ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಇಂದು ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಲಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ.
Advertisement
ಈಗಾಗಲೇ ಸರಣಿ 2-2ರಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳಿಗೂ ಇಂದಿನ ಪಂದ್ಯ ಫೈನಲ್ ಪಂದ್ಯವಾಗಿದೆ. ಹಾಗಾಗಿ ಬ್ಯಾಟಿಂಗ್ ಸ್ನೇಹಿ ಪಿಚ್‍ನಲ್ಲಿ ಇಂದು ರನ್ ಪ್ರವಾಹ ಹರಿಯುವ ಸಾಧ್ಯತೆ ಹೆಚ್ಚಿದೆ. ಪಂತ್ ಸಾರಥ್ಯದ ಭಾರತ ತಂಡದಲ್ಲಿ ಟಿ20 ಕ್ರಿಕೆಟ್‍ನ ಬ್ಯಾಟಿಂಗ್ ಪಂಟರ್‌ಗಳಿದ್ದರೆ, ಆಫ್ರಿಕಾ ತಂಡದಲ್ಲಿ ಪಂಚ್ ಹಿಟ್ಟರ್‌ಗಳ ಬಲಿಷ್ಠ ಬ್ಯಾಟಿಂಗ್ ಲೈನ್‍ಅಪ್ ಇದೆ. ಜೊತೆಗೆ ಎರಡು ತಂಡದ ಬೌಲಿಂಗ್ ಲೈನ್‍ಅಪ್ ಕೂಡ ಉತ್ತಮವಾಗಿದ್ದು, ಗೆಲುವಿಗಾಗಿ ತೀವ್ರ ಪೈಪೋಟಿ ಕಾಣಸಿಗುವುದಂತು ಕಂಡಿತ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ
Advertisement
Advertisement
ಸರಣಿಯ ಮೊದಲ ಎರಡು ಪಂದ್ಯಗಳನ್ನು ಆಫ್ರಿಕಾ ತಂಡ ಗೆದ್ದರೆ, ಇನ್ನೂಳಿದ ಎರಡು ಪಂದ್ಯಗಳನ್ನು ಭಾರತ ತಂಡ ಗೆದ್ದು ಕಂಬ್ಯಾಕ್ ಮಾಡಿದೆ. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯ ಗೆದ್ದವರು ಸರಣಿ ಜಯಿಸಿ ಸಂಭ್ರಮಿಸಲಿದ್ದಾರೆ. ಇಂದಿನ ಪಂದ್ಯಕ್ಕೆ ಮಳೆ ಅಡಚಣೆಯಾಗುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು, ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬರುತ್ತಿರುವುದರಿಂದ ಇಂದು ಕೂಡ ಮಳೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್‌ಗಿಲ್ಲ ಅವಕಾಶ?
Advertisement
Rajkot ✈️ Bengaluru
Excitement levels ???? for the final @Paytm #INDvSA T20I. ???? ????#TeamIndia pic.twitter.com/7DirHt49sG
— BCCI (@BCCI) June 19, 2022
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆ ಬಂದು ಮೈದಾನ ಒದ್ದೆಯಾದರೂ ಕೂಡ ಮಳೆ ನಿಂತ ಮೇಲೆ ಮೈದಾನವನ್ನು ಮತ್ತೆ ಆಟಕ್ಕೆ ಸಿದ್ಧಪಡಿಸುವ ಅತ್ಯಾಧುನಿಕ ತಂತ್ರಜ್ಞಾನವಿದೆ. ಹಾಗಾಗಿ ಪಂದ್ಯ ಫಲಿತಾಂಶ ಕಾಣುವ ಸಾಧ್ಯತೆ ಹೆಚ್ಚಿದೆ. ಇತ್ತ ಕ್ರಿಕೆಟ್ ಪ್ರೇಮಿಗಳು ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾದು ಕುಳಿತಿದ್ದು ವರಣನೊಂದಿಗೆ ಬಿಡುವು ನೀಡುವಂತೆ ಪ್ರಾರ್ಥಿಸುತ್ತಿದ್ದಾರೆ.