್ದಾರೆ. ಇದನ್ನೂ ಓದಿ: ಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ – ಡಿಕೆಶಿ ಘೋಷಣೆ
ಕಂಪನಿಯು ಮೊದಲ ಹಂತದಲ್ಲಿ ತಲಾ 200 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಡೇಟಾ ಕೇಂದ್ರಗಳನ್ನು ಮತ್ತು 500 ಮೆಗಾವ್ಯಾಟ್ ಸಾಮರ್ಥ್ಯದ ಗ್ರೀನ್ ಹೈಡ್ರೋಜನ್ ಸ್ಥಾವರ ಮತ್ತು ಇಂಧನ ಸಂಕೀರ್ಣವನ್ನು ಸ್ಥಾಪಿಸಲಿದೆ. ಇದಕ್ಕಾಗಿ ಕಂಪನಿಯು 1,000 ಎಕರೆ ಜಾಗ ಕೇಳಿದೆ. ಇದರಲ್ಲಿ ಅದು ಎರಡೂ ಸೌಕರ್ಯಗಳಿಗೆ ತಲಾ 400 ಎಕರೆ ಬಳಸುವ ಉದ್ದೇಶ ಹೊಂದಿದೆ. ಉಳಿದ 200 ಎಕರೆಯು ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಮೀಸಲಿರಲಿದೆ. ಜೊತೆಗೆ 13 ಎಂಎಲ್‌ಡಿ ನೀರು ಅಗತ್ಯವಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇದರಲ್ಲಿ ಶೇಕಡ 85ರಷ್ಟನ್ನು ಸಂಸ್ಕರಿತ ಮೂಲಗಳಿಂದ ಕೊಡುವ ಚಿಂತನೆ ಇದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಪಾರ್ಕಿಂಗ್ ಶುಲ್ಕಕ್ಕೆ ರಾಮಲಿಂಗಾರೆಡ್ಡಿ ಅಸಮಾಧಾನ; ಸಿಎಂಗೆ ಪತ್ರ
ನಿಯೋಗದಲ್ಲಿ ಕಂಪನಿಯ ಸಿಇಒ ಪ್ರದೀಪ್ ಕಾರಟಗಿ, ವ್ಯವಸ್ಥಾಪಕ ಪಾಲುದಾರರಾಗಿರುವ ಜೇಮ್ಸ್ ಕೋಲ್ಟರ್, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಡ್ಸಾ ಕ್ಯಾಬ್ರೆರ, ಕಾರ್ಪೊರೇಟ್ ವ್ಯವಹಾರಗಳ ಭಾರತೀಯ ಮುಖ್ಯಸ್ಥ ಡಿ ಕೆ ಅರ್ಜುನ್ ಮುಂತಾದವರಿದ್ದರು. ಇದನ್ನೂ ಓದಿ: ಯಾದಗಿರಿ | ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ
