ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಪಿಪಿ ಪಕ್ಷದ್ದೇ ಹವಾ ಸೃಷ್ಟಿಯಾಗಿದ್ದು, ಪಕ್ಷದ ಸಂಸ್ಥಾಪಕರಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ನಿಂತರೂ ಸುದ್ದಿ, ಕುಳಿತರೂ ಸುದ್ದಿಯಾಗುತ್ತಿದ್ದಾರೆ. ಮತ್ತೊಂದು ಅಚ್ಚರಿ ಸಂಗತಿ ಎಂದರೆ ರೆಡ್ಡಿಯ ಚಲನವಲನದ ಮೇಲೆ ರಾಜ್ಯ ಗುಪ್ತಚರ ಇಲಾಖೆ ಹಾಗೂ ಸಿಬಿಐ ಕಣ್ಣಿಟ್ಟಿದೆ.
2008ರಲ್ಲಿ ಆಪರೇಷನ್ ಕಮಲ ಎನ್ನುವ ಖ್ಯಾತಿ ಪಡೆದುಕೊಂಡಿದ್ದ ರಾಜ್ಯ ಬಿಜೆಪಿ (BJP) ಪಕ್ಷವು ಅಧಿಕಾರ ಪಡೆದುಕೊಳ್ಳಲು ಜನಾರ್ದನ ರೆಡ್ಡಿಯವರು ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ರೆಡ್ಡಿ ಅಕ್ರಮ ಗಣಿಗಾರಿಕೆ, ಬೇಲ್ ಡೀಲ್ ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಸುಮಾರು ವರ್ಷಗಳ ಕಾಲ ಜೈಲು ಸೇರಿದ್ದರು. ನಂತರ ಜನಾರ್ದನ ರೆಡ್ಡಿಯವರು ಸುಪ್ರೀಂ ಕೋರ್ಟ್‍ನ ಷರತ್ತು ಬದ್ಧ ಅನುಮತಿಯ ಮೇರೆಗೆ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ.
Advertisement
Advertisement
ಸುಮಾರು ವರ್ಷಗಳಿಂದ ಸಕ್ರೀಯ ರಾಜಕೀಯದಿಂದ ದೂರವಾಗಿದ್ದ ಜನಾರ್ದನ ರೆಡ್ಡಿ ಗಂಗಾವತಿಯಿಂದ (Gangavati) ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸ್ವಂತ ಪಕ್ಷವನ್ನು ಕಟ್ಟಿಕೊಂಡು ರಾಜ್ಯದಲ್ಲಿ ಸಂಚಲನವನ್ನು ಮೂಡಿಸಲು ರೆಡ್ಡಿ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರಗಳವಾರು ಓಡಾಟವನ್ನು ನಡೆಸುತ್ತಿದ್ದಾರೆ. ಅವರ ಮೇಲಿರುವ ಆರೋಪಗಳೂ ಇನ್ನೂ ಮುಕ್ತವಾಗದೇ ಇರುವ ಹಿನ್ನೆಲೆಯಲ್ಲಿ ಸಿಬಿಐ (CBI) ಹಾಗೂ ರಾಜ್ಯ ಗುಪ್ತದಳ ಇಲಾಖೆಯವರು ಜನಾರ್ದನ ರೆಡ್ಡಿ ಕಾಲಿಟ್ಟ ಕಡೆಯಲ್ಲ ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ
Advertisement
ಮುಂಚಿತವಾಗಿಯೇ ಮಾಹಿತಿ ಸಂಗ್ರಹ : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಸ್ವಂತ ಪಕ್ಷವನ್ನು ಕಟ್ಟಿದ ಮೇಲೆ ರಾಜ್ಯದ ನಾನಾ ಕಡೆಗಳಲ್ಲಿ ಹಗಲು – ಇರುಳು ಎನ್ನದೆ ತಿರುಗಾಟ ನಡೆಸಿದ್ದಾರೆ. ಪಕ್ಷವನ್ನು ಬಲಿಷ್ಠಗೊಳಿಸಬೇಕು. ಚುನಾವಣೆಯಲ್ಲಿ ಜಯ ಸಾಧಿಸಬೇಕು ಎನ್ನುವ ಛಲದೊಂದಿಗೆ ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಆದರೆ ಅವರ ಸಂಪೂರ್ಣ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಜನಾರ್ದನ್ ರೆಡ್ಡಿ ಎಲ್ಲಿ ವಾಸ್ತವ್ಯ ಹುಡುತ್ತಾರೆ? ಎಲ್ಲೆಲ್ಲಿ ಪ್ರಯಾಣ ಮಾಡುತ್ತಾರೆ? ಗಂಗಾವತಿಯಲ್ಲಿ ವಾಸ್ತವ್ಯ ಹುಡುವುದು, ಬೆಂಗಳೂರಿಗೆ (Bengaluru) ಹೋಗುವುದು, ನೆರೆಯ ಜಿಲ್ಲೆ, ಕ್ಷೇತ್ರ ಸಂಚಾರ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಮುಂಚಿತವಾಗಿಯೇ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ, ಬೆಂಗಳೂರು ಭಾಗದಲ್ಲಿ ರೆಡ್ಡಿ ರಾಜಕೀಯವಾಗಿ ಯಾರನ್ನೇ ಸಂಪರ್ಕ ಮಾಡಿದರೂ ಮಫ್ತಿ ಪೊಲೀಸರು ಅದರ ಆಳ ಅಗಲ ಕೆದಕುತ್ತಿದ್ದಾರೆ. ಸಾರ್ವಜನಿಕ ಸಭೆ, ಸಮಾರಂಭ, ಬಹಿರಂಗ ಸಮಾವೇಶ, ಜನಾರ್ದನ ರೆಡ್ಡಿ ನಡೆಸುವ ಗೌಪ್ಯ ಸಭೆಗಳಿಗೆ ಕುದ್ದು ಗುಪ್ತಚರ ಇಲಾಖೆಯ ಡಿವೈಎಸ್ಪಿ, ಪಿಎಸ್‍ಐ ಹಂತದ ಅಧಿಕಾರಿಗಳೇ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
Advertisement
ಅಭ್ಯರ್ಥಿಗಳಲ್ಲಿ ಆತಂಕದ ಛಾಯೆ: ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆಯನ್ನು ಮಾಡುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೆ ರಾಜ್ಯದ ನಾನಾ ಕ್ಷೇತ್ರಗಳಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಸುಮಾರು 35 ರಿಂದ 40 ಅಭ್ಯರ್ಥಿಗಳನ್ನು ಸ್ಪರ್ಧಿಸಲಿದ್ದಾರೆ ಎಂದು ರೆಡ್ಡಿಯವರು ಘೋಷಣೆ ಮಾಡಿದ್ದಾರೆ. ಗುಪ್ತಚರ ಇಲಾಖೆಯವರು ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಗಳು ಯಾರಾಗಲಿದ್ದಾರೆ. ಅವರ ಹಿನ್ನೆಲೆ ಏನು, ಅವರ ಆದಾಯದ ಮೂಲ ಯಾವುದು ಎನ್ನುವುದನ್ನು ಗುಪ್ತವಾಗಿ ಮಾಹಿತಿ ಕಲೆ ನೀಡಲು ಮುಂದಾಗಿದೆ. ಇದನ್ನೂ ಓದಿ: ಗೋರಖನಾಥ ದೇವಸ್ಥಾನದ ಮೇಲೆ ದಾಳಿ : ಐಐಟಿಯಲ್ಲಿ ಓದಿದ ಉಗ್ರನಿಗೆ ಗಲ್ಲು ಶಿಕ್ಷೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k