ನಗೋಯ: ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ (Asian Games) ಮಿಶ್ರ 4×400ಮೀ ರಿಲೇ ಸ್ಪರ್ಧೆಯಲ್ಲಿ ಭಾರತ(India) ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು(Gold Medal) ಮುಡಿಗೇರಿಸಿಕೊಂಡಿದೆ.
ಈ ಐತಿಹಾಸಿಕ ಓಟದಲ್ಲಿ ಕರ್ನಾಟಕದ ಹಿರಿಯ ಅಥ್ಲೀಟ್ ಎಂ. ಆರ್. ಪೂವಮ್ಮ, ವಿಶಾಲ್ ತೆನ್ನರಸು, ವಿಥ್ಯಾ ರಾಮರಾಜ್ ಮತ್ತು ಮನು ಟಿ.ಎಸ್. ಭಾರತವನ್ನು ಪ್ರತಿನಿಧಿಸಿದ್ದರು. ಭಾರತೀಯ ತಂಡವು ಈ ರೇಸ್ ಅನ್ನು 3:14.46 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆಯಿತು.
ರೇಸ್‌ನ ಮಧ್ಯಭಾಗದಲ್ಲಿ ಭಾರತ ತಂಡವು 6ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ 3ನೇ ಲೆಗ್‌ನಲ್ಲಿ ವಿಶಾಲ್ ವೇಗವನ್ನು ಹೆಚ್ಚಿಸಿದರು ಮತ್ತು ಕೊನೆಯ ಲೆಗ್‌ನಲ್ಲಿ ವಿಥ್ಯಾ ರಾಮರಾಜ್ ಅವರ ಫಿನಿಶಿಂಗ್‌ನಿಂದಾಗಿ ಭಾರತವು ವಿಯೆಟ್ನಾಂ ತಂಡವನ್ನು ಹಿಂದಿಕ್ಕಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.
ಈ ಸ್ಪರ್ಧೆಯಲ್ಲಿ ಬಹ್ರೇನ್ ತಂಡವು (3:12.87) ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಕಂಚಿನ ಪದಕವು 3:14.54 ಸಮಯ ದಾಖಲಿಸಿದ ವಿಯೆಟ್ನಾಂ ತಂಡದ ಪಾಲಾಯಿತು. ಈ ಯಶಸ್ಸಿನೊಂದಿಗೆ ಭಾರತವು 2023ರ ಹಾಂಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ವಿಭಾಗದಲ್ಲಿ ಗೆದ್ದಿದ್ದ ಬೆಳ್ಳಿ ಪದಕವನ್ನು ಯಶಸ್ವಿಯಾಗಿ ಕಾಯ್ದುಕೊಂಡಂತಾಗಿದೆ.
Golden grit in every stroke. Perseverance through every storm. 🥉⚡
Under the tutelage of Olympian Swarn Singh, the Army-Navy duo of Salman Khan and Satnam Singh have just clinched India’s very first Asian Games medal in Men’s Double Sculls! 🚣♂️
Watch the 20th Asian Games… pic.twitter.com/XrMDfZvBgS
— Sony Sports Network (@SonySportsNetwk) September 24, 2026
ಇಂದು 5 ಪದಕ ಗೆದ್ದ ಭಾರತ
ವುಶು: ಮಹಿಳೆಯರ ಸಾಂಡಾ 60 ಕೆಜಿ ವಿಭಾಗದ ಫೈನಲ್‌ನಲ್ಲಿ ಮಣಿಪುರದ ನವೋರೆಮ್ ರೋಶಿಬಿನಾ ದೇವಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಸತತ ಮೂರು ಬಾರಿ ಪದಕ ಗೆದ್ದ ಇತಿಹಾಸ ನಿರ್ಮಿಸಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ನಡೆಯಲಿದೆ ಐಪಿಎಲ್ ಹರಾಜು
𝐓𝐇𝐄 𝐑𝐀𝐍𝐆𝐄 𝐇𝐀𝐒 𝐀𝐍𝐎𝐓𝐇𝐄𝐑 𝐌𝐄𝐃𝐀𝐋 𝐅𝐎𝐑 𝐈𝐍𝐃𝐈𝐀 🥉
Parinaaz Dhaliwal and Anantjeet Singh Naruka claim bronze in Mixed Team Skeet!
Watch the 20th Asian Games Aichi-Nagoya 2026 LIVE on Sony Sports Network TV channels & Sony LIV.#SonySportsNetwork #SonyLIV… pic.twitter.com/Xh6MdcRpNH
— Sony Sports Network (@SonySportsNetwk) September 24, 2026
ಶೂಟಿಂಗ್: ಸ್ಕೀಟ್ ಮಿಶ್ರ ತಂಡ ವಿಭಾಗದಲ್ಲಿ ಅನಂತಜೀತ್ ಸಿಂಗ್ ನರುಕಾ ಮತ್ತು ಪರಿನಾಗ್ ಧಲಿವಾಲ್ ಜೋಡಿಯು ಕಂಚಿನ ಪದಕ ಗೆದ್ದಿದೆ.
ಅಥ್ಲೆಟಿಕ್ಸ್: ಮಹಿಳೆಯರ 10,000 ಮೀಟರ್ ಓಟದ ಸ್ಪರ್ಧೆಯಲ್ಲಿ ಸೀಮಾ ಕುಮಾರಿ ಅವರು ಕಂಚಿನ ಪದಕ ಗೆಲ್ಲುವ ಮೂಲಕ, ಈ ವಿಭಾಗದಲ್ಲಿ 16 ವರ್ಷಗಳ ನಂತರ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.

