ಶ್ರೀನಗರ: ಜಮ್ಮು ಕಾಶ್ಮೀರದ ಗಡಿ ಪ್ರದೇಶದಲ್ಲಿ (ಎಲ್‍ಒಸಿ) ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ಮತ್ತಷ್ಟು ಶಕ್ತಿ ತುಂಬಲು ಅತ್ಯಾಧುನಿಕ ಸ್ನೈಪರ್ ರೈಫಲ್ಸ್ ಬಳಕೆ ಮಾಡಲು ಸೇನೆ ಆರಂಭಿಸಿದೆ.
ಡೆಡ್ಲಿ ಸ್ನೈಪರ್ ರೈಫಲ್ಸ್ ಎಂದೇ ಕರೆಯಲಾಗುವ ಅತ್ಯಾಧುನಿಕ ಬೆರೆಟ್ಟಾ ಸಂಸ್ಥೆಯ 0.338 ಲಪುವಾ ಮ್ಯಾಗ್ನಮ್ ಸ್ಲಾರ್ಪಿಯೋ ಟಿಜಿಟಿ ಸೂಪರ್ ಸ್ನೈಪರ್ ರೈಫಲ್ ಹಾಗೂ ಬರೆಟ್ಟ್ ಸಂಸ್ಥೆಯ 0.50 ಕ್ಯಾಲಿಬರ್ ಎ095 ಸ್ನೈಪರ್ ರೈಫಲ್‍ಗಳನ್ನ ಖರೀದಿ ಮಾಡಲಾಗಿದೆ. ಒಂದು ವರ್ಷದ ಹಿಂದೆಯೇ ಸರ್ಕಾರ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.
Advertisement
Advertisement
ಮಾಧ್ಯಮ ವರದಿಯ ಅನ್ವಯ ಈಗಾಗಲೇ ಈ ರೈಫಲ್ ಗಳನ್ನು ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ನೀಡಲಾಗಿದೆ. ಉದ್ಧಮಪುರ್ ನಾರ್ಥರ್ನ್ ಕರ್ಮಾಂಡ್ ನ ಜನರಲ್ ಆಫೀಸರ್ ಕಮಾಂಡ್ ಇನ್ ಚೀಫ್ ಹಣಕಾಸು ಅಧಿಕಾರದಡಿ ಜಾಗತಿಕ ಪೂರೈಕೆದಾರದಿಂದ 5,719 ರೈಫಲ್‍ಗಳನ್ನು ಖರೀದಿ ಮಾಡಲು ಜನವರಿ ಯಲ್ಲಿ ಟೆಂಡರ್ ಕರೆಯಲಾಗಿತ್ತು. ಇದೀಗ ಬೆರೆಟ್ಟಾ ಮತ್ತು ಬರೆಟ್ಟ್ ಸಂಸ್ಥೆಗಳ ಆಧುನಿಕ ರೈಫಲ್ಸ್ ಖರೀದಿ ಮಾಡಲಾಗಿದೆ.
Advertisement
ಈ ಕುರಿತು ಜನರಲ್ ಆಫೀಸರ್ ಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಮಾಹಿತಿ ನೀಡಿದ್ದು, ಎಲ್‍ಒಸಿ ಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದ್ದಾಗಿ ವರದಿಯಾಗಿದೆ. ಅಲ್ಲದೇ ಮತ್ತಷ್ಟು ರೈಫಲ್ಸ್ ಗಳನ್ನು ಖರೀದಿ ಮಾಡುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
Advertisement
ಕಳೆದ ಒಂದು ತಿಂಗಳ ಹಿಂದೆ ಅಧುನಿಕ ರೈಫಲ್ಸ್ ಸೈನ್ಯಕ್ಕೆ ಪೂರೈಕೆ ಮಾಡುವ ಬಗ್ಗೆ ಮಾತನಾಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಜನವರಿ 10ರೊಳಗೆ ನೂತನ ಸ್ನೈಫರ್ ರೈಫಲ್ಸ್ ಗಳನ್ನು ರಕ್ಷಣಾ ಪಡೆಯ ಉತ್ತರ ಕಮಾಂಡ್ ಪಡೆ ಹೊಂದಿರಲಿದೆ ಎಂದು ತಿಳಿಸಿದ್ದರು.
ಸ್ನೈಪರ್ ರೈಫಲ್ ವಿಶೇಷತೆ ಏನು?
ದೇಶದ ಗಡಿಯಲ್ಲಿ ರಕ್ಷಣೆ ಮಾಡುವ ಯೋಧರು ಹಾಗೂ ಪೊಲೀಸ್ ಪಡೆಗಳು ದೂರದ ಸ್ಥಳದಿಂದ ಕಾವಲು ಕಾಯುವ ವೇಳೆ ಈ ಸ್ನೈಪರ್ ರೈಫಲ್ ಬಳಸಲಾಗುತ್ತದೆ. ಈ ರೈಫಲ್ ಗಳಿಂದ ಸಿಡಿಯುವ ಗುಂಡುಗಳು ನಿಖರವಾಗಿ ಗುರಿ ಭೇದಿಸುವ ಸಾಮಥ್ರ್ಯ ಹೊಂದಿದ್ದು, ಸದ್ಯ ಸೈನ್ಯಕ್ಕೆ ನೀಡಲಾಗಿರುವ ರೈಫಲ್ಸ್ ಗಳಿಂದ ಸುಮಾರು 1,800 ಮೀಟರ್ ದೂರ ಗುರಿ ಇಟ್ಟು ದಾಳಿ ನಡೆಸಬಹುದಾಗಿದೆ. ಇದಕ್ಕೆ ಟೆಲಿಸ್ಕೋಪಿಕ್ ಸೈಟ್ ಅಳವಡಿಸಿ ರಾತ್ರಿ ವೇಳೆಯೂ ಕೂಡ ನಿಖರವಾಗಿ ದಾಳಿ ಮಾಡಬಹುದಾಗಿದೆ.
ಸೇನೆಯನ್ನು ಮತ್ತಷ್ಟು ಭದ್ರಗೊಳಿಸುವ ಉದ್ದೇಶದಿಂದ ಆಧುನಿಕ ರೈಫಲ್ಸ್ ತರಿಸಿಕೊಳ್ಳಲಾಗಿದೆ. ಭಾರತ ಸೈನ್ಯ ಸ್ನೈಫರ್ ರೈಫಲ್ಸ್ ಹೊಂದುತ್ತಿರುವ ಬಗ್ಗೆ ಪಾಕಿಸ್ತಾನ ಕೆಲ ಮಾಧ್ಯಗಳು ಕೂಡ ವರದಿ ಮಾಡಿದೆ. ಈ ಹಿಂದೆ ಭಾರತ ಮೇಲೆ ದಾಳಿ ನಡೆಸುವ ಭಯೋತ್ಪಾದಕರು ಹಾಗೂ ಪಾಕ್ ಸೈನಿಕರು ಇಂತಹ ಸ್ನೈಪರ್ ರೈಪಲ್ಸ್ ಬಳಕೆ ಮಾಡುತ್ತಿದ್ದರು. ಅಲ್ಲದೇ ಭಯೋತ್ಪಾದಕರು ಆಧುನಿಕ ಶಾಸ್ತ್ರಗಳನ್ನು ಹೊಂದಿರುವುದು ಸೈನ್ಯಕ್ಕೆ ದೊಡ್ಡ ಸಮಸ್ಯೆಯಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv