CricketDharwadDistrictsKarnatakaLatestLeading NewsMain PostSports

ಮಳೆ ಅವಾಂತರ: ಭಾರತ-ನ್ಯೂಜಿಲೆಂಡ್ ಟೆಸ್ಟ್ ಇನ್ನಿಂಗ್ಸ್ ರದ್ದು, ನಾಳೆ ಡ್ರಾ ಸಾಧ್ಯತೆ

- 66 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 229 ರನ್ ಪೇರಿಸಿದ ಭಾರತ

ಹುಬ್ಬಳ್ಳಿ: ಭಾರತ (Team India) ಮತ್ತು ನ್ಯೂಜಿಲೆಂಡ್-ಎ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್ (Test Cricket) ಪಂದ್ಯದ ಇಂದಿನ ಇನ್ನಿಂಗ್ಸ್ ಮಳೆಯಿಂದ ರದ್ದಾಗಿದ್ದು, 4 ದಿನಗಳ ಟೆಸ್ಟ್ ಪಂದ್ಯ ನಾಳೆ ಡ್ರಾ ಆಗುವ ಸಾಧ್ಯತೆಯಿದೆ.

ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್ಲಿ ಈ ತಿಂಗಳ 8 ರಿಂದ ಭಾರತ-ಎ ಮತ್ತು ನ್ಯೂಜಿಲೆಂಡ್-ಎ (New Zealand) ತಂಡಗಳು ಟೆಸ್ಟ್ ಹಣಾಹಣಿ ನಡೆಸಿದ್ದು, ಈ ಪಂದ್ಯಕ್ಕೆ ಮಳೆ ಕಾಟ ವಿಪರೀತವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಜೊತೆಗೆ ಆಗಾಗ್ಗೆ ತುಂತುರು ಮಳೆ (Rain) ಹಿನ್ನೆಲೆ, 5 ಬಾರಿ ಮೈದಾನ ಪರಿಶೀಲನೆ ನಡೆಸಿದ ಆಯೋಜಕರು ಆಟಕ್ಕೆ ಮೈದಾನ ಯೋಗ್ಯವಿಲ್ಲವೆಂದು ಇಂದಿನ ಇನ್ನಿಂಗ್ಸ್ ರದ್ದುಗೊಳಿಸಿದ್ದಾರೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಆರನ್ ಫಿಂಚ್ ವಿದಾಯ

ಟಾಸ್ ಸೋತು ಬ್ಯಾಟಿಂಗ್ (Bating) ಮಾಡುತ್ತಿರುವ ಭಾರತ 2ನೇ ದಿನದಾಟದ ಅಂತ್ಯಕ್ಕೆ 66 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿದೆ. ವಿಕೆಟ್ ಕೀಪರ್ ಕೆ.ಎಸ್.ಭರತ್ (KS Bharat) 74 ಮತ್ತು ರಾಹುಲ್ ಚಾಹರ್ (Rahul Chahar) 4 ರನ್ ಗಳಿಸಿ ಕ್ರೀಸ್‌ನಲ್ಲೇ ಉಳಿದಿದ್ದಾರೆ.

Live Tv

Leave a Reply

Your email address will not be published.

Back to top button