ಬೆಂಗಳೂರು: ಭಾನುವಾರ ಭಾರತ (India) ಮತ್ತು ನೆದರ್ಲ್ಯಾಂಡ್ಸ್ (Netherlands) ಮಧ್ಯೆ ಕ್ರಿಕೆಟ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ (Tight Police Security) ಏರ್ಪಡಿಸಲಾಗಿದೆ.
ವಿಶ್ವಕಪ್ ಟೂರ್ನಿಯ (World Cup Cricket) ಒಟ್ಟು 5 ಲೀಗ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದಿದ್ದು ಭಾನುವಾರ ಕೊನೆಯ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಸಚಿನ್ ದಾಖಲೆ ಸರಿಗಟ್ಟಿದ್ದೇ ತಡ ಬೆಂಗ್ಳೂರಿನ ರಸ್ತೆಗಳಿಗೆ ಕೊಹ್ಲಿ ಹೆಸರಿಡಲು ಒತ್ತಾಯ
Advertisement
Advertisement
ಭಾರತದ ಕೊನೆಯ ಲೀಗ್ ಪಂದ್ಯ ಆಗಿದ್ದು ಈಗಾಗಲೇ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಮೈದಾನಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಸ್ಟೇಡಿಯಂ ಸುತ್ತಾ ಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Advertisement
9 ಜನ ಎಸಿಪಿ, 28 ಇನ್ಸ್ ಪೆಕ್ಟರ್, 86 ಜನ ಪಿಎಸ್ಐ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 4 ಕೆಎಎಸ್‌ಆರ್‌ಪಿ ತುಕಡಿ, 2 ಡಿ ಸ್ಪಾಟ್ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
Advertisement
ಭದ್ರತೆ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಹೆಚ್.ಟಿ ಪ್ರತಿಕ್ರಿಯಿಸಿ, ವಿದ್ವಾಂಸಕ ಕೃತ್ಯ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಗೇಟ್ ಬಳಿ ವಿದ್ವಾಂಸಕ ಕೃತ್ಯ ತಪಾಸಣೆ ಕೈಗೊಳ್ತೇವೆ. ಟಿಕೆಟ್ ಹಿಂದೆ ನಮೂದಿಸಿರುವ ಎಲ್ಲಾ ನಿಯಮಗಳನ್ನು ಕ್ರೀಡಾಭಿಮಾನಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.