ಮುಂಬೈ: ಸನ್‍ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್, ಐಪಿಎಲ್ 2022ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಗಳಿಸುವ ಮೂಲಕ ಮಿಂಚಿದ್ದಾರೆ.
Please give him a blue jersey already. #UmranMalik pic.twitter.com/Yc5myHCvWx
— Syed (@aamirsspk) April 17, 2022
Advertisement
ಪಂಜಾಬ್ ಮತ್ತು ಹೈದರಾಬಾದ್ ನಡುವಿನ ಪಂದ್ಯದಲ್ಲಿ ಪಂಜಾಬ್ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‍ಸ್ಟೂನ್ 33 ಎಸೆತಗಳನ್ನು ಎದುರಿಸಿ 60 ರನ್‍ಗಳ ಕೊಡುಗೆ ನೀಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡವು ಸವಾಲಿನ ಮೊತ್ತವನ್ನು ಪಡೆಯಲು ಸಾಧ್ಯವಾಯಿತು. ನಂತರ ಉಮ್ರಾನ್ ಮಲಿಕ್ ಓಡನ್ ಸ್ಮಿತ್, ರಾಹುಲ್ ಚಾಹರ್ ಮತ್ತು ವೈಭವ್ ಅರೋರಾ ಅವರ ವಿಕೆಟ್ ಪಡೆಯುವ ಮೂಲಕ ಅಸಾಮಾನ್ಯ ವೇಗದ ಬೌಲಿಂಗ್ ಅನ್ನು ಪ್ರಾರಂಭಿಸಿದರು. ಸತತ ಎರಡು ಎಸೆತಗಳಲ್ಲಿ ಚಹರ್ ಮತ್ತು ಅರೋರಾ ವಿಕೆಟ್ ಪಡೆದು ಪಂಜಾಬ್‍ಗೆ ಅಘಾತ ನೀಡಿದರು. ಆ ಬಳಿಕ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಪಡೆದಿದ್ದ ಉಮ್ರಾನ್ ಪಂಜಾಬ್‍ನ ಅರ್ಷದೀಪ್ ಸಿಂಗ್ ವಿಕೆಟ್ ಪಡೆಯುವಲ್ಲಿ ವಿಫಲವಾದರು. ಒಂದು ವೇಳೆ ಅವರು ಅರ್ಷದೀಪ್ ವಿಕೆಟ್ ಪಡೆದಿದ್ದರೆ. 15ನೇ ಆವೃತ್ತಿ ಐಪಿಎಲ್‍ನಲ್ಲಿ ಸತತ ನಾಲ್ಕು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಳ್ಳುತ್ತಿದ್ದರು. ಇದನ್ನೂ ಓದಿ: ಉಮ್ರಾನ್ ಮಲಿಕ್, ಭುವಿ ಬೌಲಿಂಗ್ ಬಿರುಗಾಳಿ – ಪಂಜಾಬ್ ವಿರುದ್ಧ ಹೈದರಾಬಾದ್‌ಗೆ 7 ವಿಕೆಟ್‌ಗಳ ಜಯ
Advertisement
ಪಂದ್ಯದ ವೇಳೆ ಬಿಸಿಲಿನಲ್ಲಿ ಬೌಲಿಂಗ್ ಮಾಡುವುದು ಕಷ್ಟವೇ ಎಂದು ಕಾಮೆಂಟೇಟರ್ ಪ್ರಶ್ನೆ ಕೇಳಿದರು. ಭಾನುವಾರ ಮುಂಬೈನಲ್ಲಿ ಬಿಸಿಲಿನ ತಾಪ ಹೆಚ್ಚಾಗಿತ್ತು. ಇದು ಉಮ್ರಾನ್ ವೇಗದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಪ್ರಶ್ನಿಸಿದರು.
Advertisement
Advertisement
ಇದಕ್ಕೆ ಉತ್ತರಿಸಿದ ಅವರು, ಸರ್, ನಾನು ಜಮ್ಮುವಿನಿಂದ ಬಂದಿದ್ದೇನೆ. ಅಲ್ಲಿ ಬೇಸಿಗೆಯಲ್ಲಿ 46 ರಿಂದ 47 ಡಿಗ್ರಿ ತಾಪಮಾನವಿರುತ್ತದೆ. ನಾನು ಜಮ್ಮುವಿನಲ್ಲಿ ತರಬೇತಿ ಪಡೆದಿದ್ದೇನೆ. ನಾನು ಬಿಸಿಲಿನಲ್ಲಿ ಬೌಲಿಂಗ್ ಮಾಡುವುದನ್ನು ನಿಜವಾಗಿಯೂ ಆನಂದಿಸುತ್ತೇನೆ ಎಂದರು. ಇದನ್ನೂ ಓದಿ: IPLನಲ್ಲಿ ಪಂದ್ಯ ನೂರು, ಶತಕ ಮೂರು ಸಿಡಿಸಿ ಮೆರೆದಾಡಿದ ಕನ್ನಡಿಗ ಕೆ.ಎಲ್.ರಾಹುಲ್
This last over by #UmranMalik was surreal. A maiden with 3 wickets and a run-out. Stuffs of dream! What a tournament Umran is having in #IPL2022 Blue jersey coming soon ???????? #PBKSvSRH
— Harbhajan Turbanator (@harbhajan_singh) April 17, 2022
ಉಮ್ರಾನ್ ಅವರ ಈ ಅದ್ಬುತ ಆಟವನ್ನು ಕಂಡು ಮಾಜಿ ಕ್ರಿಕೆಟ್ ಆಟಗಾರರು ಟ್ವಿಟ್ಟರ್ ಮೂಲಕ ಮೆಚ್ಚುಗೆ ಸೂಚಿಸಿದ್ದು, ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಉಮ್ರಾನ್ ಅವರ ಬೌಲಿಂಗ್ ಪ್ರದರ್ಶನ ಅದ್ಬುತವಾಗಿತ್ತು. ಮೆಡನ್ ಓವರ್ ಮಾಡುವುದಲ್ಲದೇ 3 ವಿಕೆಟ್‍ಗಳನ್ನು ಕಿತ್ತು ಒಂದು ರನ್ ಔಟ್ ಮಾಡಿದ್ದಾರೆ. ಶೀಘ್ರದಲೇ ಭಾರತ ತಂಡಕ್ಕೆ ಮತ್ತೊಂದು ಬ್ಲೂ ಜೆರ್ಸಿ ಸೇರ್ಪಡೆಯಾಗಲಿದೆ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
A triple wicket maiden for a final over is an outstanding effort from young Umran Malik. Skills and raw pace and great execution is gold stuff.#PBKSvSRH
— Venkatesh Prasad (@venkateshprasad) April 17, 2022
ವೆಂಕಟೇಶ್ ಪ್ರಸಾದ್ ಅವರು ಟ್ವೀಟ್ ಮಾಡಿ, ಯುವ ಆಟಗಾರ ಉಮ್ರಾನ್ ಅವರ ಮೆಡನ್ ಓವರ್ ಬೌಲಿಂಗ್ ಉತ್ತಮವಾಗಿತ್ತು ಎಂದು ಬರೆದಿದ್ದಾರೆ.