-52 ಗಂಟೆ, 3500 ಅಡಿ ಎತ್ತರದಲ್ಲಿ ಸಂಚರಿಸುವ ಸಾಮರ್ಥ್ಯ
ನವದೆಹಲಿ: ಗಡಿಯಲ್ಲಿ ತಂಟೆ ಮಾಡುವ ಚೀನಾದ ಮೇಲೆ ಕಣ್ಣಿಡಲು ಭಾರತೀಯ ಸೇನೆಗೆ ಇದೀಗ ಇಸ್ರೇಲ್‍ನ ಅತ್ಯಾಧುನಿಕ ಡ್ರೋನ್‍ಗಳ ಬಲ ಬಂದಿದೆ. ಕೇಂದ್ರ ಸರ್ಕಾರ ನೀಡಿದ ತುರ್ತು ಖರೀದಿ ಅಧಿಕಾರ ಬಳಸಿಕೊಂಡು ಸೇನಾಪಡೆಯು ಇಸ್ರೇಲ್‍ನಿಂದ ಹೆರಾನ್ ಡ್ರೋನ್‍ಗಳನ್ನು ಖರೀದಿಸಿದೆ.
Advertisement
ಶೀಘ್ರದಲ್ಲೇ ಈ ಡ್ರೋನ್‍ಗಳು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ನಿಯೋಜನೆಯಾಗಲಿದ್ದು, ಚೀನಾದ ಚಟುವಟಿಕೆಗಳ ಮೇಲೆ ಕಣ್ಣಿಡಲಿವೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಈ ಡ್ರೋನ್‍ಗಳು ಕಾರ್ಯಸನ್ನದ್ಧ ಸ್ಥಿತಿಯಲ್ಲಿವೆ. ಹಿಂದಿನಿಂದಲೂ ಭಾರತೀಯ ಸೇನೆಯಲ್ಲಿರುವ ಡ್ರೋನ್‍ಗಳಿಗಿಂತ ಇವು ಹೆಚ್ಚು ಆಧುನಿಕವಾಗಿದ್ದು, ಇವುಗಳ ಆ್ಯಂಟಿ-ಜಾಮಿಂಗ್ ಸಾಮರ್ಥ್ಯ ಗರಿಷ್ಠ ಮಟ್ಟದ್ದಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?
Advertisement
Advertisement
ಈ ಡ್ರೋನ್‍ಗಳು ಸತತ 52 ಗಂಟೆ ಹಾರಾಡುವ, ಗರಿಷ್ಠ 3500 ಅಡಿ ಎತ್ತರದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇಂಥ 4 ಡ್ರೋನ್‍ಗಳನ್ನು ಖರೀದಿಸಲು ಭಾರತ 1500 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಲಡಾಖ್ ಗಡಿಗೆ ರಷ್ಯಾ ನಿರ್ಮಿತ ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಅಣಿಗೊಳಿಸಲು ಭಾರತ ಸಜ್ಜಾಗಿರುವ ಹೊತ್ತಿನಲ್ಲೇ ಈ ಹೊಸ ಅಸ್ತ್ರವೂ ಲಭ್ಯವಾಗಿದೆ. ಇದನ್ನೂ ಓದಿ: ಕೋವಿಡ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಸೇನಾಪಡೆಗಳಿಗೆ 500 ಕೋಟಿ ರೂಪಾಯಿವರಿಗಿನ ಶಸ್ತ್ರಾಸ್ತ್ರಗಳನ್ನು ಖರೀದಿಸಲು ನೀಡಿದ್ದ ವಿಶೇಷ ಆರ್ಥಿಕ ಅಧಿಕಾರ ಬಳಸಿಕೊಂಡು ಭೂಸೇನಾಪಡೆ ಈ ಡ್ರೋನ್‍ಗಳನ್ನು ಖರೀದಿಸಿದೆ. ಜೊತೆಗೆ ಇದಕ್ಕಿಂತ ಸಣ್ಣ ಇನ್ನಷ್ಟು ಡ್ರೋನ್‍ಗಳನ್ನು ಭಾರತೀಯ ಕಂಪನಿಗಳಿಂದಲೇ ಖರೀದಿಸುತ್ತಿದೆ. ಚೀನಾದಿಂದ ಯುದ್ಧದ ಆತಂಕವಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇನಾಪಡೆಗಳಿಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು ವಿಶೇಷ ಆರ್ಥಿಕ ಅಧಿಕಾರ ನೀಡಿದ್ದರು, ಅದರಂತೆ ವಾಯುಪಡೆ ಹಾಗೂ ನೌಕಾಪಡೆಗಳು ಈಗಾಗಲೇ ಕೆಲ ಶಸ್ತ್ರಾಸ್ತ್ರಗಳನ್ನು ಖರೀದಿಸಿವೆ. 2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ ಮೇಲಿನ ಸರ್ಜಿಕಲ್ ಸ್ಟ್ರೈಕ್ ನಂತರವೂ ಇದೇ ರೀತಿ ಸೇನಾಪಡೆಗಳಿಗೆ ತುರ್ತು ಖರೀದಿಯ ಅಧಿಕಾರ ನೀಡಲಾಗಿತ್ತು.