ಮುಂಬೈ: ಇದೇ ಸೆಪ್ಟೆಂಬರ್ 20ರಿಂದ ಭಾರತ (India)- ಆಸ್ಟ್ರೇಲಿಯಾ (Australia) ಟಿ20 ಸರಣಿ ಆರಂಭವಾಗಲಿದೆ. ಆಸಿಸ್ ವಿರುದ್ಧ ಪ್ರಬಲ ಪ್ರದರ್ಶನ ನೀಡಲು ಭಾರತ ಸಜ್ಜಾಗಿದ್ದು, ಮಾರಕ ಬೌಲರ್ ಜಸ್ಪ್ರಿತ್ ಬುಮ್ರಾ (Jasprit Bumrah) ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.
ಏಷ್ಯಾಕಪ್ (AisaCup) ಸೂಪರ್ ಫೋರ್ ಲೀಗ್ ಹಂತದಲ್ಲಿ ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾದ (Srilanka) ವಿರುದ್ಧ ಸೆಣಸಿದರೂ ಫೈನಲ್ ತಲುಪಲು ಭಾರತ ವಿಫಲವಾಯಿತು. ಈ ಸೋಲಿನ ರುಚಿ ಕಂಡ ಭಾರತ ಹಲವು ಬದಲಾವಣೆಯೊಂದಿಗೆ ಎದುರಾಳಿಗಳನ್ನು ಬಗ್ಗು ಬಡಿಯಲು ಸಜ್ಜಾಗುತ್ತಿದೆ. ಅಲ್ಲದೇ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನವೇ ಟೀಂ ಇಂಡಿಯಾ ಆಟಗಾರರ ಸಾಮರ್ಥ್ಯವನ್ನೂ ಮೌಲ್ಯಮಾಪನ ಮಾಡಲು ಇದು ಉತ್ತಮ ಸಮಯವಾಗಿದೆ. ಇದನ್ನೂ ಓದಿ: ಮಳೆ ಅವಾಂತರ: ಭಾರತ-ನ್ಯೂಜಿಲೆಂಡ್ ಟೆಸ್ಟ್ ಇನ್ನಿಂಗ್ಸ್ ರದ್ದು, ನಾಳೆ ಡ್ರಾ ಸಾಧ್ಯತೆ
Advertisement
Advertisement
ಈ ಪಂದ್ಯದಲ್ಲಿ ಮಾರಕ ಬೌಲರ್ ವೇಗಿ ಜಸ್ಪ್ರಿತ್ ಬುಮ್ರಾ ಮತ್ತೊಬ್ಬ ವೇಗಿ ದೀಪಕ್ ಚಹಾರ್ (Deepak Chahar) ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಅನೇಕರಿಗೆ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್-2022ರ ವೇಳೆ ಭಾರತ ತಂಡಕ್ಕೆ ಪ್ರಮುಖ ಆಟಗಾರರ ಅನುಪಸ್ಥಿತಿ ಎದುರಾಯಿತು. ಇದು ತಂಡದ ಮೇಲೂ ಸಾಕಷ್ಟು ಪರಿಣಾಮ ಬೀರಿ ಸೂಪರ್ ಫೋರ್ ಲೀಗ್‌ನಲ್ಲೇ ಭಾರತ ಹೊರಗುಳಿಯುವಂತಾಯಿತು. ಇದನ್ನೂ ಓದಿ: ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ
Advertisement
Advertisement
ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ?
ಆಸಿಸ್ ವಿರುದ್ಧ ಸೆ.20ರಿಂದ ಆರಂಭವಾಗುವ ಟಿ20 ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಜಸ್ಪ್ರಿತ್ ಬುಮ್ರಾ, ಯಜುವೇಂದ್ರ ಚಾಹಲ್, ದಿನೇಶ್ ಕಾರ್ತಿಕ್, ರವಿ ಬಿಷ್ಣೋಯ್, ದೀಪಕ್ ಹೂಡಾ ಅಥವಾ ಸಂಜು ಸಾಮ್ಸನ್ ಹಾಗೂ ದೀಪಕ್ ಚಹಾರ್ ಭಾರತ ತಂಡದಲ್ಲಿ ಇರಲಿದ್ದಾರೆ.
ಎಲ್ಲಿ, ಯಾವಾಗ ಪಂದ್ಯ?
ಪ್ರತಿದಿನ ಸಂಜೆ 7.30ಕ್ಕೆ ಟಿ20 ಆರಂಭವಾಗಲಿದ್ದು, ಸೆ.20 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಸಿಸ್ ವಿರುದ್ಧ ಮೊದಲ ಪಂದ್ಯ ನಡೆಯಲಿದೆ. ಸೆ.23ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ 2ನೇ ಪಂದ್ಯ ಹಾಗೂ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆ.25ರಂದು 3ನೇ ಪಂದ್ಯ ನಡೆಯಲಿದೆ.