ರಾಯ್ಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಅತಿ ಉದ್ದವಾದ ಸರಕು ರೈಲನ್ನು ಪರೀಕ್ಷಿಸಲಾಗಿದೆ. ಬರೋಬ್ಬರಿ 3.5 ಕಿ.ಮೀ ಉದ್ದದ ಸೂಪರ್ ವಾಸುಕಿ ರೈಲು ಛತ್ತೀಸ್‌ಗಢದ ಕೊರ್ಬಾದಿಂದ ನಾಗಪುರದ ರಾಜನಂದಗಾವ್‌ಗೆ ಓಡಾಟ ನಡೆಸಿದೆ.
ಸೂಪರ್ ವಾಸುಕಿ ರೈಲು ಇದುವರೆಗೆ ಭಾರತೀಯ ರೈಲ್ವೇಯಿಂದ ನಡೆಸಲ್ಪಟ್ಟ ಅತಿ ಉದ್ದವಾದ ಹಾಗೂ ಭಾರವಾದ ಸರಕು ಸಾಗಣೆ ರೈಲಾಗಿದೆ. ಇದು ರೈಲ್ವೇ ನಿಲ್ದಾಣವನ್ನು ದಾಟಲು ಸುಮಾರು 4 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
Advertisement
Super Vasuki – India’s longest (3.5km) loaded train run with 6 Locos & 295 wagons and of 25,962 tonnes gross weight. @Infra_VinayakCh @KanchanGupta@avadhootashok#AmritMahotsav???????????????? pic.twitter.com/0tCMDNI1WA
— Ordinary Being (@NayyarSanjeev) August 17, 2022
295 ಬಂಡಿಗಳುಳ್ಳ ರೈಲು ಸುಮಾರು 27 ಸಾವಿರ ಟನ್ ಕಲ್ಲಿದ್ದಲನ್ನು ಹೊತ್ತು ಕೋರ್ಬಾದಿಂದ ನಾಗಪುರದ ರಾಜನಂದಗಾವ್ ತಲುಪಿದೆ. ರೈಲು ಸ್ಥಳ ತಲುಪಲು 11:20 ಗಂಟೆಗಳನ್ನು ತೆಗೆದುಕೊಂಡಿದೆ. ಈ ಗೂಡ್ಸ್ ರೈಲಿಗೆ 6 ಎಂಜಿನ್ ಬಳಸಲಾಗಿತ್ತು. ಇದನ್ನೂ ಓದಿ: ಡಿಫರೆಂಟ್ ಕೇಶ ವಿನ್ಯಾಸಕ್ಕೆ ಯುವಕರ ಕ್ಯೂ!
Advertisement
ಸೂಪರ್ ವಾಸುಕಿ ರೈಲು ಒಂದು ಬಾರಿ ಹೊತ್ತೊಯ್ಯಬಲ್ಲ ಕಲ್ಲಿದ್ದಲಿನಿಂದ 3,000 ಮೆಗಾವ್ಯಾಟ್‌ನ ವಿದ್ಯುತ್ ಸ್ಥಾವರವನ್ನು ಒಂದು ಇಡೀ ದಿನ ಉರಿಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಕೇಂದ್ರವೂ ಅತ್ಯಂತ ಉದ್ದವಾದ ರೈಲುಗಳನ್ನೇ ಕಲ್ಲಿದ್ದಲು ಸಾಗಾಣೆಗೆ ಹೆಚ್ಚಾಗಿ ಬಳಸಲು ಯೋಜಿಸಿದೆ. ಮುಖ್ಯವಾಗಿ ವಿದ್ಯುತ್ ಕೇಂದ್ರಗಳಲ್ಲಿ ಇಂಧನ ಕೊರತೆಗಳನ್ನು ನೀಗಿಸಲು ಹಾಗೂ ಅತಿ ಹೆಚ್ಚು ಬೇಡಿಕೆಯ ಸಮಯಗಳಲ್ಲಿ ಕಲ್ಲಿದ್ದಲು ಸಾಗಿಸಲು ಬಳಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ತಲುಪಿರುವ ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ