ನವದೆಹಲಿ: ಅತ್ಯಂತ ದುರ್ಗಮ ಹಿಮಪರ್ವತದಲ್ಲಿ ಭಾರತೀಯ ಸೇನೆ ಮತ್ತೊಂದು ಸಾಹಸ ಮೆರೆದಿದೆ. 18,600 ಅಡಿ ಎತ್ತರದ ಹಿಮ ಪರ್ವತದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಲಡಾಖ್‌ನ ನುನ್ ಕುನ್ ಪ್ರದೇಶದ ಸಮೀಪ ಸಮುದ್ರ ಮಟ್ಟದಿಂದ 18,600 ಅಡಿ ಎತ್ತರದಲ್ಲಿ ಭಾರತೀಯ ಸೇನೆಯ ಏವಿಯೇಷನ್ ವಿಭಾಗದ ಪೈಲಟ್‌ಗಳು ಅತ್ಯಂತ ಸಾಹಸಮಯ ಗಾಯಾಳು ಸ್ಥಳಾಂತರ ಕಾರ್ಯಾಚರಣೆ ನಡೆಸಿದೆ. ಕಡಿದಾದ ಬೆಟ್ಟದ ಇಳಿಜಾರಿನಲ್ಲಿ ಸಿಲುಕಿದ್ದ ಗಾಯಾಳುವನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಇದನ್ನೂ ಓದಿ: ನೇಪಾಳ ಭೀಕರ ಪ್ರವಾಹ | ಸಾವಿನ ದವಡೆಯಿಂದ 1,643 ಮಕ್ಕಳನ್ನು ರಕ್ಷಿಸಿದ ಹೀರೋ
ಕಾರ್ಯಾಚರಣೆಗೆ ಹೆಲಿಕಾಪ್ಟರ್‌ನ ತೂಕ ಕಡಿಮೆ ಮಾಡಲು ಅಗತ್ಯವಿಲ್ಲದ ಉಪಕರಣಗಳನ್ನು ತೆಗೆದು ಹಾಕಲಾಗಿತ್ತು. ಸೀಮಿತ ಪ್ರಮಾಣದ ಇಂಧನದೊಂದಿಗೆ ಕಾರ್ಯಾಚರಣೆ ನಡೆಸಲಾಯ್ತು. ಬಳಿಕ ಪೈಲಟ್‌ಗಳು ಅತ್ಯಂತ ಅಪಾಯಕಾರಿ ‘ಒನ್-ಸ್ಕಿಡ್ ಲ್ಯಾಂಡಿಂಗ್’ ತಂತ್ರವನ್ನು ಬಳಸಿದರು.
