CoronaLatestMain PostNational

ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

ಕೋವಿಡ್-19 ರ ರೂಪಾಂತರ ಓಮಿಕ್ರಾನ್ ಅನ್ನು ವಿಶ್ವದಾದ್ಯಂತ ವಿಜ್ಞಾನಿಗಳು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‍ಒ) ಘೋಷಣೆ ಪ್ರಪಂಚದಾದ್ಯಂತ ಭೀತಿಯನ್ನೇ ಹೆಚ್ಚಿಸಿದೆ.

ಈ ವರ್ಷ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಡೆಲ್ಟಾ ಸೋಂಕು ವಿನಾಶದ ಅಲೆಯನ್ನೇ ಎಬ್ಬಿಸಿದ್ದು, ಇದರ ಬೆನ್ನಲ್ಲೇ ಓಮಿಕ್ರಾನ್ ತಳಿಯು ಹುಟ್ಟಿಕೊಂಡಿದೆ. ಇದು ಡೆಲ್ಟಾ ಗಿಂತಲೂ ಹೆಚ್ಚು ಅಪಾಯಕಾರಿ ಎಂದು ಊಹಿಸಲಾಗಿದೆ.

ಪ್ರಪಂಚದಾದ್ಯಂತ ಕೋವಿಡ್-19ನ ರೂಪಾಂತರಗಳನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದು, ಸಾರ್ವಜನಿಕ ಡೇಟಾಬೇಸ್ ವರದಿಗಳ ಮೇಲೆ ಅವೆರಡರ ವ್ಯತ್ಯಾಸಗಳನ್ನು ಸ್ಪಷ್ಟಪಡಿಸಲಾಗುತ್ತದೆ. ಇದನ್ನೂ ಓದಿ: 2 ಡೋಸ್ ಪಡೆದವರಿಗೆ ಚಿಕಿತ್ಸೆ – ಸರ್ಕಾರಿ ಸೌಲಭ್ಯ ಕಡಿತಗೊಳಿಸಿ

ಡೆಲ್ಟಾ ಓಮಿಕ್ರಾನ್ ಗಿಂತಲೂ ಹೇಗೆ ಭಿನ್ನವಾಗಿದೆ ಎಂಬುದರ ಬಗ್ಗೆ ಸದ್ಯದ ವರದಿಗಳ ಪ್ರಕಾರ ಈ ರೀತಿಯಾಗಿ ತಿಳಿಯಬಹುದು.

ಡೆಲ್ಟಾ ಹಾಗೂ ಓಮಿಕ್ರಾನ್‍ನ ರೂಪಾಂತರದ ಮೂಲ:
ಡೆಲ್ಟಾ ರೂಪಾತರವು ಯುಕೆ ಹಾಗೂ ಅಮೆರಿಕ ತಲುಪುವ ಮೊದಲು ಭಾರತದಲ್ಲೇ ಪತ್ತೆಯಾಗಿತ್ತು. 2020 ರ ಡಿಸೆಂಬರ್‍ನಲ್ಲಿ ಇದನ್ನು ಕಂಡುಹಿಡಿಯಲಾಗಿತ್ತು. ಓಮಿಕ್ರಾನ್ ಅನ್ನು ಮೊಟ್ಟಮೊದಲ ಬಾರಿಗೆ ನವೆಂಬರ್ 11 ರಂದು ಬೋಟ್ಸ್‍ವ್ಯಾನ್ ದೇಶದಲ್ಲಿ ಕಂಡುಬಂದಿತ್ತು. ನಂತರ ಮೂರು ದಿನಗಳಲ್ಲಿ ದಕ್ಷಿಣ ಆಫ್ರಿಕದಾದ್ಯಂತ ಹರಡಿದೆ.

ರೂಪಾಂತರಗಳ ವ್ಯತ್ಯಾಸ:
ಓಮಿಕ್ರಾನ್ ರೂಪಾಂತರದ ಜೀನ್ ಅನುಕ್ರಮವು ಡೆಲ್ಟಾಗಿಂತ ಹೆಚ್ಚಿನದ್ದಾಗಿದೆ ಎಂದು ತಿಳಿದುಬಂದಿದೆ. ಓಮಿಕ್ರಾನ್ ರೂಪಾಂತರದಲ್ಲಿ 43 ಎಎ ಸ್ಪೈಕ್ ಪ್ರೋಟೀನ್ ಇದ್ದು, ಡೆಲ್ಟಾದಲ್ಲಿ 18 ಎಎ ಸ್ಪೈಕ್ ಪ್ರೋಟೀನ್ ಇದೆ ಎಂಬುದನ್ನು ಸಂಶೋಧಕರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ರೂಪಾಂತರವು ಹೆಚ್ಚು ಭಯಾನಕವಾಗಿರುತ್ತದೆ ಎಂಬುದು ಇದರ ಅರ್ಥವಲ್ಲ. ಬದಲಿಗೆ ಇವುಗಳು ಮಾನವ ಜಾತಿಗೆ ಹೊಂದಿಕೊಂಡು ಹೊಸ ರೂಪಾಂತರಗಳನ್ನು ಸೃಷ್ಟಿಸುವಲ್ಲಿ ವೇಗವಾಗಿರುತ್ತದೆ ಎಂಬುದು ಇದರ ಅರ್ಥ.

ಲಸಿಕೆಗಳ ಪರಿಣಾಮ:
ಡೆಲ್ಟಾ ರೂಪಾಂತರದ ವಿರುದ್ಧ ಕೋವಿಶೀಲ್ಡ್ ಲಸಿಕೆ ಪರಿಣಾಮಕಾರಿಯಾಗಿ ಹೋರಾಡುವಲ್ಲಿ ಸಹಕಾರಿಯಾಗಿದೆ. ವಿದೇಶಗಳಲ್ಲೂ ತಯಾರಾದ ಲಸಿಕೆಗಳು ಡೆಡ್ಲಿ ಡೆಲ್ಟಾ ವಿರುದ್ಧ ಹೋರಾಡಲು ಸಮರ್ಥವಾಗಿದೆ. ಆದರೆ ಓಮಿಕ್ರಾನ್ ವಿಚಾರವಾಗಿಯೂ ಇದೇ ರೀತಿಯಾಗಬಹುದು ಎಂದು ಹೇಳಲಾಗುವುದಿಲ್ಲ. ವಿಜ್ಞಾನಿಗಳು ಓಮಿಕ್ರಾನ್‍ಗೆ ಈ ಹಿಂದೆ ತಯಾರಿಸಲಾದ ಲಸಿಕೆಗಳು ಕಡಿಮೆ ಪರಿಣಾಮ ತೋರಬಹುದು ಎಂದಿದ್ದಾರೆ. ಇನ್ನೂ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಇದನ್ನೂ ಓದಿ: ಇಂದು 745 ಜನರು ಡಿಸ್ಚಾರ್ಜ್- 8 ಸಾವು

ಸಾವುನೋವು ವರದಿಯಾಗಿಲ್ಲ
ಡೆಲ್ಟಾ ಸೋಂಕು ಹಠಾತ್ತನೆ ಕಂಡುಬಂದಾಗ ಅದರ ವಿರುದ್ಧ ಹೋರಾಡಲು ತಯಾರಾಗಿರದ ಕಾರಣಕ್ಕೆ ತೀವ್ರವಾಗಿ ಸಾವು ನೋವುಗಳು ಸಂಭವಿಸಿದವು. ಇದೀಗ ವಿಜ್ಞಾನಿಗಳು ಸಂಶೋಧನೆಯ ವೇಗವನ್ನು ಹೆಚ್ಚಿಸಿರುವುದರೊಂದಿಗೆ ಜನತೆ ಎಚ್ಚರವಾಗಿದೆ. ಇಲ್ಲಿಯ ವರೆಗೆ ಓಮಿಕ್ರಾನ್ ರೂಪಾಂತರದಿಂದ ಸಾವುನೋವುಗಳು ವರದಿಯಾಗಿಲ್ಲ.

ಡೆಲ್ಟಾ ವರದಿಗಳು ಭಾರತದಲ್ಲಿ ಎಪ್ರಿಲ್ 2021ರ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಹೆಚ್ಚಿನ ಜನಸಂಖ್ಯೆ ಲಸಿಕೆ ಹಾಕಿಸದೇ ಇರುವುದು ಇದಕ್ಕೆ ಕಾರಣವಾಗಿತ್ತು. ಡಬ್ಲ್ಯುಹೆಚ್‍ಒ ಒಮಿಕ್ರಾನ್ ಪತ್ತೆ ಹಚ್ಚಿದ ತಕ್ಷಣವೇ ಎಚ್ಚರಿಕೆಯನ್ನು ನೀಡಿದ್ದ ಕಾರಣ ಹಲವು ದೇಶಗಳು ಮತ್ತೆ ಕ್ವಾರಂಟೈನ್‍ಗಳ ಪಾಲನೆ ಮಾಡಿವೆ. ದಕ್ಷಿಣ ಆಫ್ರಿಕಾದ ಕಡೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

Leave a Reply

Your email address will not be published.

Back to top button