ಲಕ್ನೋ: ಮನೆಯೊಳಗೆ ಮಲಗಿದ್ದ 2ತಿಂಗಳ ಮಗುವನ್ನು ಹೊತ್ತೊಯ್ದ ಕೋತಿಗಳ ಗ್ಯಾಂಗ್, ಕಂದಮ್ಮನನ್ನು ನೀರಿನ ಟ್ಯಾಂಕ್‍ಗೆ ಹಾಕಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಾಗ್ಪತ್‍ನಲ್ಲಿ ನಡೆದಿದೆ.
ಟೆರೇಸ್ ಮೇಲಿನಿಂದ ರೂಮ್‍ಗೆ ನುಗ್ಗಿದ ಕೋತಿಗಳು ಮಲಗಿರುವ ಮಗುವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿವೆ. ಈ ವಿಚಾರ ತಿಳಿಯದ ಕುಟುಂಬಸ್ಥರು ಮಗುವಿಗಾಗಿ ಹುಡುಕಾಟ ನಡೆಸಿದಾಗ ಮಗು ಮೃತ ದೇಹ ನೀರಿನ ಟ್ಯಾಂಕ್‍ನಲ್ಲಿ ತೇಲುತ್ತಿತ್ತು. ಇದನ್ನೂ ಓದಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ – ಫೆ.10ರಿಂದ ಮತದಾನ, ಮಾ.10ರಂದು ಮತ ಎಣಿಕೆ
Advertisement
Advertisement
ಅಜ್ಜಿಯೊಂದಿಗೆ ಟೆರೇಸ್‍ನ ರೂಮ್‍ನಲ್ಲಿ ಮಗು ಮಲಗಿತ್ತು. ರೂಮ್‍ನ ಬಾಗಿಲು ತೆರೆದೇ ಇತ್ತು. ಆಗ ಅಲ್ಲಿಗೆ ಬಂದ ಕೋತಿಗಳ ಹಿಂಡು ಮಗುವನ್ನು ಎಳೆದುಕೊಂಡು ಹೋಗಿವೆ. ಸ್ವಲ್ಪ ಸಮಯದ ಬಳಿಕ ಅಜ್ಜಿ ಎಚ್ಚರವಾಗಿ ನೋಡಿದಾಗ ಮಗು ಕಾಣಿಸದೆ ಇರುವುದರಿಂದ ಗಾಬರಿಯಾಗಿದ್ದಾರೆ. ಕುಟುಂಬಸ್ಥರು ಮಗುವನ್ನು ಹುಡುಕಿದ್ದಾರೆ. ಮಗು ಮೃತ ದೇಹ ನೀರಿನ ಟ್ಯಾಂಕ್‍ನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಪಂಜಾಬ್ ಚುನಾವಣೆ – ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆ
Advertisement
Advertisement
ಚಾಂದಿನಗರ ಠಾಣೆ ಗೃಹ ಅಧಿಕಾರಿ ಒ.ಪಿ.ಸಿಂಗ್ ಮಾತನಾಡಿ, ಕೋತಿಗಳ ಹಾವಳಿ ಹೆಚ್ಚಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ತಿಳಿಸುತ್ತಿದ್ದೇವೆ ಎಂದಿದ್ದಾರೆ.