ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ (Rajamouli) ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಭಾರತೀಯ ಸಿನಿಮಾ ರಂಗದ ಬಯೋಪಿಕ್ ಆಗಿರಲಿದೆಯಂತೆ. ಹಾಗಾಗಿ ಚಿತ್ರಕ್ಕೆ ‘ಮೇಡ್ ಇನ್ ಇಂಡಿಯಾ’ (Made in India) ಎಂದು ಹೆಸರಿಟ್ಟಿದ್ದಾರೆ. ಇಂದು ಸಿನಿಮಾದ ಟೈಟಲ್ ಅನ್ನು ರಾಜಮೌಳಿ ಸೋಷಿಯಲ್ ಮೀಡಿಯಾ ಮೂಲಕ ಬಿಡುಗಡೆ ಮಾಡಿದ್ದಾರೆ.
Advertisement
ಈ ಸಿನಿಮಾವನ್ನು ರಾಜಮೌಳಿ ಅವರ ಪುತ್ರ ಎಸ್.ಎಸ್.ಕಾರ್ತಿಕೇಯ (Karthikeya)ಮತ್ತು ವರುಣ್ ಗುಪ್ತಾ ನಿರ್ಮಾಣ ಮಾಡುತ್ತಿದ್ದು, ನಿತಿನ್ ಕಕ್ಕರ್ ನಿರ್ದೇಶನ ಮಾಡುತ್ತಿದ್ದಾರೆ. ರಾಜಮೌಳಿ ಅವರ ಸಹಕಾರದೊಂದಿಗೆ ಈ ಸಿನಿಮಾ ತಯಾರಾಗಲಿದೆ. ಭಾರತೀಯ ಸಿನಿಮಾ ರಂಗ ಬೆಳೆದು ಬಂದ ರೀತಿಯನ್ನು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ ನಿರ್ದೇಶಕರು.
Advertisement
Advertisement
ಈ ನಡುವೆ ರಾಜಮೌಳಿ ಅವರು ತಮ್ಮ ಕನಸಿನ ಯೋಜನೆ ಬಗ್ಗೆ ಬಾಯ್ಬಿಟ್ಟಿದ್ದಾರೆ. RRR ನಂತರ ಮಹಾಭಾರತ (Mahabharatha) ಕುರಿತಾಗಿ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ರಿಯಾಕ್ಟ್ ಮಾಡಿದ್ದಾರೆ. ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡವರು ರಾಜಮೌಳಿ. ಒಂದು ಸಿನಿಮಾ ಮಾಡ್ತಿದ್ದಾರೆ ಅಂದರೆ ಸಾಕಷ್ಟು ವರ್ಷಗಳ ತಯಾರಿಯೊಂದಿಗೆ ರಾಜಮೌಳಿ ಅಖಾಡಕ್ಕೆ ಇಳಿಯುತ್ತಾರೆ. ಹಾಗಾಗಿ ಸಕ್ಸಸ್‌ಫುಲ್ ನಿರ್ದೇಶಕನಾಗಿ ರಾಜಮೌಳಿ ಗುರುತಿಸಿಕೊಂಡಿದ್ದಾರೆ.
Advertisement
ಖ್ಯಾತ ನಿರ್ದೇಶಕ ರಾಜಮೌಳಿಗೆ ಕಾರ್ಯಕ್ರಮವೊಂದರಲ್ಲಿ ಮಹಾಭಾರತವನ್ನ ತೆರೆಯ ಮೇಲೆ ತರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಕನಸಿನ ಪ್ರಾಜೆಕ್ಟ್ ಮಹಾಭಾರತ ಕುರಿತಾಗಿ ಈ ಹಿಂದೆ ಮಾತನಾಡಿದ್ದೀರಿ, ಒಂದು ವೇಳೆ ನೀವು ಚಿತ್ರವನ್ನು ಮಾಡುವುದಾದರೆ ಎಷ್ಟು ಭಾಗಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತಿರಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.
ಇದಕ್ಕೆ ಉತ್ತರಿಸಿದ ರಾಜಮೌಳಿ, ಈ ಚಿತ್ರವನ್ನು ಮಾಡುವ ಮೊದಲು ದೇಶದ ಎಲ್ಲ ಆವೃತ್ತಿಗಳಲ್ಲಿ ಸಿಗುವ ಮಹಾಭಾರತವನ್ನು ಓದಿ ಅರ್ಥೈಸಿಕೊಳ್ಳಲು ಕನಿಷ್ಠ ಒಂದು ವರ್ಷ ಸಮಯಾವಕಾಶ ಬೇಕು. ಅದನ್ನು ಫಿಲ್ಮ್ ರೀತಿ ಮಾಡಬೇಕಾದರೆ ಕನಿಷ್ಠ 10 ಭಾಗಗಳನ್ನಾಗಿ ಮಾಡಬೇಕು. ಆದರೆ ನಿಖರವಾಗಿ ಎಷ್ಟು ಆಗುತ್ತದೆ ಅಂತ ಗೊತ್ತಿಲ್ಲ ಎಂದಿದ್ದಾರೆ. ಇನ್ನು, ಈ ವಿಷಯವನ್ನು ಕೇಳಿದ್ದೆ ತಡ ಅಭಿಮಾನಿಗಳು, ರಾಜ್‌ಮೌಳಿ ನಿರ್ದೇಶನದಲ್ಲಿ ಹೇಗೆ ಮಹಾಭಾರತ ಮೂಡಿ ಬರಬಹುದೆಂದು ಎಂದು ಎದುರು ನೋಡ್ತಿದ್ದಾರೆ.
Web Stories