ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾಗೆ ಬ್ರೇಕ್ ಕೊಟ್ಟ ರಹಾನೆ

Public TV
1 Min Read
rahane catch final

ಸಿಡ್ನಿ: ನಾಲ್ಕನೆ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ತಂಡದ ಉಪನಾಯಕ ಅಜಿಂಕ್ಯ ರಹಾನೆ ಉತ್ತಮವಾಗಿ ಕ್ಯಾಚ್ ಹಿಡಿಯುವ ಮೂಲಕ ಟೀಂ ಇಂಡಿಯಾದ ಮೇಲುಗೈಗೆ ಕಾರಣರಾಗಿದ್ದಾರೆ.

ಆಸ್ಟ್ರೇಲಿಯಾ ಇನ್ನಿಂಗ್ಸ್ ನ ಶಮಿ ಎಸೆದ 52ನೇ ಓವರಿನ ನಾಲ್ಕನೇಯ ಎಸೆತವನ್ನು ಮಾರ್ನಸ್ ಲ್ಯಾಬುಶಾನೆ ಶಾರ್ಟ್ ಮಿಡ್‍ವಿಕೆಟ್ ನತ್ತ ಹೊಡೆದಿದ್ದರು. ಈ ವೇಳೆ ಅಲ್ಲಿದ್ದ ರಹಾನೆ ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾದ ಹಿನ್ನಡೆಗೆ ಕಾರಣರಾದರು.

ರಹಾನೆ ಈ ಕ್ಯಾಚ್ ಹಿಡಿಯಲು ಕಾರಣವಾಗಿದ್ದು ಕೊಹ್ಲಿಯ ಫೀಲ್ಡಿಂಗ್ ಪ್ಲಾನ್. ಬಲಗೈ ಬ್ಯಾಟ್ಸ್ ಮನ್ ಲ್ಯಾಬುಶಾನೆ ಎಡಭಾಗದಲ್ಲಿ ಎರಡು ಫೀಲ್ಡರ್ ಗಳ ಮಧ್ಯೆ ಬೌಂಡರಿ ಹೊಡೆದಿದ್ದರು. ಲ್ಯಾಬುಶಾನೆ ಎಡಭಾಗದಲ್ಲೇ ಹೆಚ್ಚು ಬ್ಯಾಟ್ ಬೀಸುತ್ತಿದ್ದಾರೆ ಎನ್ನುವುದನ್ನು ಅರಿತ ಕೊಹ್ಲಿ ಶಾರ್ಟ್ ಮಿಡ್ ವಿಕೆಟ್ ಬಳಿ ರಹಾನೆ ಅವರನ್ನು ನಿಲ್ಲಲು ಸೂಚಿಸಿದ್ದರು. ಶಮಿ ಅವರ ಮತ್ತೊಂದು ಎಸೆತದಲ್ಲಿ 38 ರನ್ ಗಳಿಸಿದ್ದ ಲ್ಯಾಬುಶಾನೆ ಅಂತಹದ್ದೆ ಹೊಡೆತ ಹೊಡೆಯಲು ಹೋಗಿ ರಹಾನೆಗೆ ಕ್ಯಾಚ್ ನೀಡಿ ಔಟಾದರು.

ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 83.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿದೆ. ಹ್ಯಾರಿಸ್ 79 ರನ್, ಉಸ್ಮಾನ್ ಖವಾಜ 27 ರನ್, ಹೆಡ್ 20, ಹ್ಯಾಂಡ್ಸ್ ಕಾಂಬ್ ಔಟಾಗದೇ 28 ರನ್, ಪ್ಯಾಟ್ ಕಮ್ಮಿನ್ಸ್ ಔಟಾಗದೇ 25 ರನ್ ಗಳಿಸಿದ್ದಾರೆ.

ಸಿಡ್ನಿ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗಲಿದೆ ಎಂದು ಊಹಿಸಿದಂತೆ ಇಂದು ಕುಲ್‍ದೀಪ್ ಯಾದವ್ ವಿಕೆಟ್ ಪಡೆದರೆ, ಜಡೇಜಾ 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *