227 ರನ್‍ಗೆ ಬಾಂಗ್ಲಾ ಆಲೌಟ್ – ಡೆಬ್ಯೂ ಪಂದ್ಯವಾಡಿ 12 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆದ ಉನಾದ್ಕಟ್

Public TV
2 Min Read
TEAM INDIA 1 3

ಢಾಕಾ: ಭಾರತದ (India) ಬೌಲರ್‌ಗಳಾದ ಉಮೇಶ್ ಯಾದವ್, ಅಶ್ವಿನ್, ಜೈದೇವ್ ಉನಾದ್ಕಟ್ ಮೊದಲ ದಿನವೇ 10 ವಿಕೆಟ್ ಬೇಟೆಯಾಡಿ ಬಾಂಗ್ಲಾಗೆ ಬ್ರೇಕ್ ಹಾಕಿದ್ದಾರೆ.

TEAM INDIA 4 2

2ನೇ ಟೆಸ್ಟ್ (2nd Test) ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ (Bangladesh) 73.5 ಓವರ್‌ಗಳಲ್ಲಿ 227 ರನ್ ಸಿಡಿಸಿ ಆಲೌಟ್ ಆಯಿತು. ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ ದಿನದಾಟದ ಅಂತ್ಯಕ್ಕೆ 8 ಓವರ್‌ಗಳಲ್ಲಿ 19 ರನ್ ಬಾರಿಸಿ 208 ರನ್‌ ಹಿನ್ನಡೆಯಲ್ಲಿದೆ.

TEAM INDIA 5

ಈ ಮೊದಲು ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ 39 ರನ್ ಆಗುವಷ್ಟರಲ್ಲಿ ಆರಂಭಿಕ ಆಟಗಾರ ಜಾಕಿರ್ ಹಸನ್ 15 ರನ್ (34 ಎಸೆತ, 1 ಬೌಂಡರಿ) ವಿಕೆಟ್ ಪಡೆಯುವಲ್ಲಿ ಜೈದೇವ್ ಉನಾದ್ಕಟ್ ಯಶಸ್ವಿಯಾದರು. ಈ ಮೂಲಕ ಉನಾದ್ಕಟ್ ಡೆಬ್ಯೂ ಪಂದ್ಯವಾಡಿ 12 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆಯುವಲ್ಲಿ ಸಫಲರಾದರು. 2010ರಲ್ಲಿ ಉನಾದ್ಕಟ್‌ ಮೊದಲ ಟೆಸ್ಟ್‌ ಪಂದ್ಯವಾಡಿದ್ದರು. ಆ ಬಳಿಕ ಆಡಿರಲಿಲ್ಲ. ಇದೀಗ 12 ವರ್ಷಗಳ ಬಳಿಕ ಮತ್ತೆ ಟೆಸ್ಟ್‌ ತಂಡಕ್ಕೆ ವಾಪಾಸ್‌ ಆಗಿದ್ದಾರೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

TEAM INDIA 3 1

ಜಾಕಿರ್ ಹಸನ್ ವಿಕೆಟ್‌ ಕಳೆದುಕೊಂಡ ಬಳಿಕ ಇವರ ಹಿಂದೆನೇ ನಜ್ಮುಲ್ ಹೊಸೈನ್ ಶಾಂತೋ ಕೂಡ 24 ರನ್ (57 ಎಸೆತ, 3 ಬೌಂಡರಿ) ಬಾರಿಸಿ ವಿಕೆಟ್ ಕಳೆದುಕೊಂಡರು. ಬಳಿಕ ವಿಕೆಟ್ ಕಳೆದುಕೊಳ್ಳತ್ತಾ ಸಾಗುತ್ತಿದ್ದ ಬಾಂಗ್ಲಾ ಪರ ಮೊಮಿನುಲ್ ಹಕ್ ಏಕಾಂಗಿ ಹೋರಾಟ ನಡೆಸಿದರು.

Mominul Haque

ಮಿಂಚಿದ ಮೊಮಿನುಲ್ ಹಕ್:
ಬಾಂಗ್ಲಾ ಪರ ಶಕೀಬ್ 16 ರನ್ (39 ಎಸೆತ, 1 ಬೌಂಡರಿ, 1 ಸಿಕ್ಸ್), ಮುಶ್ಫಿಕರ್ ರಹೀಮ್ 26 ರನ್ (46 ಎಸೆತ, 5 ಬೌಂಡರಿ) ಮತ್ತು ಲಿಟ್ಟನ್ ದಾಸ್ 25 ರನ್ (26 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಒಬ್ಬರ ಹಿಂದೆ ಒಬ್ಬರು ವಿಕೆಟ್ ನೀಡಿ ಹೊರ ನಡೆದರು. ಇತ್ತ ಮೊಮಿನುಲ್ ಹಕ್ ಮಾತ್ರ ಏಕಾಂಕಿ ಹೋರಾಟಕ್ಕೆ ಮುಂದಾದರು. ಭಾರತದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ 84 ರನ್ (157 ಎಸೆತ, 12 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು. ಇದನ್ನೂ ಓದಿ: ರೋಹಿತ್‍ಗೆ ಗೇಟ್‍ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?

UMESH YADAV

ಯಾದವ್, ಅಶ್ವಿನ್ ಭರ್ಜರಿ ಬೇಟೆ:
ಒಂದು ಕಡೆ ಬಾಂಗ್ಲಾ ಪರ ಮೊಮಿನುಲ್ ಹಕ್ ಏಕಾಂಗಿ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಭಾರತ ಬೌಲರ್‌ಗಳಾದ ಉಮೇಶ್ ಯಾದವ್, ಅಶ್ವಿನ್, ಉನಾದ್ಕಟ್ ಆರಂಭದಿಂದಲೇ ವಿಕೆಟ್ ಬೇಟೆ ಆರಂಭಿಸಿ ಮೂವರೇ ಸೇರಿ 10 ವಿಕೆಟ್ ಬೇಟೆಯಾಡಿದರು. ಯಾದವ್‌ ಮತ್ತು ಅಶ್ವಿನ ತಲಾ 4 ವಿಕೆಟ್‌ ಪಡೆದರೆ, ಇನ್ನುಳಿದ 2 ವಿಕೆಟ್‌ ಉನಾದ್ಕಟ್‌ ಪಾಲಾಯಿತು.

TEAM INDIA 2 1

ಬಾಂಗ್ಲಾ ಆಲೌಟ್ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದ್ದ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಶುಭಮನ್ ಗಿಲ್ ಅಜೇಯ 14 ರನ್ (20 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಕೆ.ಎಲ್ ರಾಹುಲ್ 3 ರನ್ (30 ಎಸೆತ) ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *