CricketLatestMain PostSports

ಫೀಲ್ಡಿಂಗ್‍ನಲ್ಲಿ ವಿರಾಟ್ ಕೊಹ್ಲಿ ಶತಕ

ಕೇಪ್‍ಟೌನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‍ನಲ್ಲಿ ಶತಕ ಸಿಡಿಸದೇ ವರ್ಷಗಳೇ ಕಳೆದರೂ ಕೂಡ ಇದೀಗ ಫೀಲ್ಡಿಂಗ್‍ನಲ್ಲಿ ಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ ನೂತನ ಮೈಲಿಗಲ್ಲು ನೆಟ್ಟಿದ್ದಾರೆ.

ವಿರಾಟ್ ಕೊಹ್ಲಿ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಈ ಮೈಲಿಗಲ್ಲು ನೆಟ್ಟಿದ್ದು, 100 ಕ್ಯಾಚ್ ಪಡೆದ ಭಾರತದ 6ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ನೂರು ಕ್ಯಾಚ್ ಪಡೆಯಲು 99 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಮೊಹಮ್ಮದ್ ಅಜರುದ್ದೀನ್ ಬಳಿಕ ವೇಗವಾಗಿ ನೂರು ಕ್ಯಾಚ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಹರಾಜಿಗೂ ಮುನ್ನ 3 ಆಟಗಾರರನ್ನು ಆಯ್ಕೆ ಮಾಡಿ: ಲಕ್ನೋ, ಅಹಮದಾಬಾದ್‍ಗೆ ಡೆಡ್‍ಲೈನ್

ಈ ಮೊದಲು ರಾಹುಲ್ ದ್ರಾವಿಡ್ 210 ಪಂದ್ಯಗಳಿಂದ 164 ಕ್ಯಾಚ್ ಪಡೆದರೆ, ವಿ.ವಿ ಎಸ್ ಲಕ್ಷ್ಮಣ್ 134 ಪಂದ್ಯಗಳಿಂದ 134 ಕ್ಯಾಚ್, ಸಚಿನ್ ತೆಂಡೂಲ್ಕರ್ 200 ಪಂದ್ಯಗಳಿಂದ 115 ಕ್ಯಾಚ್, ಸುನೀಲ್ ಗಾವಸ್ಕರ್ 216 ಪಂದ್ಯಗಳಿಂದ 108 ಕ್ಯಾಚ್ ಮತ್ತು ಮೊಹಮ್ಮದ್ ಅಜರುದ್ದೀನ್ 99 ಪಂದ್ಯಗಳಿಂದ 105 ಕ್ಯಾಚ್ ಪಡೆದಿದ್ದಾರೆ. ಇದನ್ನೂ ಓದಿ: ಯಾದವ್ ಬೌಲಿಂಗ್‍ಗೆ ಕೇಶವ್ ಕ್ಲೀನ್ ಬೌಲ್ಡ್ – ಎಗರಿ ಮಾರುದ್ದ ಬಿದ್ದ ಮಿಡಲ್ ಸ್ಟಂಪ್

 

Leave a Reply

Your email address will not be published.

Back to top button