ಭೋಪಾಲ್: ನಡುರಸ್ತೆಯಲ್ಲೇ ದೊಣ್ಣೆ ಹಿಡಿದು ಎರಡು ಸಮುದಾಯದ (Two Communities) ನಡುವೆ ಮಾರಾಮಾರಿ ನಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.
ಭಾನುವಾರ ನವರಾತ್ರಿ (Navaratri) ಆಚರಣೆಯ ಕುರಿತು ಮಧ್ಯಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕೋಪ ಆಕ್ರೋಶಕ್ಕೆ ತಿರುಗಿ ಎರಡು ಸಮುದಾಯದವರು ಕೋಲಿನಿಂದ ಹೊಡೆದಾಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ದೇವರು ಶಿವ ಬಲಿ ಕೇಳಿದ್ದಾನೆಂದು ಗಾಂಜಾ ಸೇವಿಸಿ 6 ವರ್ಷದ ಬಾಲಕನ ಕೊಂದ ಹುಡುಗರು!
ಅಗರ್ ಜಿಲ್ಲೆಯ (Agar District) ಕಂಕರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದುರ್ಗಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದ ಕಾರಣಕ್ಕೆ ಮೇಲ್ಜಾತಿಯವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮದ ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಮತ್ತೊಂದೆಡೆ ಗರ್ಬಾ ಕಾರ್ಯಕ್ರಮದಲ್ಲಿ ಇಬ್ಬರು ಹುಡುಗಿಯರು ಮಾಡಿದ ಅಶ್ಲೀಲ ನೃತ್ಯದಿಂದ ಜಗಳ ಆರಂಭವಾಯಿತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದುರ್ಗಾ ಪೂಜೆ ವೇಳೆ ಪೆಂಡಾಲ್‍ಗೆ ಬೆಂಕಿ – ಮಕ್ಕಳು ಸೇರಿದಂತೆ ಐವರು ಸಾವು, 66 ಮಂದಿಗೆ ಗಾಯ
ಒಂದು ಹಾಡಿಗೆ ಮಾಡಿದ ನೃತ್ಯವೇ ಕಾರ್ಯಕ್ರಮದಲ್ಲಿ ಜಗಳಕ್ಕೆ ಕಾರಣ ಎನ್ನಲಾಗುತ್ತಿದ್ದು, ಇದೀಗ ಎರಡು ಸಮುದಾಯದವರು ದೂರು ದಾಖಲಿಸಿದ್ದಾರೆ. ಹೀಗಾಗಿ ಕೆಲವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನವಲ್ ಸಿಂಗ್ ಸಿಸೋಡಿಯಾ ಹೇಳಿದ್ದಾರೆ.