ನವದೆಹಲಿ: ವಂದೇ ಭಾರತ್ ಸ್ಲೀಪರ್ ಕೋಚ್ (Vande Bharat Express Sleeper Trains) ಮತ್ತು ವಂದೇ ಮೆಟ್ರೋ (Vande Metro) ರೈಲು ಮುಂದಿನ ವರ್ಷ ಬಿಡುಗಡೆಯಾಗಲಿದೆ.
2024ರ ಮಾರ್ಚ್ ಒಳಗಡೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ವಂದೇ ಭಾರತ್ ಸ್ಲೀಪರ್ ಕೋಚ್ ರೈಲನ್ನು ಬಿಡುಗಡೆ ಮಾಡಲಿದೆ. ಮೊದಲ ರೈಲಿನ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಎಂದು ಐಸಿಎಫ್ ಜನರಲ್ ಮ್ಯಾನೇಜರ್ ಬಿಜಿ ಮಲ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಪೂಜೆಗೆ ತೆರಳಿದ್ದ ವೈದ್ಯ ಹೇಮಾವತಿ ನದಿಯಲ್ಲಿ ಮುಳುಗಿ ಸಾವು
ಸ್ಲೀಪರ್ ಕೋಚ್ ಜೊತೆಗೆ ಕಡಿಮೆ ದರ ಇರುವ ವಂದೇ ಮೆಟ್ರೋ ರೈಲನ್ನು ಐಸಿಎಫ್ ನಿರ್ಮಾಣ ಮಾಡುತ್ತಿದೆ. 12 ಬೋಗಿಗಳು ಇರುವ ವಂದೇ ಮೆಟ್ರೋ ಕಡಿಮೆ ದೂರದ ನಗರಗಳನ್ನು ಸಂಪರ್ಕಿಸಲಿದೆ. ಜನವರಿ 2024ರ ಒಳಗಡೆ ವಂದೇ ಮೆಟ್ರೋ ಬಿಡುಗಡೆಯಾಗುವ ನಿರೀಕ್ಷೆಯಿದೆ.
ರಾತ್ರಿ ವೇಳೆ ವಂದೇ ಭಾರತ್ ರೈಲನ್ನು ಓಡಿಸಬೇಕು ಎಂಬ ಬೇಡಿಕೆ ಪ್ರಯಾಣಿಕರ ಕಡೆಯಿಂದ ಬಂದಿದ್ದರೂ ಸದ್ಯ ಸ್ಲೀಪರ್ ಕೋಚ್ ಇಲ್ಲದ ಕಾರಣ ರೈಲ್ವೇ ವಂದೇ ಭಾರತ್ ರೈಲನ್ನು ಓಡಿಸುತ್ತಿಲ್ಲ. ಈ ಕಾರಣಕ್ಕೆ ರಾತ್ರಿಯ ಸಂಚಾರ ಸುಗಮವಾಗಲೆಂದು ರೈಲ್ವೇ ಈಗ ವಂದೇ ಭಾರತ್ ಸ್ಲೀಪರ್ ಕೋಚ್ ನಿರ್ಮಾಣ ಮಾಡುತ್ತಿದೆ.
Web Stories