ಇಂದೋರ್: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಇದರಿಂದ ಓವರ್ ಕಡಿತಗೊಳಿಸಿ ಪಂದ್ಯ ಮುಂದುವರಿಸಲು ನಿರ್ಧರಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿರುವ ಟೀಂ ಇಂಡಿಯಾ 50 ಓವರ್‌ಗಳಲ್ಲಿ 399 ರನ್ ಗಳಿಸಿದ್ದು, ಎದುರಾಳಿ ಆಸ್ಟ್ರೇಲಿಯಾಕ್ಕೆ 400 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: ಶ್ರೇಯಸ್, ಗಿಲ್ ದ್ವಿಶತಕ ಜೊತೆಯಾಟ, ಸೂರ್ಯನ ಆರ್ಭಟ – ಆಸೀಸ್‌ಗೆ ದಾಖಲೆಯ 400 ರನ್‌ಗಳ ಗುರಿ
Advertisement
Advertisement
ಚೇಸಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ 2ನೇ ಓವರ್‌ನಲ್ಲೇ ಕೇವಲ 9 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದ್ರೆ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ತಂಡಕ್ಕೆ ಚೇತರಿಕೆ ನೀಡಲು ಪ್ರಯತ್ನಿಸಿದ್ದರು. ಆಸೀಸ್ 9 ಓವರ್‌ಗಳಲ್ಲಿ 56 ರನ್ ಗಳಿಸಿ ಆಡುತ್ತಿದ್ದಂತೆ ಮಳೆ ಅಡ್ಡಿಯುಂಟು ಮಾಡಿತು.
Advertisement
Advertisement
ಸುಮಾರು 20 ನಿಮಿಷಗಳಿಂದ ಮಳೆ ಅಡ್ಡಿಯುಂಟು ಮಾಡಿದೆ. ಹಾಗಾಗಿ ಓವರ್ ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಟೀಂ ಇಂಡಿಯಾ ಬ್ಯಾಟಿಂಗ್ ವೇಳೆಯು ಮಳೆ ಅಡಚಣೆಯುಂಟುಮಾಡಿತ್ತು. ಇದನ್ನೂ ಓದಿ: Asian Games Women’s Cricket: ಬಾಂಗ್ಲಾ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ
Web Stories