ಭಾರತದ ಹಿರಿಯ ಸೋಮಾರಿ ಕರಡಿ ಸಾವು

Public TV
1 Min Read
sloth bear

ಭೋಪಾಲ್: ಭಾರತದ ಅತ್ಯಂತ ಹಿರಿಯ ಸೋಮಾರಿ ಕರಡಿ ಸಾವನ್ನಪ್ಪಿದೆ. ಗುಲಾಬೋ ಹೆಸರಿನ ಹೆಣ್ಣು ಕರಡಿ ಭೋಪಾಲ್‌ನ ವಾನ್ ವಿಹಾರ್ ರಾಷ್ಟ್ರೀಯ ಉದ್ಯಾನವನ ಹಾಗೂ ಮೃಗಾಲಯದಲ್ಲಿ ಸೋಮವಾರ ಮುಂಜಾನೆ ಮೃತಪಟ್ಟಿದೆ.

ಗುಲಾಬೋ ವಾನ್ ವಿಹಾರ್ ರಾಷ್ಟ್ರೀಯ ಉದ್ಯಾನವನದ ಆಕರ್ಷಣೆಗಳಲ್ಲಿ ಒಂದಾಗಿದ್ದು, ಭಾರತದ ಅತ್ಯಂತ ಹಿರಿಯ ಸೋಮಾರಿ ಕರಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕರಡಿ ತನ್ನ 40ನೇ ವಯಸ್ಸಿನಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇದನ್ನೂ ಓದಿ: ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಂತರ ರೂ.ಮೌಲ್ಯದ ಆಸ್ತಿ!- ಕಾರಣವೇನು ಗೊತ್ತಾ?

sloth bear

ಗುಲಾಬೋ ಸೋಮಾರಿ ಕರಡಿಯನ್ನು 2006ರಲ್ಲಿ 25 ವರ್ಷವಿದ್ದಾಗ ಬೀದಿ ಪ್ರದರ್ಶನದಿಂದ ರಕ್ಷಿಸಲಾಗಿತ್ತು. ವಯಸ್ಸಾಗಿದ್ದ ಗುಲಾಬೋ ಅಂಗಾಂಗ ವೈಫಲ್ಯದ ಕಾರಣ ಮೃತಪಟ್ಟಿದೆ ಎಂದು ಶವಪರೀಕ್ಷೆಯಲ್ಲಿ ತಿಳಿದುಬಂದಿದೆ. ಉದ್ಯಾನವನದ ಸಿಬ್ಬಂದಿ ಗುಲಾಬೋವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದನ್ನೂ ಓದಿ: ಹಸುಗೂಸನ್ನು ಹೊತ್ತೊಯ್ದು ವಾಟರ್ ಟ್ಯಾಂಕ್‍ಗೆ ಹಾಕಿದ ಖತರ್ನಾಕ್ ಕೋತಿಗಳು

ವಾನ್ ವಿಹಾರ್ ರಾಷ್ಟ್ರೀಯ ಉದ್ಯಾನವನ ಸೋಮಾರಿ ಕರಡಿಗಳ ರಕ್ಷಣಾ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ನಡೆಸುತ್ತಿದೆ. ಇವುಗಳ ಆರೈಕೆಯನ್ನು ವೈಲ್ಡ್ ಲೈಫ್ ಸಂಸ್ಥೆ ನೋಡಿಕೊಳ್ಳುತ್ತದೆ ಎಂದು ವರದಿಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *