ಅಮರಾವತಿ: ಆಂಧ್ರಪ್ರದೇಶದ ಓಂಗೋಲ್ ತಳಿಯ ಹಸು, ಬ್ರೆಜಿಲ್‌ನಲ್ಲಿ 41 ಕೋಟಿಗೆ ಹರಾಜಾಗಿದೆ. ಇದೀಗ ಈ ಹಸುವನ್ನು ಜಗತ್ತಿನ ದುಬಾರಿ ಹಸು ಎಂದು ಹೇಳಲಾಗುತ್ತಿದೆ.
ಆಂಧ್ರಪ್ರದೇಶದಲ್ಲಿ ಓಂಗೋಲ್ ತಳಿಯ ಹಸುಗಳನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ ಇದೀಗ ಬ್ರೆಜಿಲ್‌ನಲ್ಲಿ 41 ಕೋಟಿಗೆ ಈ ಹಸು ಹರಾಜಾಗಿರುವುದು ಇತಿಹಾಸವನ್ನೇ ಸೃಷ್ಟಿಸಿದೆ.
Advertisement
ಓಂಗೋಲ್ ತಳಿಯ ಹಸುವಿಗೆ ಬ್ರೆಜಿಲ್‌ನಲ್ಲಿ ವಿಯೆಟ್ನಾ-19 ಎಂಬ ಹೆಸರಿದೆ. ಬ್ರೆಜಿಲ್‌ನಲ್ಲಿ 4.82 ಮಿಲಿಯನ್ (41 ಕೋಟಿ)ಗೆ ಹಸು ಹರಾಜು ಆಗಿರುವುದು ಅಚ್ಚರಿ ಮೂಡಿಸಿದೆ. ಈ ಮಾರಾಟವು ಜಪಾನ್‌ನ ಪ್ರಸಿದ್ಧ ವಾಗ್ಯು ಮತ್ತು ಭಾರತದ ಬ್ರಾಹ್ಮಣ ತಳಿಗಳನ್ನೂ ಹಿಂದಿಕ್ಕಿದೆ.
Advertisement
ಈ ತಳಿಗಳನ್ನು ಪ್ರತಿವರ್ಷವು ಹರಾಜು ಮಾಡಲಾಗುತ್ತಿತ್ತು. 2023ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ವಿಯೆಟ್ನಾ-19 ತಳಿಯ ಹಸುವನ್ನು 37 ಕೋಟಿಗೆ ಮಾರಾಟವಾಗಿತ್ತು.
Advertisement
ಓಂಗೋಲ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಳಿಯಾಗಿದೆ. ಓಂಗೋಲ್ ತಳಿಯು ವಿಶಿಷ್ಟ ಅನುವಂಶೀಯ ಲಕ್ಷಣ ಹಾಗೂ ಶಕ್ತಿ, ಶಾಖ ನಿರೋಧಕತೆ ಹಾಗೂ ಸ್ನಾಯುಗಳ ರಚನೆಗೆ ಹೆಚ್ಚು ಹೆಸರುವಾಸಿಯಾಗಿದೆ. ಬ್ರೆಜಲ್‌ನಲ್ಲಿ ಈ ತಳಿಯ ಹಸುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ.