Advertisements

ಶಾಕಿಂಗ್‌ ಡಿಆರ್‌ಎಸ್‌ ವಿಡಿಯೋಗೆ ಕೊಹ್ಲಿ ಕಿಡಿ – ರಿವ್ಯೂ ಸಕ್ಸಸ್‌ ಎಂದು ವಾಹಿನಿಯಿಂದ ಸಮರ್ಥನೆ

– ಸ್ಟಂಪ್‌ ಮೈಕ್‌ ಬಳಿ ಹೋಗಿ ಕೊಹ್ಲಿ ಆಕ್ರೋಶ
– ಈ ರೀತಿ ಆಗಲು ಅಸಾಧ್ಯ ಎಂದ ಫೀಲ್ಡ್‌ ಅಂಪೈರ್‌

Advertisements

ಕೇಪ್‌ಟೌನ್‌: ಕ್ರಿಕೆಟ್‌ನಲ್ಲಿ ನಿಖರ ತೀರ್ಪು ಪ್ರಕಟವಾಗಲೆಂದೇ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಆದರೆ ಈ ತಂತ್ರಜ್ಞಾನದ ಪಾರದರ್ಶಕವಲ್ಲ ಎನ್ನುವುದು ಮೂರನೇ ಟೆಸ್ಟ್‌ ವೇಳೆ ಸಾಬೀತಾಗಿದ್ದು ಈಗ ಭಾರೀ ಹೈಡ್ರಾಮಾ ಸೃಷ್ಟಿಯಾಗಿದೆ. ನಾಯಕ ಕೊಹ್ಲಿ ಸ್ಟಂಪ್‌ ಮೈಕ್‌ನಲ್ಲೇ ಕಿಡಿಕಾರಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Advertisements

ನಡೆದಿದ್ದು ಏನು?
ದಕ್ಷಿಣ ಆಫ್ರಿಕಾ ತಂಡ ಎರಡನೇ ಇನಿಂಗ್ಸ್‌ ಬ್ಯಾಟಿಂಗ್‌ ವೇಳೆ ಅಶ್ವಿನ್‌ ಎಸೆದ 21 ಓವರ್‌ನ ಡಿಆರ್‌ಎಸ್‌ ನಿರ್ಧಾರ ಈ ಚರ್ಚೆಯ ಕೇಂದ್ರ ಬಿಂದು. 4ನೇ ಎಸೆತದಲ್ಲಿ ನಾಯಕ ಹಾಗೂ ಎಡಗೈ ಬ್ಯಾಟ್ಸ್‌ಮನ್‌ ಡೀನ್‌ ಎಲ್ಗರ್‌ ಎಲ್‌ಬಿಡಬ್ಲ್ಯು ಆಗಿದ್ದರು. ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಕೂಡ ಔಟ್‌ ಎಂದು ತೀರ್ಪು ಕೊಟ್ಟಿದ್ದರು. ಇದನ್ನೂ ಓದಿ: ಫೀಲ್ಡಿಂಗ್‍ನಲ್ಲಿ ವಿರಾಟ್ ಕೊಹ್ಲಿ ಶತಕ

ಅಂಪೈರ್‌ ತೀರ್ಪು ಪ್ರಶ್ನಿಸಿ ಎಲ್ಗರ್‌ ಡಿಆರ್‌ಎಸ್‌ ಮೊರೆ ಹೋಗಿದ್ದರು. ಆದರೆ ಡಿಆರ್‌ಎಸ್‌ ತೀರ್ಮಾನ ನೋಡಿ ಆಟಗಾರರ ಜೊತೆ ಅಂಪೈರ್‌ ಶಾಕ್‌ ಆಗಿದ್ದಾರೆ. ಹ್ಯಾಕ್‌ ಐ ತಂತ್ರಜ್ಞಾನ ಬಳಕೆ ಮಾಡಿದಾಗ ಚೆಂಡು ಸ್ಟಂಪ್ಸ್‌ಗೆ ತಾಗದೇ ಮೇಲೆ ಹೋಗುವಂತೆ ತೋರಿಸಿದೆ.

Advertisements

ಚೆಂಡು ಎಲ್ಗರ್‌ ಅವರ ಮಂಡಿಗಿಂತಲೂ ಕೆಳಗೆ ಬಡಿದಿದ್ದ ಕಾರಣ ಅದು ಸ್ಟಂಪ್ಸ್‌ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಆಟಗಾರರು ಭಾವಿಸಿದ್ದರು. ಆದರೆ ಬಾಲ್‌ ಸ್ಟಂಪ್‌ಗಿಂತಲೂ ಮೇಲೆ ಹೋಗುವಂತೆ ಕಾಣಿಸಿದ್ದರಿಂದ ಅಂಪೈರ್‌ ನಾಟೌಟ್‌ ಎಂದು ತೀರ್ಪು ನೀಡಿದ್ದಾರೆ. ಡಿಆರ್‌ಎಸ್‌ ತೀರ್ಪು ಕಂಡ ಆನ್‌ ಫೀಲ್ಡ್‌ ಅಂಪೈರ್‌ ಎರಾಸ್ಮಸ್‌ ‘ಇದು ಅಸಾಧ್ಯ’ ಎಂದು ಹೇಳಿದ್ದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಹರಾಜಿಗೂ ಮುನ್ನ 3 ಆಟಗಾರರನ್ನು ಆಯ್ಕೆ ಮಾಡಿ: ಲಕ್ನೋ, ಅಹಮದಾಬಾದ್‍ಗೆ ಡೆಡ್‍ಲೈನ್

ಆರ್‌ ಅಶ್ವಿನ್‌ ಕೂಡಲೇ, ಸೂಪರ್‌ ಸ್ಪೋರ್ಟ್‌ ಪಾರ್ಕ್‌ನಲ್ಲಿ ಗೆಲ್ಲಲು ನೀವು ಇನ್ನು ಒಳ್ಳೆಯ ಮಾರ್ಗ ಕಂಡುಕೊಳ್ಳಬೇಕಿತ್ತು, ಎಂದು ಕಿಚಾಯಿಸಿದ್ದಾರೆ. ನಾಯಕ ಕೊಹ್ಲಿ ಸ್ಟಂಪ್‌ ಮೈಕ್‌ದ ಬಳಿ ಹೋಗಿ, ನೀವು ಬರೀ ಎದುರಾಳಿ ಮಾತ್ರವಲ್ಲ ನಿಮ್ಮ ತಂಡದ ಮೇಲೂ ಗಮನ ಇರಲಿ ಪ್ರಸಾರಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕೆಎಲ್‌ ರಾಹುಲ್‌, 11 ಆಟಗಾರರ ವಿರುದ್ಧ ಇಡೀ ದೇಶವೇ ನಿಂತಿದೆ ಎಂದು ಕಾಡಿಕಾರಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಭಾರೀ ಚರ್ಚೆ ಆಗುತ್ತಿದೆ.

ಚರ್ಚೆ ಆಗುತ್ತಿದ್ದಂತೆ ವಾಹಿನಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಬಾಲ್‌ ಪಿಚ್‌ ಬಿದ್ದ ನಂತರ ಬೌನ್ಸ್‌ ಆಗಿದೆ. ಬೌನ್ಸ್‌ ಆದ ಪರಿಣಾಮ ಬಾಲ್‌ ಸ್ಟಂಪ್ಸ್‌ಗಿಂತ ಮೇಲಕ್ಕೆ ಹೋಗಿದೆ. ಹೀಗಾಗಿ ಎಲ್ಗರ್‌ ಡಿಎಆರ್‌ಎಸ್‌ ರಿವ್ಯೂ ಸಕ್ಸಸ್‌ ಆಗಿದೆ ಎಂದು ತೋರಿಸುವ ವಿಡಿಯೋವನ್ನು ರಿಲೀಸ್‌ ಮಾಡಿದೆ.

Advertisements
Exit mobile version