ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಗ ಪ್ರದರ್ಶನ ಮಾಡಲಾಯಿತು.
ಅಟಾರಿ ವಾಘಾ ಗಡಿಯಲ್ಲಿ ಯೋಗಭ್ಯಾಸ ಮಾಡಲಾಯಿತು. ರಾಜಸ್ಥಾನದ ಗಡಿ ಮತ್ತು ಸಿಯಾಚಿನ್‌ನಲ್ಲೂ ಯೋಗ ಪ್ರದರ್ಶನ ನೀಡಲಾಯಿತು. ಜೊತೆಗೆ ದೆಹಲಿಯ ಸಂಸತ್ ಭವನದ ಆವರಣದಲ್ಲಿ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ಯೋಗಾಚರಣೆ ನಡೆಯಿತು.
10ನೇ ಯೋಗ ದಿನದ ಹಿನ್ನೆಲೆಯಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ಪ್ರದರ್ಶನ ಮಾಡಲಾಯಿತು. ದಾಲ್ ಸರೋವರ ತೀರದಲ್ಲಿ ಮೋದಿ ಯೋಗಾಸನ ಮಾಡಿದರು.
ದೇಶ-ವಿದೇಶಗಳಲ್ಲಿ ಹಲವೆಡೆ ಯೋಗ ಪ್ರದರ್ಶನ ನಡೆದಿದೆ. ಕರ್ನಾಟಕದ ಬಳ್ಳಾರಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಸಿಎಂ ಜೊತೆ ನಟಿ ಶ್ರೀಲೀಲಾ ಯೋಗಾಸನ ಮಾಡಿದರು.