ನವದೆಹಲಿ: ಐಪಿಎಲ್‍ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು 2022ರ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ತಲಾ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜ.22ರ ಸಂಜೆ 5 ಗಂಟೆವರೆಗೂ ಬಿಸಿಸಿಐ ಸಮಯ ನೀಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು, ಪ್ರತಿ ತಂಡವು 3 ಆಟಗಾರರ ಖರೀದಿಗೆ ಗರಿಷ್ಠ 33 ಕೋಟಿ ರೂ. ವೆಚ್ಚ ಮಾಡಬಹುದು. ಇಬ್ಬರು ಭಾರತೀಯ ಆಟಗಾರರು, ಒಬ್ಬ ವಿದೇಶಿ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಮೊದಲ ಆಯ್ಕೆಗೆ 15 ಕೋಟಿ ರೂ., 2ನೇ ಆಯ್ಕೆಗೆ 11 ಕೋಟಿ ರೂ. ಹಾಗೂ 3ನೇ ಆಯ್ಕೆಗೆ 7 ಕೋಟಿ ರೂ. ನೀಡಬಹುದು ಎಂದು ತಿಳಿಸಿದರು.
Advertisement
Advertisement
ಐಪಿಎಲ್‍ನ ಎರಡು ಹೊಸ ತಂಡಗಳಾದ ಸಂಜೀವ್ ಗೋಯೆಂಕಾ ಆರ್‌ಪಿಎಸ್‍ಜಿ ಗ್ರೂಪ್‍ನ ಲಕ್ನೋ ಮತ್ತು ಸಿವಿಸಿ ಕ್ಯಾಪಿಟಲ್‍ನ ಅಹಮದಾಬಾದ್ ತಂಡವು ಬಿಸಿಸಿಐಯಿಂದ ಈಗಾಗಲೇ ಅನುಮತಿಯನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು: ಯೋಗಿ ಆದಿತ್ಯನಾಥ್
Advertisement
Advertisement
ಈಗಾಗಲೇ 15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದ್ದ ವಿವೋ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿ ಟಾಟಾ ತೆಕ್ಕೆಗೆ ಶೀರ್ಷಿಕೆ ಪ್ರಯೋಜಕತ್ವವನ್ನು ಬಿಸಿಸಿಐ ನೀಡಿದೆ. ಜೊತೆಗೆ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಇದನ್ನೂ ಓದಿ: ನಾನು ಖುಷಿಯಾಗಿದ್ದೇನೆ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಸೈನಾ ನೆಹ್ವಾಲ್