ಭಾರತದಲ್ಲಿದ್ದ ಪ್ರಿಯತಮೆಯನ್ನು ಕಾಣಲು ಯಾರು ಮಾಡದ ಸಾಹಸಕ್ಕೆ ಕೈ ಹಾಕಿ ಪೊಲೀಸರ ಅತಿಥಿಯಾದ!

Public TV
1 Min Read
airport runway

ದುಬೈ: ಯುಎಇ ಯಲ್ಲಿ ಉದ್ಯೋಗದಲ್ಲಿರುವ 26 ವರ್ಷದ ಎಂಜಿನಿಯರ್ ಭಾರತದಲ್ಲಿರುವ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಯಾರೂ ಊಹಿಸಿದ ಕಾರ್ಯ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಆರ್ ಕೆ ಎಂದು ಗುರುತಿಸಿಕೊಂಡಿರುವ ಸಿವಿಲ್ ಎಂಜಿನಿಯರ್ ಸ್ವದೇಶದಲ್ಲಿವರುವ ತನ್ನ ಪ್ರಿಯತಮೆಯನ್ನು ಕಾಣಲು ಭಾರತಕ್ಕೆ ಬರಲು ಇಚ್ಛಿಸಿದ್ದನು. ಆದರೆ ಉದ್ಯೋಗ ನೀಡಿದ ಸಂಸ್ಥೆ ಆತನ ಪಾಸ್ ಪೋರ್ಟ್ ನೀಡಿರಲಿಲ್ಲ. ಹೀಗಾಗಿ ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯನ್ನು ಅಕ್ರಮವಾಗಿ ಪ್ರವೇಶಿಸಿ ವಿಮಾನ ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

airport runway 1

ಈ ವೇಳೆ ನ್ಯಾಯಾಧೀಶರ ಮುಂದೆ ಆತ ತನ್ನ ಅಳಲನ್ನು ತೊಡಿಕೊಂಡಿದ್ದು, ಭಾರತದಲ್ಲಿರುವ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ. ಪ್ರಿಯತಮೆಯೊಂದಿಗೆ ಮದುವೆಯಾಗಲು ತನ್ನ ಪೋಷಕರನ್ನು ಒಪ್ಪಿಸುವ ಅಗತ್ಯವಿದೆ ಎಂದು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಆರ್ ಕೆ ಹಲವು ಬಾರಿ ತಾನು ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಗೆ ತವರಿಗೆ ಹೋಗಿ ಬರಲು ಅವಕಾಶ ನೀಡುವಂತೆ ಮನವಿ ಮಾಡಿದ್ದ. ಆದರೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ. ತಾನು ಮಾಡಿದ್ದ ಕೆಲಸ ಕಾನೂನು ವಿರೋಧಿ ಎಂದು ತಿಳಿದಿದ್ದರೂ ಈ ಕಾರ್ಯ ಮಾಡಿರುವುದಾಗಿ ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ನೀಡಿದ್ದಾನೆ. ಒಂದು ವೇಳೆ ತಾನು ಮಾಡಿರುವ ತಪ್ಪಿಗೆ ನ್ಯಾಯಾಲಯ ತನ್ನನ್ನು ಗಡಿಪಾರು ಮಾಡಿದರೆ ಈ ಮೂಲಕವಾದರೂ ತಾನು ತವರಿಗೆ ಬರುವ ಅವಕಾಶ ಲಭಿಸುತ್ತದೆ ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ.

ಪ್ರಸ್ತುತ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ಆತನ ಮನವಿಯನ್ನು ಪರಿಗಣಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಯುಎಇ ಕಾರ್ಮಿಕ ನಿಯಮಗಳ ಪ್ರಕಾರ ಕಂಪೆನಿಯ ಉದ್ಯೋಗಿಯ ಪಾಸ್‍ಪೋರ್ಟ್ ನೀಡದೇ ಇರುವುದು ಅಕ್ರಮವಾಗಿದ್ದು, ಈ ಕುರಿತು ಪೊಲೀಸರು ಕಂಪೆನಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

airport runway 2

Share This Article