ನವದೆಹಲಿ: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದ ಬ್ರಹ್ಮೋಸ್ ಕ್ಷಿಪಣಿ (BrahMos Supersonic Cruise Missile) ಬದ್ಧವೈರಿಯ ನಿದ್ದೆಗೆಡಿಸಿತ್ತು. ಇದೀಗ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ ಶೀಘ್ರದಲ್ಲೇ ದುಪ್ಪಟ್ಟಾಗಲಿದೆ.
ಮುಂದುವರಿದ ದರ್ಜೆಯ ಕ್ಷಿಪಣಿ ಸದ್ಯದಲ್ಲೇ ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ. 800 ಕಿಮೀ ದೂರ ಕ್ರಮಿಸಬಲ್ಲ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಪರೀಕ್ಷೆಗಳನ್ನು ಸದ್ಯಕ್ಕೆ ನಡೆಸಲಾಗುತ್ತಿದೆ. 2027ರ ಒಳಗೆ ಈ ಪ್ರಬಲ ಕ್ಷಿಪಣಿಗಳು ಸೇನೆಗೆ ನಿಯೋಜನೆಗೊಳ್ಳಲಿವೆ. ಇದನ್ನೂ ಓದಿ: ರಾಜ್ಯದಲ್ಲಿ ಎತ್ತರದ ಗ್ರಾನೈಟ್ ಪೊಲೀಸ್ ಹುತಾತ್ಮ ಸ್ಮಾರಕ ನಿರ್ಮಾಣ – ಮುತ್ತಯ್ಯ ಮುರಳೀಧರನ್ ಕಂಪನಿ ಸಾಥ್
ಇದ್ರ ಜೊತೆಗೆ 200 ಕಿಮೀ ದೂರ ಕ್ರಮಿಸಿ ಟಾರ್ಗೆಟ್ ಹೊಡೆಯಬಲ್ಲ ಏರ್ ಟು ಏರ್ `ಅಸ್ತ್ರ’ ಕ್ಷಿಪಣಿಯೂ ಇನ್ನೊಂದು ವರ್ಷದಲ್ಲಿ ನಿಯೋಜನೆಗೆ ಸಿದ್ಧ ಇರಲಿವೆ. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಬ್ರಹ್ಮೋಸ್ ವೇಗವನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿಯ ನಿಖರ ದಾಳಿಗಳು ಜಗತ್ತನ್ನು ಬೆರಗುಗೊಳಿಸಿವೆ. ಹಲವಾರು ದೇಶಗಳು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿವೆ. ಇದನ್ನೂ ಓದಿ: ಪಂಜಾಬ್ ಮಾಜಿ ಡಿಜಿಪಿ, ಪತ್ನಿ ಮಾಜಿ ಸಚಿವೆ ವಿರುದ್ಧ ಪುತ್ರನನ್ನೇ ಹತ್ಯೆಗೈದ ಕೇಸ್
ಸದ್ಯದ ಬ್ರಹ್ಮೋಸ್ ವಿಶೇಷತೆ ಏನು?
* ಈಗಿರುವ ಬ್ರಹ್ಮೋಸ್ ಮಿಸೈಲ್ 450 ಕಿಮೀ ಶ್ರೇಣಿ ಹೊಂದಿದೆ.
* 4,000 ಕಿ.ಮೀ. ವೇಗದಲ್ಲಿ ಸಾಗಿ ವೈರಿಗಳನ್ನು ಉಡಾಯಿಸಬಲ್ಲದು.
* ಇದೀಗ ಈ ಕ್ಷಿಪಣಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ.
* ಹೊಸ ಕ್ಷಿಪಣಿ ದೂರ ಕ್ರಮಿಸುವ ಸಾಮರ್ಥ್ಯ 800 ಕಿ.ಮೀ.ಗೆ ಹೆಚ್ಚಿದೆ.
* ಬ್ರಹ್ಮೋಸ್‌ನ ರಾಮ್‌ಜೆಟ್ ಎಂಜಿನ್‌ನಲ್ಲಿ ಮಾರ್ಪಾಡು.
* ನ್ಯಾವಿಗೇಶನ್ ಸಿಸ್ಟಂಗಳ ಸಂಯೋಜನೆ ಬಗ್ಗೆ ಪರೀಕ್ಷೆ.
* ಇದು ಯಶಸ್ವಿಯಾದಲ್ಲಿ ಮತ್ತಷ್ಟು ಪ್ರಖರ ಅಸ್ತ್ರವಾಗಲಿದೆ.
* ನೌಕಾಪಡೆಯ ಅಗತ್ಯಕ್ಕೆ ಬೇಕಾಗದಂತೆ ಅಪ್‌ಗ್ರೇಡ್ ಸಾಧ್ಯತೆ.