ಪ್ರತಿಭಟನೆ ಮಾಡಿದವ್ರಿಂದ್ಲೇ ಡೀಲ್- ಸ್ವಾಮೀಜಿ ರಾಸಲೀಲೆ ಪ್ರಕರಣದ ಇನ್‍ಸೈಡ್ ಸ್ಟೋರಿ

Public TV
2 Min Read
swamiji raasaleele 1

ಬೆಂಗಳೂರು: ಇದು ಜಂಗಮ ಮಠ ದಯಾನಂದ ಸ್ವಾಮೀಜಿ ರಾಸಲೀಲೆ ಪ್ರಕರಣದ ಇನ್‍ಸೈಡ್ ಸ್ಟೋರಿ. ಸ್ವಾಮೀಜಿ ಬಳಿ ಡೀಲ್‍ಗೆ ಹೋದವರ ಮಾಹಿತಿ ಬಹಿರಂಗವಾಗಿದೆ. ಖೆಡ್ಡಾಕ್ಕೆ ಬಿದ್ದ ಸ್ವಾಮೀಜಿ ಬಳಿ ಎಷ್ಟು ದುಡ್ಡು ಕಿತ್ತುಕೊಂಡ್ರು ಎಂಬ ಬಗ್ಗೆ ಹಾಗೂ 2014ರಿಂದ ನಡೆಯುತ್ತಿರೋ ಡೀಲ್‍ನ ಮಾಹಿತಿಯನ್ನ ಸ್ವತಃ ದಯಾನಂದ ಸ್ವಾಮೀಜಿ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾನೆ.

swamiji raasaleele

5 ಕೋಟಿಗೆ ಬೇಡಿಕೆ: ದಯಾನಂದ ಸ್ವಾಮೀಜಿಯ ಪ್ರಕಾರ ಪ್ರತಿಭಟನೆಗೆ ಇಳಿದವರಿಂದಲೇ ರಾಸಲೀಲೆಯ ಇಡೀ ಡೀಲ್ ನಡೆದಿದೆ. ರಾಸಲೀಲೆ ರಹಸ್ಯ ವಿಡಿಯೋ ಮಾಡಿದ್ದು 2014 ಜನವರಿ 4 ರಂದು. ಇದಾದ ಬಳಿಕ 2014 ಜನವರಿ 6 ರಂದು ನನ್ನ ಬಳಿ ಡೀಲ್‍ಗೆ ಬಂದ್ರು. ನನ್ನ ಬಳಿ 5 ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ರು. ಆ ರೀತಿಯ ವಿಡಿಯೋ ಏನು ಇಲ್ಲ ಅಂದಾಗ ಮೊಬೈಲ್‍ನಲ್ಲಿ ವಿಡಿಯೋ ತೋರಿಸಿದ್ರು. ಬಸವರಾಜ್, ಮಹೇಶ್, ಹಿಮಾಚಲಪತಿ, ಸೂರ್ಯ, ಧರ್ಮೇಂದ್ರ ಅಲಿಯಾಸ್ ಶಂಕರ್ ಈ ಐವರೇ ನನ್ನ ಬಳಿ ದುಡ್ಡು ತೆಗೆದುಕೊಂಡಿದ್ದಾರೆ ಅಂತ ಸ್ವಾಮೀಜಿ ಹೇಳಿದ್ದಾನೆ.

swamiji

ಮೊದಲು ನನ್ನ ಬಳಿ ಡೀಲ್‍ಗೆ ಬಂದಿದ್ದು ಧರ್ಮೇಂದ್ರ ಅಲಿಯಾಸ್ ಶಂಕರ್ ಎಂಬ ವ್ಯಕ್ತಿ. ಐದು ಕೋಟಿ ಕೊಡದಿದ್ರೆ ನಾಳೆ ಟಿವಿಯಲ್ಲಿ ನಿಮ್ಮ ಮಾನ ಮರ್ಯಾದೆ ಹರಾಜಾಗುತ್ತೆ ಎಂದು ಹೆದರಿಸಿದ. ಕೊನೆಗೆ 2 ಕೋಟಿ ಎಂದು ಹೇಳಿದ ಶಂಕರ್ ನಂತರ 50 ಲಕ್ಷಕ್ಕೆ ಫೈನಲ್ ಮಾಡಿದ. ಒಂದು ವರ್ಷದ ತನಕ ಆಗಾಗ ಬಂದು 45 ಲಕ್ಷ ಹಣ ತೆಗೆದುಕೊಂಡ್ರು.

raasaleele 1

ನಂಗೂ ಹಣ ಕೊಡಿ ಎಂದ ಸೂರ್ಯ: ಮೊದಲ ಡೀಲ್ ಬಳಿಕ ಮತ್ತೆ ಡೀಲ್‍ಗೆ ಬಂದ ವ್ಯಕ್ತಿ ಸೂರ್ಯ ಅಂತ. ಈ ವಿಡಿಯೋ ಮಾಡಿಸಿದ್ದು ನಿಮ್ಮ ಊರಿನವರೇ. ನೀವು ಕೊಟ್ಟಿರೋ ದುಡ್ಡಿನಲ್ಲಿ ನಂಗೆ ನಯಾಪೈಸೆ ಕೊಟ್ಟಿಲ್ಲ. ನನಗೆ 20 ಲಕ್ಷ ಕೊಡಿ ಅಂತ ಡಿಮ್ಯಾಂಡ್ ಮಾಡಿದ್ರು. ಎರಡು ತಿಂಗಳು ಟೈಮ್ ತಗೊಂಡು ನಾನು 10 ಲಕ್ಷ ಸಾಲ ಮಾಡಿ ದುಡ್ಡು ಕೊಟ್ಟೆ ಎಂದು ಹೇಳಿದ್ದಾನೆ.

raasaleele

 

ಒಟ್ಟು 80 ಲಕ್ಷ ನೀಡಿದ್ದ ಸ್ವಾಮೀಜಿ: ಎರಡು ಡೀಲ್ ಮುಗಿದ ಬಳಿಕವೂ ಮೂರನೇ ಡೀಲ್‍ಗೆ ಮತ್ತೆ ಮಹೇಶ್ ಎಂಬ ವ್ಯಕ್ತಿ ಬಂದ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿ ವಿಷ ಸೇವಿಸಿದ್ದೆ. ಪೊಲೀಸರ ಬಳಿ ಏನೂ ಹೇಳ್ಬೇಡಿ ಎಂದು ಹಿಮಾಚಲಪತಿ ಹೇಳಿದ್ದ. ಸಿಡಿ ಮಾಡಿರುವವರ ಜೊತೆ ಮಾತಾಡಿ ಸೆಟ್ಲ್‍ಮೆಂಟ್ ಮಾಡ್ತೀನಿ ಎಂದಿದ್ದ. ಒಬ್ಬೊಬ್ಬರೇ ಬಂದು ಡೀಲ್ ಮಾಡಿಕೊಂಡು ಒಟ್ಟು 80 ಲಕ್ಷ ದುಡ್ಡು ತಗೊಂಡು ಹೋದ್ರು ಅಂತ ಸ್ವಾಮೀಜಿ ವಿವರಿಸಿದ್ದಾನೆ.

raasaleele 3

ಹಣ ಪಡೆದ ಮೇಲೂ ಸಿಡಿ ಬಿಡುಗಡೆಗೊಳಿಸಿದ್ದು ಯಾಕೆ?: 184ನೇ ಸರ್ವೇ ನಂಬರ್‍ನಲ್ಲಿ ನಮ್ಮ ಮಠಕ್ಕೆ ಸೇರಿದ 9 ಎಕರೆ ಜಮೀನಿದೆ. ನಾಲ್ಕು ಎಕರೆ ಜಾಗಕ್ಕೆ ಡಿಮ್ಯಾಂಡ್ ಮಾಡಿದ್ರು. ಮಠದ ಆಸ್ತಿಯ ಮೇಲೆ ಕಣ್ಣು ಹಾಕಿದಾಗ ನಾನು ಆಗಲ್ಲ ಎಂದೆ. ಇದೇ ಕಾರಣಕ್ಕೆ ಗ್ಯಾಂಗ್ ಕಟ್ಟಿಕೊಂಡು ಮಾಧ್ಯಮಗಳಿಗೆ ಸಿಡಿ ರಿಲೀಸ್ ಮಾಡಿದ್ರು. ಮೂರ್ನಾಲ್ಕು ದಿನದಲ್ಲಿ ಬಂದು ಪೊಲೀಸ್ ಸ್ಟೇಷನ್‍ಗೆ ದೂರು ಕೊಡುತ್ತೇನೆ ಅಂತ ಪಬ್ಲಿಕ್ ಟಿವಿಗೆ ದಯಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾನೆ.

https://www.youtube.com/watch?v=s_FMyEPUKf4

https://www.youtube.com/watch?v=9JvRzC7ZT_g

raasaleele 2

raasaleele 4

raasaleele 5

Share This Article
Leave a Comment

Leave a Reply

Your email address will not be published. Required fields are marked *