ಅಹಮದಾಬಾದ್: ಆರಂಭದಲ್ಲಿ ಬ್ಯಾಟರ್‌ಗಳ ವಿಸ್ಫೋಟಕ ಬ್ಯಾಟಿಂಗ್ ನಂತರ ಬೌಲರ್‌ಗಳ ಬೆಂಕಿ ಬೌಲಿಂಗ್‌ನಿಂದ ಫೈನಲ್ ಪಂದ್ಯದಲ್ಲಿ ಭಾರತ (Team India) ಸತತ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದೆ. ನ್ಯೂಜಿಲೆಂಡ್ (New Zealand) ವಿರುದ್ಧ 96 ರನ್‌ಗಳಿಂದ ಗೆದ್ದ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್ (T20 World Cup) ಗೆದ್ದು ಇತಿಹಾಸ ನಿರ್ಮಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು.
4 ವಿಶ್ವದಾಖಲೆ ನಿರ್ಮಾಣ
ಇಲ್ಲಿಯವರೆಗೆ ಸತತ ಎರಡು ಟಿ20 ಫೈನಲ್ ಪಂದ್ಯವನ್ನು ಯಾವುದೇ ತಂಡ ಜಯಗಳಿಸಿಲ್ಲ. ಆದರೆ ಭಾರತ 2024 ಮತ್ತು 2026 ರಲ್ಲಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟಿ20 ವಿಶ್ವಕಪ್ ಆತಿಥ್ಯ ವಹಿಸಿದ ತಂಡ ಇಲ್ಲಿಯವರೆಗೆ ಚಾಂಪಿಯನ್ ಪಟ್ಟ ಅಲಂಕರಿಸಿರಲಿಲ್ಲ. ಈ ಬಾರಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸಿತ್ತು. ಇಲ್ಲಿಯವರೆಗೆ ಯಾವುದೇ ತಂಡ 3 ಟಿ20 ವಿಶ್ವಕಪ್ ಪಂದ್ಯ ಗೆದ್ದಿರಲಿಲ್ಲ. ಆದರೆ 2008, 2024 ಮತ್ತು 2026 ರಲ್ಲಿ ಜಯಿಸುವ ಮೂಲಕ ಭಾರತ ವಿಶ್ವದಾಖಲೆ ಬರೆದಿದೆ. ಇಂಗ್ಲೆಂಡ್ 2010, 2022 ರಲ್ಲಿ ಟ್ರೋಫಿ ಗೆದ್ದರೆ ವೆಸ್ಟ್ ಇಂಡೀಸ್ 2012 ಮತ್ತು 2016 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಭಾರತ ಈ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಹೊಡೆಯಿತು. ಇದು ಟಿ20 ಟೂರ್ನಿಯ ಫೈನಲ್‌ನಲ್ಲಿ ತಂಡವೊಂದು ಬಾರಿಸಿದ ಅತ್ಯಧಿಕ ಮೊತ್ತ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – 255 ರನ್ ಹೊಡೆದು ವಿಶ್ವದಾಖಲೆ ಬರೆದ ಟೀಂ ಇಂಡಿಯಾ
DEATH.
TAXES.
Jasprit Bumrah’s yorkers in death overs 🔥
ICC Men’s #T20WorldCup | FINAL | #INDvNZ | LIVE NOW 👉 https://t.co/Tz1DBSb4nT pic.twitter.com/26g2YJwauH
— Star Sports (@StarSportsIndia) March 8, 2026
ಆರಂಭದಲ್ಲೇ ಹಿನ್ನಡೆ:
ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಹಾರ್ದಿಕ್ ಪಾಂಡ್ಯ ಎಸೆದ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ 21 ರನ್ ಚಚ್ಚಿದರು. ಆದರೆ ಅಕ್ಷರ್ ಪಟೇಲ್ ಎಸೆದ 3ನೇ ಓವರ್‌ನ ನಾಲ್ಕನೇ ಎಸೆತದಲ್ಲಿ 9 ರನ್ ಗಳಿಸಿದ್ದ ಫಿನ್ ಅಲೆನ್ ಸಿಕ್ಸ್ ಸಿಡಿಸುವ ಪ್ರಯತ್ನದಲ್ಲಿ ಬೌಂಡರಿ ಗೆರೆಯ ಬಳಿ ತಿಲಕ್ ವರ್ಮಾ ಅವರಿಗೆ ಕ್ಯಾಚ್ ನೀಡಿ ಔಟಾದರು.
ನ್ಯೂಜಿಲೆಂಡಿಗೆ ಎರಡನೇ ಆಘಾತ ನೀಡಿದ್ದ ಬುಮ್ರಾ. ತಮ್ಮ ಮೊದಲ ಎಸೆತದಲ್ಲೇ 1 ರನ್ ಗಳಿಸಿದ್ದ ರಚಿನ್ ರವೀಂದ್ರ ಅವರನ್ನು ಔಟಾದರು. ಇಶನ್ ಕಿಶನ್ ಅವರು ಉತ್ತಮ ಕ್ಯಾಚ್ ಹಿಡಿದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಬಂದ ಗ್ಲೇನ್ ಫಿಲಿಪ್ಸ್ 5 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಬೌಲ್ಡ್ ಮಾಡಿದರು. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 31 ರನ್ ಗಳಿಸಿದ್ದ ನ್ಯೂಜಿಲೆಂಡ್ 47 ರನ್‌ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಇದನ್ನೂ ಓದಿ: ಫೈನಲಿನಲ್ಲಿ ಅಬ್ಬರಿಸಿ ಸ್ಫೋಟಕ ಬ್ಯಾಟಿಂಗ್ – ವಿಶ್ವದಾಖಲೆ ಬರೆದ ಅಭಿಷೇಕ್ ಶರ್ಮಾ
Need a breakthrough? Call #AxarPatel 🔥
Massive wicket as the dangerous Finn Allen departs for just 9(7) 👏
ICC Men’s #T20WorldCup | FINAL | #INDvNZ | LIVE NOW 👉 https://t.co/Tz1DBSb4nT pic.twitter.com/eeeQHWA3wH
— Star Sports (@StarSportsIndia) March 8, 2026
ಸಂಕಷ್ಟದ ಸಮಯದಲ್ಲಿ ಮಾರ್ಕ್ ಚಾಪ್‌ಮನ್ ಮತ್ತು ಟಿಮ್ ಸೀಫರ್ಟ್ ಅವರು ನಾಲ್ಕನೇ ವಿಕೆಟಿಗೆ 23 ರನ್ ಜೊತೆಯಾಟವಾಡಿದರು. ಆದರೆ ಹಾರ್ದಿಕ್ ಎಸೆದ ಓವರ್‌ನಲ್ಲಿ ಬಲವಾಗಿ ಹೊಡೆಯಲು ಹೋಗಿ ಚಾಪಮನ್ ಬ್ಯಾಟಿಗೆ ತಗುಲಿ ವಿಕೆಟಿಗೆ ಬಡಿಯಿತು. ಚಾಪಮನ್ ಔಟಾದ ಬೆನ್ನಲ್ಲೇ ಒಂದು ಸಿಕ್ಸ್ ಸಿಡಿಸಲು ಹೋಗಿ 52 ರನ್ (26 ಎಸೆತ,2 ಬೌಂಡರಿ, 5 ಸಿಕ್ಸ್) ಹೊಡೆದಿದ್ದ ಟಿಮ್ ಸೀಫರ್ಟ್ ಇಶನ್ ಕಿಶನ್ ಬೌಂಡರಿ ಬಳಿ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.
ಡ್ಯಾರಿಲ್ ಮಿಚೆಲ್ 37 ರನ್ ಹೊಡೆದು ಔಟಾದರು. 16ನೇ ಓವರ್ ಎಸೆದ ಬುಮ್ರಾ ಜೇಮ್ಸ್ ನಿಶಮ್ ಮತ್ತು ಮ್ಯಾಟ್ ಹೆನ್ರಿ ಅವರನ್ನು ಬೌಲ್ಡ್ ಮಾಡಿದರು. ಸ್ವಲ್ಪ ಪ್ರತಿರೋಧ ತೋರಿದ ಮಿಚೆಲ್ ಸ್ಯಾಂಟ್ನರ್ 43 ರನ್(35 ಎಸೆತ, 3 ಬೌಂಡರಿ, 2 ಸಿಕ್ಸ್) ಹೊಡೆದು ಬುಮ್ರಾಗೆ ವಿಕೆಟ್ ಒಪ್ಪಿಸಿದರು.

